Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Pathaan Movie Release Live: 'ಪಠಾಣ್'ಗೆ ಅಲ್ಲಲ್ಲಿ ಪ್ರತಿಭಟನೆಯ ಬಿಸಿ
ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ 'ಪಠಾಣ್' ಸಿನಿಮಾ ಇಂದು (ಜನವರಿ 25) ಬಿಡುಗಡೆ ಆಗಿದೆ. ಹಲವು ಕಾರಣಗಳಿಗೆ ಈ ಸಿನಿಮಾ ಕುತೂಹಲ ಹುಟ್ಟಿಸಿದೆ.
ಬರೋಬ್ಬರಿ ಐದು ವರ್ಷಗಳ ಬಳಿಕ ಶಾರುಖ್ ಖಾನ್ ನಟನೆಯ ಸಿನಿಮಾ ಒಂದು ತೆರೆಗೆ ಬರುತ್ತಿರುವ ಕಾರಣ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. 2018 ರಲ್ಲಿ ತೆರೆ ಕಂಡಿದ್ದ 'ಜೀರೋ' ಸಿನಿಮಾ ಬಳಿಕ ಶಾರುಖ್ ಖಾನ್ ನಾಯಕ ನಟರಾಗಿ ನಟಿಸಿದ ಸಿನಿಮಾಗಳ್ಯಾವುವೂ ಬಿಡುಗಡೆ ಆಗಿರಲಿಲ್ಲ.
ಹಿಟ್ ಸಿನಿಮಾಗಳಿಲ್ಲದೆ ಬಸವಳಿದಿರುವ ಬಾಲಿವುಡ್ಗೆ 'ಪಠಾಣ್' ಸಿನಿಮಾ ಮರುಜೀವ ನೀಡಲಿದೆ ಎಂದು ಹಲವು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದು ಅದಕ್ಕೆ ತಕ್ಕಂತೆ ಸಿನಿಮಾದ ಅಡ್ವಾನ್ಸ್ ಬುಕಿಂಗ್, ಪ್ರಿ ರಿಲೀಸ್ ಸೇಲ್ ಎಲ್ಲವೂ ಜೋರಾಗಿ ನಡೆದಿದೆ. 'ಕೆಜಿಎಫ್' ಸೇರಿದಂತೆ ಹಲವು ದಾಖಲೆಗಳನ್ನು ಈ ಸಿನಿಮಾ ಮುರಿಯಲಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಹಾಗಾಗಿ ಈ ಸಿನಿಮಾದ ಅಂಕಿ-ಅಂಶಗಳು ಸಹ ಮಹತ್ವ ಪಡೆದುಕೊಂಡಿವೆ.
'ಪಠಾಣ್' ಸಿನಿಮಾದ ಬಿಡುಗಡೆ, ಟ್ವಿಟ್ಟರ್ ವಿಮರ್ಶೆ, ಪ್ರೇಕ್ಷಕರ ಅಭಿಪ್ರಾಯ, ಮೊದಲ ದಿನದ ಕಲೆಕ್ಷನ್, ಚಿತ್ರಮಂದಿರಗಳ ಬಳಿ ಅಭಿಮಾನಿಗಳ ಅಬ್ಬರ ಇತ್ಯಾದಿ ವಿವರಿಗಳು ಇಲ್ಲಿ ಕ್ಷಣ-ಕ್ಷಣಕ್ಕೂ ಲಭ್ಯವಾಗಲಿದೆ.
- Pathaan Review in Kannada : 4 ವರ್ಷಗಳ ಬಳಿಕ ಮತ್ತೆ ಹೀರೊ ಆದ ಶಾರುಖ್: ಜಾನ್.. ದೀಪಿಕಾ.. ಸಲ್ಮಾನ್ ಸೂಪರ್!
'ಪಠಾಣ್' ಸಿನಿಮಾ ಮೇಲೆ ಬಾಲಿವುಡ್ ಮಂದಿ ಅಷ್ಟೇ ಅಲ್ಲ. ಇಡೀ ವಿಶ್ವವೇ ಎದುರು ನೋಡುತ್ತಿತ್ತು. ನಾಲ್ಕು ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡುತ್ತಿರುವ ಕಿಂಗ್ ಖಾನ್ ಎಂಟ್ರಿ ಹೇಗಿರುತ್ತೆ ಎಂದು ಎದುರು ನೋಡುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಅಂದ್ಹಾಗೆ 'ಪಠಾಣ್' ಸಿನಿಮಾ ಪಕ್ಕಾ ಮಸಾಲಾ ಎಂಟರ್ಟೈನರ್ ಸಿನಿಮಾ. ದುಬಾರಿ ಆಕ್ಷನ್ ಸೀಕ್ವೆನ್ಸ್, ಹೀರೊ ವಿಲನ್ ನಡುವಿನ ಘರ್ಷಣೆ, ರೊಮ್ಯಾನ್ಸ್ ಈ ಸಿನಿಮಾದ ಹೈಲೈಟ್. ಈ ಸಿನಿಮಾ ಬಾಲಿವುಡ್ ಪ್ರೇಕ್ಷಕರನ್ನು ಮತ್ತೆ ಥಿಯೇಟರ್ನತ್ತ ಕರೆತರುವಲ್ಲಿ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ.
-
ಭಾರತದ ಅತಿ ಎತ್ತರದ ಪ್ರದೇಶವಾದ ಲದಾಕ್ನಲ್ಲಿನ ಅಪರೂಪದ 'ಟ್ರಾವೆಲಿಂಗ್ ಸಿನಿಮಾ ಹಾಲ್' 'ಪಿಕ್ಚರ್ ಟೈಮ್ ಡಿಜಿಫ್ಲೆಕ್ಸ್'ನಲ್ಲಿ 'ಪಠಾಣ್' ಸಿನಿಮಾ ಪ್ರದರ್ಶಿಸಲಾಗಿದೆ. ಲದಾಕ್ನ ಈ ಮೊಬೈಲ್ ಚಿತ್ರಮಂದಿರವನ್ನು ಭಾರತದ ಅತಿ ಎತ್ತರ ಪ್ರದೇಶದಲ್ಲಿನ ಚಿತ್ರಮಂದಿರ ಎಂದು ಪರಿಗಣಿಸಲಾಗಿದೆ.
-
'ಪಠಾಣ್' ಸಿನಿಮಾವನ್ನು ಕೆಲ ಕಿಡಿಗೇಡಿಗಳು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಯಾರೂ ಪೈರಸಿ ಮಾಡಬೇಡಿ, ನೋಡಬೇಡಿ ಎಂದು ಶಾರುಖ್ ಖಾನ್ ಮನವಿ ಮಾಡಿದ್ದರೂ ಸಹ ಕೆಲವರು ಪೈರಸಿ ಕಾಪಿಯನ್ನು ಅಪ್ಲೋಡ್ ಮಾಡಿದ್ದಾರೆ.
-
ಕಲಬುರ್ಗಿಯಲ್ಲಿ 'ಪಠಾಣ್' ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದ ಮೇಲೆ ಹಿಂದುಪರ ಸಂಘಟನೆಗಳ ಕೆಲ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ. ಕಿಡಿಗೇಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
-
ಬೆಂಗಳೂರು ಮಾತ್ರವೇ ಅಲ್ಲದೆ, ಇಂದೋರ್, ಬಿಹಾರ ಇನ್ನೂ ಕೆಲವು ಕಡೆಗಳಲ್ಲಿ 'ಪಠಾಣ್' ಸಿನಿಮಾದ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿವೆ. ಸಿನಿಮಾದ 'ಬೇಷರಮ್' ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿ ಡ್ಯಾನ್ಸ್ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.
-
'ಪಠಾಣ್' ಸಿನಿಮಾದ ವಿರುದ್ಧ ವಿಶ್ವ ಹಿಂದು ಪರಿಷತ್ನ ಕೆಲ ಸದಸ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಾರುಖ್ ಖಾನ್ನ ಪೋಸ್ಟರ್ಗಳನ್ನು ಸುಟ್ಟಿದ್ದಾರೆ.
-
ಭರ್ಜರಿ ಆರಂಭ ಪಡೆದ 'ಪಠಾಣ್' ಸಿನಿಮಾ, ಮೊದಲ ಶೋ ಮುಗಿಯುತ್ತಲೇ 300 ಶೋ ಹೆಚ್ಚಳ. ಒಟ್ಟು ಶೋಗಳ ಸಂಖ್ಯೆ 8000 ದಾಟಿದೆ ಎನ್ನಲಾಗುತ್ತಿದೆ.
- 'ಜೀರೊ' ಸೇಡು.. 'ಕೆಜಿಎಫ್ 2' ದಾಖಲೆ.. 'ಪಠಾಣ್' ಗೆದ್ದರೆ ಈ ಎಲ್ಲಾ ಸಿನಿಮಾಗಳ ದಾಖಲೆ ಉಡೀಸ್?
'ಪಠಾಣ್' ಸಿನಿಮಾ ಕ್ರೇಜ್ ನೋಡಿದ ಬಳಿಕ ಬಾಲಿವುಡ್ನಲ್ಲಿ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. 2018ರಲ್ಲಿ ತೆರೆಕಂಡಿದ್ದ 'ಜೀರೊ' ರಾಕಿಂಗ್ ಸ್ಟಾರ್ ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಎದುರು ಸೋಲುಂಡಿತ್ತು. ಈ ಸೇಡು ತೀರಿಸಿಕೊಳ್ಳಲು 'ಕೆಜಿಎಫ್ 2' ಚಿತ್ರದ ಮೊದಲ ದಿನದ ದಾಖಲೆಯನ್ನು ಶಾರುಖ್ ಮುರಿಯಬಹುದು ಎಂದು ಅಂದಾಜಿಸಲಾಗಿದೆ. ಅಸಲಿಗೆ 'ಕೆಜಿಎಫ್ 2' Vs 'ಪಠಾಣ್' ಫೈಟ್ ಏನು? ದಾಖಲೆಗಳು ಉಡೀಸ್ ಆಗುತ್ತಾ? ಬಾಲಿವುಡ್ ಲೆಕ್ಕಾಚಾರ ಏನು ಅನ್ನೋದನ್ನು ತಿಳಿಯಲು ಕೆಳಗಿನ ಫೋಟೊ ಮೇಲೆ ಕ್ಲಿಕ್ ಮಾಡಿ..
-
'ಪಠಾಣ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿ ಬಂದ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಎಂಟ್ರಿ, ಶಾರುಖ್- ಸಲ್ಲು ಜುಗಲ್ಬಂದಿ ಸನ್ನಿವೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲುವ ಸುಳಿವು ಸಿಗುತ್ತಿದೆ.
-
'ಪಠಾಣ್' ಸಿನಿಮಾ ಬಿಡುಗಡೆಗೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಬಿಹಾರದ ಬಗಲ್ಪುರ್ದಲ್ಲಿ ಪ್ರತಿಭಟನಾಕಾರರು ಚಿತ್ರದ ಪೋಸ್ಟರ್ಗಳನ್ನು ಹರಿದು ಬೆಂಕಿ ಹಚ್ಚುತ್ತಿದ್ದಾರೆ. 'ಬೇಷರಂ ರಂಗ್' ಹಾಡಿನಿಂದ ಸಿನಿಮಾ ಬಿಡುಗೆಗೂ ಮೊದಲೇ ವಿವಾದ ಸೃಷ್ಟಿಸಿತ್ತು. ಸಿನಿಮಾ ರಿಲೀಸ್ ತಡೆಯುವುದಾಗಿ ಕೆಲವರು ಹೇಳಿದ್ದರು.
-
ಬೆಳ್ಳಂ ಬೆಳಗ್ಗೆ ಥಿಯೇಟರ್ಗಳಲ್ಲಿ 'ಪಠಾಣ್' ಆರ್ಭಟ ಶುರುವಾಗಿದೆ. ರಿಲೀಸ್ಗೂ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ನಿಂದಲೇ ಸಿನಿಮಾ ದಾಖಲೆ ಬರೆದಿತ್ತು. ಈಗಾಗಲೇ ಅಭಿಮಾನಿಗಳು ಥಿಯೇಟರ್ಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ.ಕೆಲವೇ ನಿಮಿಷಗಳಲ್ಲಿ ಸಿನಿಮಾ ಹೇಗಿದೆ ಎನ್ನುವುದರ ರಿಪೋರ್ಟ್ ಸಿಗಲಿದೆ.
-
'ಪಠಾಣ್' ಸಿನಿಮಾ ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ನಿಂದಲೇ ಈಗಾಗಲೇ 25 ಕೋಟಿಗೂ ಹೆಚ್ಚು ಹಣವನ್ನು ಸಿನಿಮಾ ಕಲೆಕ್ಷನ್ ಮಾಡಿದೆ. ಮೊದಲ ದಿನದ ಕಲೆಕ್ಷನ್ನಲ್ಲಿ ದಾಖಲೆ ಬರೆವ ಎಲ್ಲ ಸಾಧ್ಯತೆಗಳೂ ಇವೆ.
-
'ಪಠಾಣ್' ಸಿನಿಮಾವನ್ನು ಕೆಲವು ವಿವಾದಗಳು ಸಹ ಸುತ್ತುವರೆದಿವೆ. 'ಬೇಷರಮ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಿಕಿನಿ ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣವನ್ನಿಟ್ಟುಕೊಂಡು ಭಜರಂಗದಳ ಸೇರಿದಂತೆ ಇನ್ನೂ ಕೆಲವು ಹಿಂದುಪರ ಸಂಘಟನೆಗಳು ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದು, ಇದು ಸಿನಿಮಾದ ಮೇಲೆ ಪರಿಣಾಮ ಬೀರಬಹುದೆ ಎಂಬ ಕುತೂಹಲ ಇದೆ.
-
'ಪಠಾಣ್' ಸಿನಿಮಾ ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾವನ್ನು ಆಕ್ಷನ್ ಸಿನಿಮಾಗಳ ತಜ್ಞ ಎಂದೇ ಖ್ಯಾತಿಗಳಿಸಿರುವ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರದ್ದೇ ನಿರ್ದೇಶನದ 'ವಾರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದಾರೆ.