Dunki: ಮುಂಜಾನೆಯೇ ಶುರುವಾಗಲಿದೆ ಡಂಕಿ ಅಬ್ಬರ: ವಿಶೇಷ ಶೋ ನಡೆಸಲು ಶಾರುಖ್ ಖಾನ್ ಫ್ಯಾನ್ಸ್ ರೆಡಿ
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ 'ಡಂಕಿ' ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಶಾರುಖ್ ಖಾನ್ ಅವರ ಅಭಿಮಾನಿಗಳ ಸಂಘಗಗಳಿ ಸಿನಿಮಾ ಗೆಲುವಿಗೆ ಪಣ ತೊಟ್ಟಿವೆ. ಡಿಸೆಂಬರ್ 21 ರಂದು ಸಿನಿಮಾ ಬಿಡುಗಡೆಯಾಗಲಿದೆ. ಇದಾದ ಒಂದು ದಿನದ ಬಳಿಕ 'ಸಲಾರ್ ಭಾಗ 1' ಕೂಡ ಬಿಡುಗಡೆಗೆ ಸಿದ್ಧವಾಗಿದೆ.
ಶಾರುಖ್ ಖಾನ್ ಅಭಿಮಾನಿ ಸಂಘಗಳು ಹೆಚ್ಚು ಸಕ್ರಿಯವಾಗಿದ್ದು, ಸಿನಿಮಾ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೀಗಾಗಿಯೇ 'ಡಂಕಿ' ಬಿಡುಗಡೆಯ ದಿನದಂದು ಸಿನಿಮಾವನ್ನು ಮುಂಬೈನ ಗೈಟಿ ಚಿತ್ರಮಂದಿರದಲ್ಲಿ ವಿಶೇಷ ಮುಂಜಾನೆ ಪ್ರದರ್ಶನ ಆಯೋಜಿಸಿವೆ.

ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮತ್ತು ನಟ ಶಾರುಖ್ ಖಾನ್ ನಟನೆಯ ಈ ಸಿನಿಮಾ ಮೊದಲ ಪ್ರದರ್ಶನ ಮುಂಬೈನ ಐಕಾನಿಕ್ ಥಿಯೇಟರ್‌ನಲ್ಲಿ ಬೆಳಗ್ಗೆ 55 ಕ್ಕೆ ಪ್ರದರ್ಶನವಾಗಲಿದೆ. ಶಾರುಖ್ ಅಭಿಮಾನಿಗಳ ದೊಡ್ಡ ಕ್ಲಬ್ ಎಂದು ಹೇಳಲಾಗುವ ಎಸ್‌ಆರ್‌ಕೆ ಯೂನಿವರ್ಸ್ ಈ ಬಗ್ಗೆ ಭಾನುವಾರ ಘೋಷಿಸಿದೆ.
ಫ್ಯಾನ್ ಕ್ಲಬ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ಮೊದಲ ಬಾರಿಗೆ ಗೈಟಿ ಥಿಯೇಟರ್‌ನಲ್ಲಿ ಬೆಳಗ್ಗೆ 9 ಗಂಟೆಗೆ 'ಪಠಾಣ್' ಪ್ರದರ್ಶನವಾಗಿತ್ತು. ನಂತರ, ಗೈಟಿಯಲ್ಲಿ 'ಜವಾನ್' ಮೊದಲ ಬಾರಿಗೆ ಬೆಳಗ್ಗೆ 6 ಗಂಟೆಗೆ ಶೋ ಆಯೋಜಿಸಿದ್ದೇವು. ಈಗ ಮೊದಲ ಬಾರಿಗೆ 5:55 ಕ್ಕೆ ಗೈಟಿಯಲ್ಲಿ 'ಡಂಕಿ' ಪ್ರದರ್ಶನವನ್ನು ಆಯೋಜಿಸುತ್ತಿದ್ದೇವೆ ಎಂದು ಘೋಷಿಸಲು ರೋಮಾಂಚನವಾಗುತ್ತಿದೆ" ಎಂದು ಪೋಸ್ಟ್‌ನಲ್ಲಿ ಹೇಳಿದೆ.
ಎಸ್‌ಆರ್‌ಕೆ ಯೂನಿವರ್ಸ್ ಪ್ರಕಾರ, ಐಕಾನಿಕ್ ಥಿಯೇಟರ್‌ನಲ್ಲಿ 5.55 ಕ್ಕೆ ಸಿನಿಮಾ ಪ್ರದರ್ಶನ ಮಾಡುತ್ತಿರುವುದು ಇತಿಹಾಸದಲ್ಲಿ ಮೊದಲ ಬಾರಿಗೆ ಎಂದು ಹೇಳಿದ್ದಾರೆ. ಸ್ನೇಹ, ವಲಸೆ, ಮನೆ ಮತ್ತು ಪ್ರೀತಿಯ ಸುತ್ತ ಹೆಣೆದಿರುವ 'ಡಂಕಿ' ಅಕ್ರಮ ವಲಸೆಯ ಕಥೆಯನ್ನು ಆಧರಿಸಿದೆ. ಇದರಲ್ಲಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ನಟಿಸಿದ್ದಾರೆ.


Click it and Unblock the Notifications











