ಆರ್ಯನ್ ಖಾನ್ ಬಂಧನ: ವಿದೇಶಿ ಚಿತ್ರೀಕರಣ ಕ್ಯಾನ್ಸಲ್ ಮಾಡಿದ ಶಾರುಖ್ ಖಾನ್

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಖ್ಯಾತ ನಟ ಶಾರುಖ್ ​ಖಾನ್​ಪುತ್ರ ಆರ್ಯನ್ ​ಖಾನ್ ​ಮತ್ತು ಸಹ ಆರೋಪಿಗಳೀಗ ಎನ್ ಸಿ ಬಿ ವಶದಲ್ಲಿದ್ದಾರೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ಪಾರ್ಟಿ ಮಾಡುವಾಗ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ಗೆಳೆಯರಾದ ಅರ್ಬಾಜ್ ಮರ್ಚಂಟ್, ಮೂನ್ ಮುನ್ ಧಾಮೇಚಾ ಸೇರಿದಂತೆ ಅನೇಕರನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳನ್ನು ಅಕ್ಟೋಬರ್ 11ರ ವರೆಗೆ ವಶಕ್ಕೆ ಕೊಡುವಂತೆ ಎನ್ ಸಿ ಬಿ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಅಕ್ಟೋಬರ್ 7ರ ವರೆಗೆ ಮಾತ್ರ ವಿಸ್ತರಿಸಿದೆ.

ಮಗನ ಬಂಧನದಿಂದ ಶಾರುಖ್ ಕಂಗಾಲಾಗಿದ್ದಾರೆ. ಮಗನ ಡ್ರಗ್ಸ್ ಪ್ರಕರಣದಿಂದ ಸೂಪರ್ ಸ್ಟಾರ್ ಶಾರುಖ್ ಮುಜುಗರ ಅನುಭವಿಸುವಂತಾಗಿದೆ. ಶಾರುಖ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಶಾರುಖ್ ಇದೀಗ ಪುತ್ರನ ಬಂಧನದಿಂದ ಚಿತ್ರೀಕರಣದಲ್ಲಿಯೂ ಭಾಗಿಯಾಗದೆ ಇರುವಂತಾಗಿದೆ.

ಅಕ್ಟೋಬರ್ 10ರಂದು ಶಾರುಖ್ ಪಾಠಣ್ ಸಿನಿಮಾದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹಾರಬೇಕಿತ್ತು. ಆದರೀಗ ಮಗನಿಂದ ವಿದೇಶಿ ಚಿತ್ರೀಕರಣ ಕ್ಯಾನ್ಸಲ್ ಮಾಡಲಿದೆ ಎನ್ನಲಾಗುತ್ತಿದೆ. ಪಠಾಣ್ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ದೀಪಿಕಾ ಮತ್ತು ಶಾರುಖ್ ಇಬ್ಬರು ಸ್ಪೇನ್‌ಗೆ ಹೋಗಬೇಕಿತ್ತು. ಅಲ್ಲಿ ಚಿತ್ರದ ರೊಮ್ಯಾಂಟಿಕ್ ಮತ್ತು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಪ್ಲಾನ್ ಮಾಡಲಾಗಿತ್ತು. ಆದರೀಗ ಆರ್ಯನ್ ಬಂಧನದಿಂದ ಶಾರುಖ್ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವ ಪ್ಲಾನ್ ಸದ್ಯಕ್ಕೆ ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

Shah rukh khan starrer Pathan movie shooting postponed amid Aryan Khan drug controversy

ನಿರ್ಮಾಪಕರ ಪ್ರಕಾರ ಶಾರುಖ್ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ ಎಂದರೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಈ ಪ್ರಕರಣ ಇತ್ಯರ್ಥ ಆದ ಬಳಿಕ ಚಿತ್ರೀಕರಣ ಪ್ಲಾನ್ ಮಾಡಲಾಗುತ್ತೆ. ಮುಂದಿನ ದಿನಾಂಕದ ಬಗ್ಗೆ ಸದ್ಯದಲ್ಲೇ ಪ್ಲಾನ್ ಮಾಡುವುದಾಗಿ ಹೇಳಿದ್ದಾರೆ ಎನ್ನುವುದು ವರದಿಯಾಗಿದೆ. ಪಠಾಣ್ ಸಿನಿಮಾ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬರುತ್ತಿದೆ.

ಶಾರುಖ್ ಖಾನ್ ಸುಮಾರು ನಾಲ್ಕು ವರ್ಷಗಳ ಬಳಿಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ವರ್ಷಗಳ ಬಳಿಕ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಶಾರುಖ್ ಪಠಾಣ್ ಮತ್ತು ತಮಿಳು ನಿರ್ದೇಶಕ ಆಟ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಸಿನಿಮಾ ಕೂಡ ಶಾರುಖ್ ಬಳಿ ಇದೆ. ಪಠಾಣ್ ಮತ್ತು ಆಟ್ಲಿ ಸಿನಿಮಾಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಆದರೀಗ ಪುತ್ರನ ಬಂಧನ ಶಾರುಖ್ ಸಿನಿಮಾದ ಮೇಲು ಎಫೆಕ್ಟ್ ಆಗಿದೆ.

More from Filmibeat

English summary
Shah Rukh Khan starrer Pathan movie shooting postponed amid Aryan Khan drug controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X