For Quick Alerts
  ALLOW NOTIFICATIONS  
  For Daily Alerts

  BREAKING: ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರನ ಬಂಧನ

  |

  ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಎನ್‌ಸಿಬಿಯು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದೆ.

  ಮುಂಬೈನಲ್ಲಿ ಕ್ರೂಸ್ ಶಿಪ್ ಒಂದರ ಮೇಲೆ ನಿನ್ನೆ ರಾತ್ರಿ ಎನ್‌ಸಿಬಿ ಹಾಗೂ ಮುಂಬೈ ಪೊಲೀಸರು ದಾಳಿ ನಡೆಸಿದ್ದರು. ಆ ಕ್ರೂಸ್‌ ಶಿಪ್ ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಸಹ ಇದ್ದರು. ಆರ್ಯನ್ ಹಾಗೂ ಇತರ 8 ಮಂದಿಯನ್ನು ನಿನ್ನೆಯೇ ವಶಕ್ಕೆ ಪಡೆದಿದ್ದ ಎನ್‌ಸಿಬಿ ಇಂದು ಬಂಧಿಸಿದೆ.

  ಹಲವು ಗಂಟೆಗಳ ವಿಚಾರಣೆ ಬಳಿಕ ಇಂದು ಮಧ್ಯಾಹ್ನದ ಬಳಿಕ ಆರ್ಯನ್ ಅನ್ನು ಬಂಧಿಸಲಾಗಿದ್ದು, ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ನಾಳೆ ಆರ್ಯನ್ ಹಾಗೂ ಇತರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಆರ್ಯನ್ ಪರ ವಕೀಲ ಸತೀಶ್ ಮಾನೆಶಿಂಧೆ ಎನ್‌ಸಿಬಿ ಕಚೇರಿಗೆ ಆಗಮಿಸಿದ್ದಾರೆ.

  ಆರ್ಯನ್ ಅನ್ನು ನಿನ್ನೆಯೇ ಪೊಲೀಸರು ವಶಕ್ಕೆ ಪಡೆದು ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆರ್ಯನ್‌ನ ಮೊಬೈಲ್ ಮಾಹಿತಿಗಳನ್ನು ಸಹ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಡ್ರಗ್ಸ್ ಜಾಲದೊಂದಿಗೆ ಆರ್ಯನ್‌ಗೆ ಸಂಪರ್ಕವಿದೆಯಂದು ತಿಳಿದು ಬಂದಿದೆ.

  ಆರ್ಯನ್ ಹಾಗೂ ಇತರರ ವಿಚಾರಣೆ ನಡೆವ ವೇಳೆಯೇ ಮುಂಬೈ ಎನ್‌ಸಿಬಿ ಕಚೇರಿಗೆ ಡ್ರಗ್ಸ್ ಪೆಡ್ಲರ್ ಒಬ್ಬನನ್ನು ಎನ್‌ಸಿಬಿ ಸಿಬ್ಬಂದಿ ಕರೆತಂದರು. ಅದೇ ವ್ಯಕ್ತಿ ನಿನ್ನೆ ನಡೆದ ಪಾರ್ಟಿಗೆ ಡ್ರಗ್ಸ್ ಪೂರೈಕೆ ಮಾಡಿದ್ದ ಎನ್ನಲಾಗುತ್ತಿದೆ.

  ಎನ್‌ಡಿಪಿಎಸ್‌ ಸೆಕ್ಷನ್ 27ರ ಅನ್ವಯ ಆರ್ಯನ್ ಅನ್ನು ಬಂಧಿಸಲಾಗಿದ್ದು, ಆರ್ಯನ್ ಜೊತೆಗೆ ಮೂವರನ್ನು ಸಹ ಬಂಧಿಸಲಾಗಿದೆ. ಅರ್ಬಾಜ್ ಖಾನ್ ಹಾಗೂ ಮುನ್-ಮುನ್ ಧಮೇಚ್ಛ ಸಹ ಬಂಧನಕ್ಕೆ ಒಳಪಟ್ಟಿದ್ದಾರೆ. ಇವರ ಜೊತೆಗೆ ಮಹಿಳೆಯೊಬ್ಬರು ಸಹ ಇದ್ದಾರೆ ಎನ್ನಲಾಗುತ್ತಿದೆ. ಬಂಧಿತರಿಗೆ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿದೆ. ಇಂದೇ ಈ ಮೂವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

  Shah Rukh Khan Son Aryan Arrested By NCB In Drugs Case

  ಮಗನ ಬಂಧನದ ಮಾಹಿತಿ ತಿಳಿಯುತ್ತಿದ್ದಂತೆ ಶಾರುಖ್ ಪತ್ನಿ ಗೌರಿ ಖಾನ್ ನ್ಯಾಯಾಲಯದ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ದೂರವಾಣಿ ಮೂಲಕ ಯಾರೊಟ್ಟಿಗೋ ಜೋರಾಗಿ ಮಾತನಾಡುತ್ತಿದ್ದ ಗೌರಿ ಖಾನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗನ ಪ್ರಕರಣ ಹೊರಬಿದ್ದಾಗಿನಿಂದಲೂ ಶಾರುಖ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಎಲ್ಲಿಯೂ ಕಾಣಿಸಿಕೊಂಡಿಲ್ಲ.

  ನಿನ್ನೆ ಕ್ರೂಸ್ ಶಿಪ್‌ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ, ಮುನ್‌ಮುನ್ ಧಮೇಚಾ, ನೂಪುರ್ ಸರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೊಕ್ಕರ್, ಗೋಮಿತ್ ಚೋಪ್ರಾ, ಅರ್ಬಾಜ್ ಮರ್ಚೆಂಟ್ ಅವರುಗಳನ್ನು ನಿನ್ನೆ ಎನ್‌ಸಿಬಿ ವಶಪಡಿಸಿಕೊಂಡಿತ್ತು. ಅದರಲ್ಲಿ ಇದೀಗ ಆರ್ಯನ್ ಖಾನ್, ಮುನ್‌ಮುನ್ ಧಮೇಚಾ ಹಾಗೂ ಅರ್ಬಾಜ್ ಖಾನ್ ಮರ್ಚೆಂಟ್ ಅನ್ನಷ್ಟೆ ಬಂಧಿಸಲಾಗಿದೆ.

  ಇವೆಂಟ್ ಆರ್ಗನೈಸ್ ಸಂಸ್ಥೆಯೊಂದು ಆ ಪಾರ್ಟಿಯನ್ನು ಅರೇಂಜ್ ಮಾಡಿತ್ತು, ಪಾರ್ಟಿಗೆ ಆರ್ಯನ್ ಅನ್ನು ಅರ್ಬಾಜ್ ಖಾನ್ ಮರ್ಚೆಂಟ್ ಕರೆದುಕೊಂಡು ಹೋಗಿದ್ದ, ಆರ್ಯನ್ ಆ ಪಾರ್ಟಿಯ ಗೆಸ್ಟ್ ಆಗಿದ್ದ ಎಂದು ಹೇಳಲಾಗುತ್ತಿದೆ. ಅರ್ಬಾಜ್ ಖಾನ್ ಮರ್ಚೆಂಟ್ ಮೇಲೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಆರ್ಯನ್ ವಿರುದ್ಧ ಅಕ್ರಮ ಮಾದಕ ವಸ್ತು ಸೇವನೆ ಅಡಿಯಲ್ಲಿ ಮಾತ್ರವೇ ಎಫ್‌ಐಆರ್ ದಾಖಲಿಸಲಾಗಿದೆ.

  English summary
  Shah Rukh Khan son Aryan Khan arrested by NCB in drugs case. He was detailed along with 8 others yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X