Dunki: 'ಡಂಕಿ' ಹಾಡು ನೋಡಿ ಕೆನಡಾ ಬಿಟ್ಟು ಭಾರತಕ್ಕೆ ಬರುತ್ತೀನಿ ಎಂದ ಅಭಿಮಾನಿಗೆ ಶಾರುಖ್ ಖಾನ್ ಸಲಹೆಯೇನು?

ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ನಟ ಟ್ವಿಟರ್‌ನಲ್ಲಿ ಎಸ್‌ಆರ್‌ಕೆಗೆ ಏನಾದರೂ ಕೇಳಿ (Ask SRK session) ಸೆಷನ್ ಮಾಡಿದ್ದರು. ಇದರಲ್ಲಿ ಹಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. 'ಡಂಕಿ' ಸಿನಿಮಾದ ಬಗ್ಗೆಯೂ ಆಸಕ್ತಿದಾಯಕ ವಿವರ ಕೇಳಿದ್ದಾರೆ.

ಹೀಗೆ ಪ್ರಶ್ನೆ ಮಾಡಿರುವ ಹಲವು ಅಭಿಮಾನಿಗಳ ಪೈಕಿ ಕೆನಡಾದಲ್ಲಿ ವಾಸಿಸುತ್ತಿರುವವರ ಪ್ರಶ್ನೆ ಸಕತ್ ಟ್ರೆಂಡ್ ಆಗಿದೆ. ಜೊತೆಗೆ ವಿದೇಶದಲ್ಲಿ ಇರಲು ಆಗುವುದಿಲ್ಲ ವಾಪಸ್ ಬರುತ್ತೇನೆ ಎಂದಿದ್ದಾರೆ. ಅದು ಕೂಡ ಶುಕ್ರವಾರ ಬಿಡುಗಡೆಯಾಗಿರುವ ಡಂಕಿ ಡ್ರಾಪ್ 3 ಎಂದು ಬಿಡುಗಡೆಯಾದ ಮೂರನೇ ಹಾಡು ನಿಕ್ಲೆ ದಿ ಕಭಿ ಹಮ್ ಘರ್ ಸೇ ಕೇಳಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

Shah Rukh Khans advice to fan who wishes to return India from Canada

ಡಂಕಿ ಹಾಡು ಕೇಳಿ ಭಾವುಕರಾದ ಎಸ್‌ಆರ್‌ಕೆ ಅಭಿಮಾನಿ

ಡಂಕಿಯ ಮೂರನೇ ಹಾಡಾದ 'ನಿಕ್ಲೆ ದಿ ಕಭಿ ಹಮ್ ಘರ್ ಸೇ' ಅನ್ನು ಕೇಳಿದ ಬಳಿಕ ಭಾರತಕ್ಕೆ ವಾಪಸ್ ಬರಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್ ಖಾನ್, ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ಎಚ್ಚರಿಕೆಯಿಂದ ಯೋಚಿಸಿ ಎಂದು ಅಭಿಮಾನಿಗಳಿಗೆ ಶಾರುಖ್ ಖಾನ್ ಕೇಳಿಕೊಂಡಿದ್ದಾರೆ. ಕೆಲವೊಮ್ಮೆ ಹೊರಗೆ ದುಡಿದು ಬದುಕು ಕಟ್ಟಿಕೊಳ್ಳಬೇಕಾಗುತ್ತದೆ ಎಂದೂ ಸೂಚಿಸಿದ್ದಾರೆ.

ಆಸ್ಕ್ ಎಸ್‌ಆರ್‌ಕೆ ಸೆಷನ್‌ನಲ್ಲಿ ಕೆನಡಾದ ಅಭಿಮಾನಿ ಟ್ವೀಟ್ ಮಾಡಿದ್ದಾರೆ. "ನಾನು ಎಂಟು ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದೇನೆ..... 'ನಿಕ್ಲೆ ದ ಕಭಿ ಹಮ್ ಘರ್ ಸೆ' ಕೇಳಿದ ನಂತರ ನನಗೆ ಇಲ್ಲಿ ಉಳಿಯಬೇಕು ಅನಿಸುತ್ತಿಲ್ಲ ... ನಾನು ಭಾರತಕ್ಕೆ ಬರುತ್ತಿದ್ದೇನೆ. ... ಆ ರಹಾ ಹೂನ್ (ನಾನು ಬರುತ್ತಿದ್ದೇನೆ)..." ಎಂದಿ ಹೇಳಿದ್ದಾರೆ.

ಅಭಿಮಾನಿಗೆ ಪ್ರತಿಕ್ರಿಯಿಸಿದ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್, "ಅರೆ ಯಾರ್ (ಓಹ್ ಮೈ ಫ್ರೆಂಡ್)... ನನಗೂ ಭಾರತವೇ ಉತ್ತಮ ಎಂದು ಅನಿಸುತ್ತದೆ. ಆದರೆ ಎಲ್ಲಾ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಕೆಲವೊಮ್ಮೆ ನಾವು ಹೊರಗೆ ಕೆಲಸ ಮಾಡಬೇಕು ಮತ್ತು ನಮಗಾಗಿ ಜೀವನ ಕಟ್ಟಿಕೊಳ್ಳಬೇಕು" ಎಂದು ಬರೆದಿದ್ದಾರೆ.

ಶಾರುಖ್ ಅವರ ಪ್ರತಿಕ್ರಿಯೆಯನ್ನು ನೋಡಿದ ಅನೇಕ ಟ್ವಿಟರ್ ಬಳಕೆದಾರರು ಸಹ ನಟನ ಮಾತಿಗೆ ಒಪ್ಪಿದ್ದಾರೆ. "ದೇಶಭಕ್ತಿ ಒಂದು ಕಡೆ, ಆದರೆ ಉತ್ತಮ ಜೀವನವನ್ನು ನಡೆಸುವುದು ಬೇರೆಯದು" ಎಂದಿದ್ದಾರೆ. ಮತ್ತೊಬ್ಬರು, "ನಿಜ, ಕೆಲವೊಮ್ಮೆ ಸಮಯದ ಅಗತ್ಯಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.

Shah Rukh Khans advice to fan who wishes to return India from Canada

ಡಂಕಿ ಸಿನಿಮಾ

ಆಸ್ಕ್ ಎಸ್‌ಆರ್‌ಕೆ ಸೆಷನ್‌ನಲ್ಲಿ ಶಾರುಖ್ ಖಾನ್ ಡಂಕಿ ಸಿನಿಮಾ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದು ಎಲ್ಲಾ ಭಾರತೀಯರಿಗೆ ಮತ್ತು ವಿಶೇಷವಾಗಿ ವಿದೇಶದಲ್ಲಿ ವಾಸಿಸುವ, ಅಲ್ಲಿಗೆ ಹೋಗಲು ಬಯಸುವವರ ಕುರಿತು ಮಾಡಿರುವ ಭಾವನಾತ್ಮಕ ಚಲನಚಿತ್ರವಾಗಿದೆ. ವಲಸೆ ಹೋಗುವವರ ಕನಸು ಮತ್ತು ಪ್ರಯತ್ನಸ ಸುತ್ತ ಸಿನಿಮಾ ಸುತ್ತುತ್ತದೆ.

ಡಂಕಿ ಸಿನಿಮಾದ ಇತ್ತೀಚಿನ ಹಾಡು 'ನಿಕ್ಲೆ ದ ಕಭಿ ಹಮ್ ಘರ್ ಸೇ' ತನ್ನ ಹುಟ್ಟೂರನ್ನು ತೊರೆದು ವಿದೇಶದಲ್ಲಿ ನೆಲೆಸುವ ಬಗ್ಗೆ ಪ್ರತಿಧ್ವನಿಸುತ್ತದೆ. ಹಾಡನ್ನು ಹಂಚಿಕೊಂಡ ಶಾರುಖ್ ಶಾನ್ ಇದು ಡಂಕಿ ಚಿತ್ರದ ತನ್ನ ನೆಚ್ಚಿನ ಟ್ರ್ಯಾಕ್ ಎಂದು ಹೇಳಿಕೊಂಡಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 22 ರಂದು ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Shah Rukh Khan's advice to fan who doesn't want to live in Canada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X