For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ: ಫೋಟೋ ಶೇರ್ ಮಾಡಿದ ಕಿಂಗ್ ಖಾನ್

  |

  ಬಾಲಿವುಡ್ ಸ್ಟಾರ್ ನಟ, ಕಿಂಗ್ ಖಾನ್ ಶಾರುಖ್ ಖಾನ್ ಮನೆಯಲ್ಲಿ ಅನೇಕ ಹಿಂದೂ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಹಾಗೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿವರ್ಷ ಗಣಪನನ್ನು ಮನೆಗೆ ಕರೆತಂದು ಕೂರಿಸಿ ವಿಶೇಷ ಪೂಜೆ ಮಾಡಿ ಗಣೇಶನ ಆರಾಧನೆ ಮಾಡುತ್ತಾರೆ. ಈ ಬಾರಿ ಕೂಡ ಶಾರುಖ್ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಅಷ್ಟೆ ಉತ್ಸಾಹದಿಂದ ಆಚರಣೆ ಮಾಡಿದ್ದಾರೆ. ಅನಂತ ಚತುರ್ಥಿ ದಿನ ಗಣೇಶನಿಗೆ ವಿದಾಯ ಹೇಳುವ ಮೊದಲು ಗಣಪನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಶಾರುಖ್ ಖಾನ್.

  ಗಣೇಶನ ಫೋಟೋ ಶೇರ್ ಮಾಡಿ, ಎಲ್ಲರಿಗೂ ಒಳ್ಳೆಯದಾಲಿ ಎಂದು ಕೇಳಿಕೊಂಡಿದ್ದಾರೆ. ಗಣೇಶನ ಆಶೀರ್ವಾದ ಎಲ್ಲರಿಗೂ ಇರಲಿ ಎಂದು ಶಾರುಖ್ ಹೇಳಿದ್ದಾರೆ. ಗಣೇಶ ಮೂರ್ತಿ ಫೋಟೋ ಜೊತೆಗೆ ಶಾರುಖ್, "ಮುಂದಿನ ವರ್ಷ ಗಣಪತಿ ಬಪ್ಪ ಮೋರ್ಯನನ್ನು ಮತ್ತೆ ನೋಡುವವರೆಗೂ ಗಣೇಶನ ಆಶೀರ್ವಾದ ನಮ್ಮೆಲ್ರ ಮೇಲೆ ಇರಲಿ" ಎಂದು ಶಾರುಖ್ ಹೇಳಿದ್ದಾರೆ.

  ಪ್ರತಿವರ್ಷ ಶಾರುಖ್ ಖಾನ್ ತನ್ನ ಕುಟುಂಬದ ಜೊತೆ ಗಣಪತಿ ಹಬ್ಬ ಆಚರಣೆ ಮಾಡುತ್ತಾರೆ. ತನ್ನ ಕಿರಿಯ ಪುತ್ರ ಅಬ್ರಾಮ್ ಗಣೇಶನನ್ನು ಪ್ರಾರ್ಥಿಸುವ ಫೋಟೋವನ್ನು ಶೇರ್ ಮಾಡಿದ್ದರು. ಈ ಬಾರಿ ಕೂಡ ಅದ್ದೂರಿಯಾಗಿ ತನ್ನ ಮನೆಯಲ್ಲಿ ಗಣೇಶೋತ್ಸವ ಮಾಡಿದ್ದಾರೆ.

  ಇನ್ನು ಅಭಿಮಾನಿಗಳು ಶಾರುಖ್ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಶಾರುಖ್ ಕೊನೆಯದಾಗಿ 2018ರಲ್ಲಿ ಬಂದ ಜೀರೋ ಸಿನಿಮಾ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಜೀರೋ ಸೋಲಿನ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅಧಿಕೃತವಾಗಿ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಹಾಗಾಗಿ ಶಾರುಖ್ ಸಿನಿಮಾ ಯಾವಾಗ ಘೋಷಣೆಯಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  ಶಾರುಖ್ ಸದ್ಯ ಅಕ್ಷನ್ ಥ್ರಿಲ್ಲರ್ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ವಿಲನ್ ಆಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಪಠಾಣ್ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಈ ಸಿನಿಮಾ ಜೊತೆಗೆ ಶಾರುಖ್ ಇತ್ತೀಚಿಗಷ್ಟೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಈ ಸಿನಿಮಾದಲ್ಲಿ ಯನತಾರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸಿನಿಮಾಗೆ ಲಯನ್ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಇನ್ನು ಹೆಸರಿಡದ ಸಿನಿಮಾ ಕೂಡ ಶಾರುಖ್ ಬಳಿ ಇದೆ. ಆದರೆ ಯಾವುದೇ ಸಿನಿಮಾದ ಬಗ್ಗೆ ಶಾರುಖ್ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  English summary
  Bollywood Actor Shah Rukh Khan shares glimpse of Ganapati before visarjan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X