For Quick Alerts
  ALLOW NOTIFICATIONS  
  For Daily Alerts

  ಬುರ್ಜ್ ಖಲೀಫಾ ಒಳಗೆ ಶಾರುಖ್ ಖಾನ್ ಹೊಡಿ-ಬಡಿ!

  |

  ಸುದೀಪ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷವಾದ ಕಾರಣ ದುಬೈನ ಬುರ್ಜ್‌ ಖಲೀಫಾ ಐಶಾರಾಮಿ ಹೋಟೆಲ್‌ ಮೇಲೆ ವಿಶೇಷ ವಿಡಿಯೋ ಪ್ರಸಾರ ಮಾಡಿದ್ದು ಹಾಗೂ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಪ್ರಸಾರ ಮಾಡಿದ್ದು ಸಖತ್ ಸುದ್ದಿಯಾಗಿದೆ.

  ಇದರ ಬೆನ್ನಲ್ಲೇ ಅದೇ ಬುರ್ಜ್‌ ಖಲೀಫಾ ಒಳಗೆ ಶಾರುಖ್ ಖಾನ್ ಹೊಡಿ-ಬಡಿ ಎನ್ನುತ್ತಿದ್ದಾರೆ. ಹೌದು, ಪ್ರಸ್ತುತ ದುಬೈನಲ್ಲಿರುವ ಶಾರುಖ್ ಖಾನ್, ವಿಶ್ವದ ಐಶಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಬುರ್ಜ್ ಖಲೀಫಾ ಒಳಗೆ ಚಿತ್ರೀಕರಣ ಮಾಡಲಿದ್ದಾರೆ.

  ಶಾರುಖ್ ಖಾನ್ ಪ್ರಸ್ತುತ 'ಪಠಾಣ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ದುಬೈ ನಲ್ಲಿ ನಡೆಯುತ್ತಿದೆ. ದುಬೈನಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ದುಬೈನ ರಸ್ತೆಗಳಲ್ಲಿ ಮಾತ್ರವೇ ಅಲ್ಲದೆ, ಬುರ್ಜ್ ಖಲೀಫಾದ ಒಳಗೂ ಸಹ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

  ಭಾರತದ ಮೊದಲ ಸಿನಿಮಾ ಆಗಲಿದೆ 'ಪಠಾಣ್'

  ಭಾರತದ ಮೊದಲ ಸಿನಿಮಾ ಆಗಲಿದೆ 'ಪಠಾಣ್'

  ಬುರ್ಜ್ ಖಲೀಫಾ ಒಳಗೆ ಚಿತ್ರೀಕರಣ ಮಾಡುತ್ತಿರುವ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿ 'ಪಠಾಣ್' ಗೆ ಸಿಗಲಿದೆ. ಹೆಚ್ಚು ಹಾಲಿವುಡ್ ಸಿನಿಮಾಗಳೂ ಸಹ ಬುರ್ಜ್ ಖಲೀಫಾ ಒಳಗೆ ಚಿತ್ರೀಕರಣ ಮಾಡಿಲ್ಲ. ಮಿಷನ್ ಇಂಪಾಸಿಬಲ್ ಹಾಗೂ ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾಗಳು ಬುರ್ಜ್‌ ಖಲೀಫಾದ ಒಳಗೆ ಚಿತ್ರೀಕರಣ ಮಾಡಿದ್ದವು.

  ಪಕ್ಕಾ ಆಕ್ಷನ್ ಸಿನಿಮಾ 'ಪಠಾಣ್'

  ಪಕ್ಕಾ ಆಕ್ಷನ್ ಸಿನಿಮಾ 'ಪಠಾಣ್'

  ಶಾರುಖ್ ಖಾನ್ ಪ್ರಸ್ತುತ ನಟಿಸುತ್ತಿರುವ 'ಪಠಾಣ್' ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಗೂಡಚಾರಿ ಪಾತ್ರದಲ್ಲಿ ಶಾರುಖ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಹೃತಿಕ್ ರೋಷನ್ ಸಹ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಸಿನಿಮಾದ ನಾಯಕಿಯಾಗಿದ್ದು, ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದಾರೆ.

  ಜೂನ್ ವೇಳೆಗೆ ಚಿತ್ರೀಕರಣ ಅಂತ್ಯ

  ಜೂನ್ ವೇಳೆಗೆ ಚಿತ್ರೀಕರಣ ಅಂತ್ಯ

  ಇದೇ ಜೂನ್ ವೇಳೆಗೆ ಚಿತ್ರೀಕರಣ ಅಂತ್ಯವಾಗಲಿದ್ದು, ದೀಪಾವಳಿ ಹಬ್ಬದ ವೇಳೆಗೆ ಸಿನಿಮಾವನ್ನು ಬಿಡುಗಡೆ ಮಾಡುವ ಸಂಭವ ಇದೆ. ಈ ಸಿನಿಮಾದ ಬಳಿಕ ರಾಜ್‌ಕುಮಾರ್ ಹಿರಾನಿ ಜೊತೆ ಸಿನಿಮಾ ಮಾಡಲಿದ್ದಾರೆ ಶಾರುಖ್ ಖಾನ್.

  ಸುಶಾಂತ್ ಸಿಂಗ್ ಸಂಬಂಧಿ ಮೆಲೆ ಗುಂಡಿನ ಧಾಳಿ | Filmibeat kannada
  ಬುರ್ಜ್ ಖಲೀಫಾ ಮೇಲೆ ಶಾರುಖ್ ಹೆಸರು

  ಬುರ್ಜ್ ಖಲೀಫಾ ಮೇಲೆ ಶಾರುಖ್ ಹೆಸರು

  ಬುರ್ಜ್‌ ಖಲೀಫಾದ ವತಿಯಿಂದ ಶಾರುಖ್ ಖಾನ್ ಗೆ ಗೌರವ ನೀಡಲಾಗಿತ್ತು. ಬುರ್ಜ್ ಖಲೀಫಾದ ಮೇಲೆ ಶಾರುಖ್ ಖಾನ್ ರ ಚಿತ್ರ, ಹೆಸರು, ಸಿನಿಮಾಗಳ ಕೆಲವು ದೃಶ್ಯಗಳನ್ನು ಪ್ರಸಾರ ಮಾಡಲಾಗಿತ್ತು. ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಹೀಗೆ ಬುರ್ಜ್ ಖಲೀಫಾ ಮೇಲೆ ಶಾರುಖ್ ಹೆಸರು, ಚಿತ್ರ ಪ್ರಕಟಿಸಲಾಗಿತ್ತು. ಶಾರುಖ್ ಅಭಿಮಾನಿಯೊಬ್ಬ ಈ ಉಡುಗೊರೆಯನ್ನು ಶಾರುಖ್‌ಗೆ ನೀಡಿದ್ದರು.

  English summary
  Actor Shah Rukh Khan to shoot a action scene in Dubai's Burj Khalifa. He shooting for his movie Pathan in Dubai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X