ಶಾರುಖ್ ಖಾನ್ ತಂದೆ-ತಾಯಿ ಸಮಾಧಿ ಇರುವುದೆಲ್ಲಿ; ಕಿಂಗ್ ಖಾನ್ ದಿಢೀರ್ ಭೇಟಿ ನೀಡಿದ್ದೇಕೆ?

ಬಾಲಿವುಡ್ ನ ಸೂಪರ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಇತ್ತೀಚಿಗೆ ಅಮ್ಮ-ಅಪ್ಪನ ಸಮಾಧಿಗೆ ಜಾಗಕ್ಕೆ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ ಸದ್ಯ ಪತ್ನಿ ಮೂವರು ಮಕ್ಕಳ ಜೊತೆ ಮುಂಬೈನಲ್ಲಿ ವಾಸವಾಗಿದ್ದಾರೆ. ಶಾರುಖ್ ಮುಂಬೈನಲ್ಲಿ ನೆಲೆಸುವ ಮೊದಲು ದೆಹಲಿಯಲ್ಲಿ ತಂದೆ-ತಾಯಿಯ ಜೊತೆ ವಾಸವಾಗಿದ್ದರು.

ಶಾರುಖ್ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದಾರೆ. ಬಳಿಕ ತಾಯಿ ಕೂಡ ಬಾರದ ಲೋಕಕ್ಕೆ ಹೊರಟು ಹೋದರು. 1990ರಲ್ಲಿ ಶಾರುಖ್ ತಾಯಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಶಾರುಖ್ ಬಳಿಕ ದೆಹಲಿಯಿಂದ ಮುಂಬೈಗೆ ಬಂದು ನೆಲೆಸುತ್ತಾರೆ.

ದೆಹಲಿಯಲ್ಲಿ ಶಾರುಖ್ ಹೆತ್ತವರ ಸಮಾಧಿ

ದೆಹಲಿಯಲ್ಲಿ ಶಾರುಖ್ ಹೆತ್ತವರ ಸಮಾಧಿ

ಆದರೆ ಶಾರುಖ್ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಮತ್ತು ತಾಯಿ ಲತೀಫ್ ಫಾತಿಮಾ ಖಾನ್ ಅವರ ಸಮಾಧಿ ದೆಹಲಿಯಲ್ಲಿದೆ. ಶಾರುಖ್ ದೆಹಲಿಗೆ ಹೋದಾಗಲೆಲ್ಲ ತಂದೆ-ತಾಯಿಯ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಬರುತ್ತಾರೆ.

ಸಮಾಧಿ ಜಾಗಕ್ಕೆ ಭೇಟಿ ನೀಡಿದ ಕಿಂಗ್ ಖಾನ್

ಸಮಾಧಿ ಜಾಗಕ್ಕೆ ಭೇಟಿ ನೀಡಿದ ಕಿಂಗ್ ಖಾನ್

ಇತ್ತೀಚಿಗೆ ಶಾರುಖ್ ದೆಹಲಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ತಂದೆ-ತಾಯಿಯ ಸಮಾಧಿ ಜಾಗಕ್ಕೆ ಹೋಗಿ ಹೆತ್ತವರಿಗೆ ಗೌರವ ಸಲ್ಲಿಸಿದ್ದಾರೆ. ಶಾರುಖ್ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೆಹಲಿಗೆ ಹೋದಾಗೆಲ್ಲಾ ತಂದೆ-ತಾಯಿ ಇರುವ ಜಾಗಕ್ಕೆ ಹೋಗುತ್ತಾರೆ

ದೆಹಲಿಗೆ ಹೋದಾಗೆಲ್ಲಾ ತಂದೆ-ತಾಯಿ ಇರುವ ಜಾಗಕ್ಕೆ ಹೋಗುತ್ತಾರೆ

ದೆಹಲಿಗೆ ಹೋದಾಗಲೆಲ್ಲ ತಂದೆ-ತಾಯಿ ಇರುವ ಜಾಗಕ್ಕೆ ಹೋಗಿ ಗೌರವ ಸಲ್ಲಿಸುವ ಬಗ್ಗೆ ಸಂದರ್ಶನವೊಂದರಲ್ಲಿ ಶಾರುಖ್ ಬಹಿರಂಗ ಪಡಿಸಿದ್ದರು. ಸದ್ಯ ಶಾರುಖ್ ಮುಂಬೈನಲ್ಲಿ ಇದ್ದರು ದೆಹಲಿಯ ಸಂಬಂಧವನ್ನು ದೂರ ಮಾಡಲು ಸಾಧ್ಯವಾಗಿಲ್ಲ. ಇಂದು ದೊಡ್ಡ ಸ್ಟಾರ್ ನಟನಾಗಿ ಗುರುತಿಸಿಕೊಂಡರೂ ಸಾಮಾನ್ಯರಾಗಿ ದೆಹಲಿಗೆ ಭೇಟಿ ನೀಡಿ, ತಂದೆ-ತಾಯಿಗೆ ಗೌರವ ಸಲ್ಲಿಸುತ್ತಾರೆ.

Recommended Video

ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada
ವರ್ಷಗಳ ಬಳಿಕ ಮತ್ತ ಸಿನಿಮಾ ಮಾಡುತ್ತಿರುವ ಶಾರುಖ್

ವರ್ಷಗಳ ಬಳಿಕ ಮತ್ತ ಸಿನಿಮಾ ಮಾಡುತ್ತಿರುವ ಶಾರುಖ್

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶಾರುಖ್ ಮೂರು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಗೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood actor Shah Rukh Khan visits his parents Grave in Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X