ಈ ಒಪ್ಪಂದಕ್ಕೆ ಓಕೆ ಅಂದ್ರೆ 'ವಿಕ್ರಂವೇದ' ರೀಮೇಕ್ ಮಾಡ್ತಾರಂತೆ ಶಾರೂಖ್.!

By Bharath Kumar

ಆರ್.ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯಿಸಿದ್ದ ಸೂಪರ್ ಹಿಟ್ ತಮಿಳು ಸಿನಿಮಾ 'ವಿಕ್ರಂವೇದ' ಹಿಂದಿಗೆ ರೀಮೇಕ್ ಆಗಲಿದೆ ಎನ್ನುವುದು ಅಧಿಕೃತವಾಗಿದೆ. ನೀರಜ್ ಪಾಂಡೆ ಹಾಗೂ ಅಂಬಾನಿ ಪ್ರಡೊಕ್ಷನ್ ಸಂಸ್ಥೆಗಳು ರೀಮೇಕ್ ಹಕ್ಕು ಖರೀದಿಸಿದ್ದು, ಹಿಂದಿಯಲ್ಲಿ ರೀಮೇಕ್ ಮಾಡಲು ತಯಾರಾಗಿದ್ದಾರೆ.

ಸದ್ಯದ ಬೆಳವಣಿಗೆ ಏನಪ್ಪಾ ಅಂದ್ರೆ, ಶಾರೂಖ್ ಖಾನ್ 'ವಿಕ್ರಂವೇದ' ಸಿನಿಮಾದ ಹಿಂದಿ ಅವತರಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ಆದ್ರೆ, ಶಾರೂಖ್ ಈ ಚಿತ್ರವನ್ನ ಹಿಂದಿಯಲ್ಲಿ ಮಾಡಲು ಸಿದ್ದವಾಗಿದ್ದು, ಕೆಲವು ಬೇಡಿಕೆಗಳನ್ನ ನಿರ್ಮಾಪಕರಿಗೆ ಇಟ್ಟಿದ್ದಾರಂತೆ. ಈ ಕಂಡಿಷನ್ ಗೆ ಒಪ್ಪಿಕೊಂಡ್ರೆ ಹಿಂದಿಯ 'ವಿಕ್ರಂವೇದ' ಚಿತ್ರಕ್ಕೆ ಕಿಂಗ್ ಖಾನ್ ನಾಯಕರಾಗುವುದು ಖಚಿತವಂತೆ. ಅಷ್ಟಕ್ಕೂ, ಶಾರೂಖ್ ಇಟ್ಟಿರುವ ಬೇಡಿಕೆ ಏನು.? ಮುಂದೆ ಓದಿ.....

'ವೇದ' ಪಾತ್ರದ ಮೇಲೆ ಶಾರೂಖ್ ಒಲವು

'ವೇದ' ಪಾತ್ರದ ಮೇಲೆ ಶಾರೂಖ್ ಒಲವು

ಮೂಲಗಳ ಪ್ರಕಾರ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದ 'ವೇದ' ಪಾತ್ರದಲ್ಲಿ ಶಾರೂಖ್ ಖಾನ್ ಅಭಿನಯಿಸುವ ಆಸೆ ಹೊಂದಿದ್ದಾರಂತೆ. ಹೀಗಾಗಿ, ವೇದ ಪಾತ್ರ ಶಾರೂಖ್ ಗೆ ಫಿಕ್ಸ್ ಎಂಬ ಮಾಹಿತಿ ಸಿಕ್ಕಿದೆ. ಇದು ಗ್ಯಾಂಗ್ ಸ್ಟರ್ ಪಾತ್ರವಾಗಿದ್ದು, ನಿರ್ಮಾಪಕರು ಕೂಡ ಶಾರೂಖ್ ಖಾನ್ ಗೆ ಇಷ್ಟವಾದ ಪಾತ್ರ ಮಾಡಲು ಸ್ವತಂತ್ರ ನೀಡಿದ್ದಾರಂತೆ.

ವಿಕ್ರಂ ಪಾತ್ರದಲ್ಲಿ ಯಾರು.?

ವಿಕ್ರಂ ಪಾತ್ರದಲ್ಲಿ ಯಾರು.?

ಇನ್ನು 'ವಿಕ್ರಂವೇದ' ಚಿತ್ರದಲ್ಲಿ ಇಬ್ಬರು ನಾಯಕರು. ಆರ್.ಮಾಧವನ್ ಮತ್ತು ವಿಜಯ್ ಸೇತುಪತಿ. ಸೇತುಪತಿ ಪಾತ್ರದಲ್ಲಿ ಶಾರೂಖ್ ಮಾಡಿದ್ರೆ, ಆರ್.ಮಾಧವನ್ ಅಭಿನಯಿಸಿದ್ದ ಪಾತ್ರದಲ್ಲಿ ಸ್ವತಃ ಮಾಧವನ್ ಅವರೇ ಅಭಿನಯಿಸಬೇಕು ಎನ್ನುವುದು ಶಾರೂಖ್ ಬೇಡಿಕೆ. ಮಾಧವನ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿ.

ನಿರ್ದೇಶನ ಯಾರು ಮಾಡ್ಬೇಕು.?

ನಿರ್ದೇಶನ ಯಾರು ಮಾಡ್ಬೇಕು.?

ಮೂಲಗಳ ಪ್ರಕಾರ ತಮಿಳಿನ ವಿಕ್ರಂವೇದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪುಷ್ಕರ್ ಮತ್ತು ಗಾಯಿತ್ರಿ ಅವರೇ ಹಿಂದಿಯಲ್ಲೂ ನಿರ್ದೇಶನ ಮಾಡುವ ಸಾಧ್ಯತೆ ಎನ್ನಲಾಗಿತ್ತು. ಆದ್ರೆ, ಶಾರೂಖ್ ಖಾನ್ ಗೆ ನೀರಜ್ ಪಾಂಡೆ ನಿರ್ದೇಶನ ಮಾಡಬೇಕು ಎಂಬ ಬೇಡಿಕೆ. ನೀರಜ್ ಪಾಂಡೆ, ವಿಕ್ರಂವೇದ ರೀಮೇಕ್ ಹಕ್ಕು ಖರೀದಿಸಿರುವ ನಿರ್ಮಾಪಕರಲ್ಲಿ ನೀರಜ್ ಕೂಡ ಒಬ್ಬರು.

ಕ್ರೈಂ ಥ್ರಿಲ್ಲರ್ ಸಿನಿಮಾ

ಕ್ರೈಂ ಥ್ರಿಲ್ಲರ್ ಸಿನಿಮಾ

ಅಂದ್ಹಾಗೆ, ವಿಕ್ರಂವೇದ ಕಂಪ್ಲೀಟ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್. ಪೊಲೀಸ್ ಮತ್ತು ರೌಡಿ ನಡುವೆ ನಡೆಯುವ ಕ್ರೈಂ ಕಥೆ. ತಮಿಳಿನಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಕನ್ನಡ, ತೆಲುಗು, ಹಿಂದಿಯಲ್ಲೂ ರೀಮೇಕ್ ಹಕ್ಕು ಸೇಲ್ ಆಗಿದ್ದು, ಬಹುಭಾಷೆಗಳಲ್ಲೂ ಮೂಡಿಬರಲಿದೆ.

More from Filmibeat

English summary
Shah Rukh Khan has reportedly been roped in for R. Madhavan’s ‘Vikram Vedha’ Hindi remake. But the actor has two conditions towards working in the remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X