For Quick Alerts
  ALLOW NOTIFICATIONS  
  For Daily Alerts

  ಸಹೋದರನ ಬಂಧನದ ನಡುವೆಯೂ ತಾಯಿಗೆ ವಿಶ್ ಮಾಡಿದ ಶಾರುಖ್ ಪುತ್ರಿ ಸುಹಾನಾ ಖಾನ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕುಟುಂಬ ಸದ್ಯ ಆರ್ಯನ್ ಖಾನ್ ಬಂಧನದ ಶಾಕಿಂಗ್ ನಲ್ಲಿದ್ದಾರೆ. ಡ್ರಗ್ಸ್ ಪ್ರಕರಣದ ಸಂಬಂಧ ಶಾರುಖ್ ಪುತ್ರ ಆರ್ಯನ್ ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 3ರಿಂದ ಆರ್ಯನ್ ಬಂಧನದಲ್ಲಿದ್ದಾರೆ. ಎನ್‌ಸಿಬಿ ವಶದಲ್ಲಿದ್ದ ಆರ್ಯನನ್ನು ನಿನ್ನೆ ಅಕ್ಟೋಬರ್ 7ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  ಆರ್ಯನ್ ಬಂಧನದಿಂದ ಶಾರುಖ್ ಕುಟುಂಬ ಮೌನಕ್ಕೆ ಶರಣಾಗಿದೆ. ಯಾರು ಕೂಡ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೀಗ ಶಾರುಖ್ ಪುತ್ರಿ ಸುಹಾನಾ ಖಾನ್ ಸಹೋದರನ ಬಂಧನದ ಬಳಿಕ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಅದು ತನ್ನ ತಾಯಿ ಗೌರಿ ಖಾನ್ ಗೆ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಇಂದು ಶಾರುಖ್ ಪತ್ನಿ ಗೌರಿ ಖಾನ್ ಹುಟ್ಟುಹಬ್ಬ. 51ನೇ ವಸಂತಕ್ಕೆ ಕಾಲಿಟ್ಟಿರುವ ಗೌರಿ ಖಾನ್ ಸಂತೋಷದಿಂದ, ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಮಗನ ಬಂಧನದಿಂದ ಈ ಬಾರಿಯ ಹುಟ್ಟುಹಬ್ಬ ಗೌರಿ ಖಾನ್ ಪಾಲಿಗೆ ತುಂಬಾ ನೋವಿನದದ್ದಾಗಿದೆ. ಆದರೂ ಬಾಲಿವುಡ್ ನ ಅನೇಕ ಮಂದಿ ಶಾರುಖ್ ಪತ್ನಿಗೆ ವಿಶ್ ಮಾಡುತ್ತಿದ್ದಾರೆ. ಮುಂದೆ ಓದಿ..

  ತಾಯಿಗೆ ವಿಶ್ ಮಾಡಿದ ಸುಹಾನಾ ಖಾನ್

  ತಾಯಿಗೆ ವಿಶ್ ಮಾಡಿದ ಸುಹಾನಾ ಖಾನ್

  ಸಹೋದರನ ಬಂಧನದ ನಡುವೆಯೂ ಸುಹಾನಾ ಖಾನ್ ಪ್ರೀತಿಯ ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಹಾನಾ ವಿಶ್ ಮಾಡಿದ್ದಾರೆ. ಗೌರಿ ಖಾನ್ ಮತ್ತು ಶಾರುಖ್ ಖಾನ್ ಅವರ ಹಳೆಯ ಫೋಟೋ ಶೇರ್ ಮಾಡಿ, "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ" ಎಂದು ಹೇಳಿದ್ದಾರೆ. ಜೊತೆಗೆ ಹಾರ್ಟ್ ಇಮೋಜಿ ಹಾಕಿದ್ದಾರೆ.

  ಮುದ್ದಾದ ಫೋಟೋ ಶೇರ್ ಮಾಡಿದ ಸುಹಾನಾ

  ಮುದ್ದಾದ ಫೋಟೋ ಶೇರ್ ಮಾಡಿದ ಸುಹಾನಾ

  ಸುಹಾನಾ ಶೇರ್ ಮಾಡಿರುವ ಫೋಟೋದಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರನ್ನು ಅಪ್ಪಿಕೊಂಡಿದ್ದಾರೆ. ಈ ಮುದ್ದಾದ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. ಅನೇಕರು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ನಟಿ ಅನನ್ಯಾ ಪಾಂಡೆ ಕೂಡ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.

  ಬಂಧನದಲ್ಲಿ ಆರ್ಯನ್ ಖಾನ್

  ಬಂಧನದಲ್ಲಿ ಆರ್ಯನ್ ಖಾನ್

  ಅಕ್ಟೋಬರ್ 2ರಂದು ಆರ್ಯನ್ ಖಾನ್ ನನ್ನು ಎನ್‌ಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡುವಾಗ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ಗೆಳೆಯರಾದ ಅರ್ಬಾಜ್ ಮರ್ಚಂಟ್, ಮುನ್ ಮುನ್ ಧಮೇಚಾ ಸೇರಿದಂತೆ ಇನ್ನು ಹಲವರು ಸಿಕ್ಕಿಬಿದ್ದಾರೆ. ಅಕ್ಟೋಬರ್ 7ರ ವರೆಗೆ ಆರ್ಯನ್ ಖಾನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಎನ್ ಸಿ ಬಿ ವಶಕ್ಕೆ ನೀಡಲಾಗಿತ್ತು. ನಿನ್ನೆ (ಅಕ್ಟೋಬರ್ 7) ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  ಬಾಲಿವುಡ್ ಸ್ಟಾರ್ಸ್ ಬೆಂಬಲ

  ಬಾಲಿವುಡ್ ಸ್ಟಾರ್ಸ್ ಬೆಂಬಲ

  ಆರ್ಯನ್ ಖಾನ್ ಗೆ ಬಾಲಿವುಡ್ ನ ಅನೇಕ ಮಂದಿ ಬೆಂಬಲ ಸೂಚಿಸುತ್ತಿದ್ದಾರೆ. ಹೃತಿಕ್ ರೋಷನ್, ಸಲ್ಮಾನ್ ಖಾನ್, ಸುನೀಲ್ ಶೆಟ್ಟಿ, ಸುಜೇನ್ ಖಾನ್, ರವೀನಾ ಟಂಡನ್ ಸೇರಿದಂತೆ ಅನೇಕ ಮಂದಿ ಆರ್ಯನ್ ಖಾನ್ ಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಹೃತಿಕ್ ರೋಷನ್ 'ಮೈ ಡಿಯರ್ ಆರ್ಯನ್..' ಎಂದು ದೀರ್ಘವಾದ ಪೋಸ್ಟ್ ಶೇರ್ ಮಾಡಿ ಧೈರ್ಯ ತುಂಬಿದ್ದಾರೆ. ಇನ್ನು ರವೀನಾ ಟಂಡನ್ 'ನಾಚಿಕೆಗೇಡಿನ ರಾಜಕೀಯ, ಆರ್ಯನ್ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

  English summary
  Shah Rukh Khan wife Gauri Khan gets a warm wish from daughter Suhana Khan on birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X