ಫೋನ್ ರಿಸೀವ್ ಮಾಡಿಲ್ಲ ಎಂದು ಬಾಲ್ಕನಿಯಿಂದ ಫೋನ್ ಎಸೆದ ಶಾರುಖ್ ಖಾನ್: ವಿಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿಲ್ಲವಾದರೂ ಶಾರುಖ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಒಂದಲ್ಲೊಂದು ವಿಚಾರಕ್ಕೆ ಶಾರುಖ್ ಸುದ್ದಿಯಾಗುತ್ತಿರುತ್ತಾರೆ. ಜೀರೋ ಸಿನಿಮಾದ ಬಳಿಕ ಶಾರುಖ್ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಆದರೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಸಿನಿಮಾ ಮಾಡಿಲ್ಲ ಎಂದರೂ ಅವರ ಬೇಡಿಕೆ ಕೊಂಚವೂ ಕಡಿಮೆಯಾಗಿಲ್ಲ.

ಇತ್ತೀಚಿಗೆ ಶಾರುಖ್ ಡಿಜಿಟಲ್ ಲೋಕಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ಏನು ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ ಶೀಘ್ರದಲ್ಲೇ ಶಾರುಖ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅವರ ಯೋಜನೆಯಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಈ ಬಗ್ಗೆ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೀಗ ಶಾರುಖ್ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಶಾರುಖ್ ಅವರು ಮನ್ನತ್ ಮನೆ ಮುಂದೆ ಅಭಿಮಾನಿಗಳ ದಂಡೇ ನೆರೆದಿದೆ. ಶಾರುಖ್ ಬಾಲ್ಕನಿಯಲ್ಲಿ ನಿಂತಿದ್ದಾರೆ. ಆ ಸಮಯದಲ್ಲಿ ಶಾರುಖ್ ಕೋಪಗೊಂಡು ಮೊಬೈಲ್ ಎಸೆದಿರುವ ವಿಡಿಯೋ ಈಗ ವೈರಲ್ ಆಗಿದೆ. ಅಂದಹಾಗೆ ಶಾರುಖ್ ಯಾಕೆ ಹೀಗೆ ಮಾಡಿದರು ಅಂತ ಅಚ್ಚರಿ ಪಡಬೇಡಿ. ಇದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜಾಹೀರಾತಾಗಿದೆ.

Shah Rukh Khan throws his phone off the balcony

ತನ್ನ ಮನೆಯ ಮುಂದೆ ಅಭಿಮಾನಿಗಳ ಸಾಗರ. ಶಾರುಖ್ ತನ್ನ ಪಕ್ಕದಲ್ಲಿ ನಿಂತಿರುವ ಪಿಎ (ರಾಜೇಶ್ ಜೈನ್) ಬಳಿ ಶಾರುಖ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅವರಿಂದ ಕರೆ ಬಂದಿದೆಯೇ ಎಂದು ಕೇಳಿದರು. ಪಿಎ ಇಲ್ಲ ಎಂದು ಹೇಳಿದರು. ಸಿಟ್ಟಾಗುವ ಶಾರುಖ್​ ಮೊಬೈಲ್​ ಅನ್ನು ಬಾಲ್ಕನಿಯಿಂದ ಎಸೆಯುತ್ತಾರೆ. ಮತ್ತೊಂದು ಜಾಹೀರಾತಿನಲ್ಲಿ "ನಿಮ್ಮೊಬ್ಬರನ್ನು ಬಿಟ್ಟು ಉಳಿದೆಲ್ಲ ಸ್ಟಾರ್​ಗಳ ಸಿನಿಮಾ ಹಾಟ್​ಸ್ಟಾರ್​ನಲ್ಲಿದೆ" ಎನ್ನುತ್ತಾರೆ ಶಾರುಖ್​ ಪಿಎ. ಈ ವಿಡಿಯೋ ಈಗ ವೈರಲ್ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಅಂದಹಾಗೆ ಇದೀಗ ಒಟಿಟಿ ಕಾಲ. ಈಗಾಗಲೇ ಒಟಿಟಿ ಪ್ಲಾಟ್ ಫಾರ್ಮ್ ಸಿನಿ ಅಭಿಮಾನಿಗಳನ್ನು ಸೆಳೆಯುತ್ತಿದೆ. ಆದರೆ ಶಾರುಖ್ ಇದುವರೆಗೂ​ ಓಟಿಟಿ ಪ್ರವೇಶಿಸಿಲ್ಲ. ಇತ್ತ ಅವರ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತಿಲ್ಲ. ಹಾಗಾಗಿ ಅವರನ್ನು ಓಟಿಟಿಗೆ ಕರೆದುಕೊಂಡು ಬರಲು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಸಂಸ್ಥೆಯ ಹೊಸ ಪ್ಲಾನ್ ಇದಾಗಿದೆ. ಅದಕ್ಕೆ ಶಾರುಖ್​ ಕೂಡ ಒಪ್ಪಿದ್ದು, ಜಾಹೀರಾತುಗಳ ಮೂಲಕ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಇತ್ತೀಚೆಗೆ ಸಲ್ಮಾನ್​ ಖಾನ್​ ಕೂಡ ಕೈ ಜೋಡಿಸಿದ್ದರು. ಜಾಹೀರಾತನ್ನು ಶೇರ್​ ಮಾಡಿಕೊಂಡಿರುವ ಅವರು, "ಶಾರುಖ್​ ಖಾನ್​ಗೆ ಸ್ವಾಗತ ಮಾಡುವುದಿಲ್ಲವೇ?" ಎಂದು ಒಂದೇ ಒಂದು ವಾಕ್ಯ ಕ್ಯಾಪ್ಷನ್​ ನೀಡಿದ್ದರು.

ಈ ಜಾಹೀರಾತು ನೋಡಿ ಶಾರುಖ್ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಏನಿರಬಹುದು ಎಂದ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ದಯವಿಟ್ಟು ಸಿನಿಮಾ ಘೋಷಣೆ ಮಾಡಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ಶಾರುಖ್​ ಸದ್ಯ 'ಪಠಾಣ್​' ಹಾಗೂ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಟ್ಲೀ ಸಿನಿಮಾಗೆ ಲಯನ್ ಎಂದು ಟೈಟಲ್ ಇಡಲಾಗಿದೆ ಎನನ್ಲಾಗುತ್ತಿದೆ. ಸದ್ಯ ಅಟ್ಲೀ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶಾರುಖ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಆದರೆ ಈ ಸಿನಿಮಾ ಬಗ್ಗೆಯೂ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ನಯನತಾರಾ ಬಾಲಿವುಡ್‌ನಲ್ಲಿ ನಟಿಸುತ್ತಿದ್ದು, ಶಾರುಖ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ನಟಿ ಪ್ರಿಯಮಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

More from Filmibeat

English summary
Bollywood Actor Shah Rukh Khan throws his phone off the balcony after OTT platform refuses to answer his calls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X