Jawan advance booking: ಜವಾನ್ ಬಿಡುಗಡೆ ಮುನ್ನವೇ ಬರೋಬ್ಬರಿ 6 ಲಕ್ಷ ಟಿಕೆಟ್ ಮಾರಾಟ!

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ 'ಜವಾನ್' ಸಿನಿಮಾ ಬಿಡುಗಡೆಗೆ ಇನ್ನು ಮೂವರು ದಿನಗಳು ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಜವಾನ್ ಕ್ರೇಜ್ ಹೇಗಿದೆ ಎಂದರೆ ಬರೋಬ್ಬರಿ ಆರು ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.

ವರ್ಷದ ಮೊದಲ ಹಿಟ್ ಪಠಾಣ್ ನೀಡಿರುವ ಶಾರುಖ್ ಖಾನ್ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ 'ಜವಾನ್' ಅಬ್ಬರ ಕೂಡ ಜೋರಾಗಿಯೇ ಇದೆ. ತಮಿಳು ನಿರ್ದೇಶಕ ಅಟ್ಲಿ ಅವರ ಮೊದಲ ಹಿಂದಿ ಸಿನಿಮಾವಾಗಿದ್ದು, ಭರ್ಜರಿ ಟ್ರೈಲರ್‌ನೊಂದಿಗೆ ಒಳ್ಳೆ ಹೈಪ್ ಕ್ರಿಯೆಟ್ ಮಾಡಿದೆ.

Shah Rukh Khans Jawan advance booking: 600k tickets sold

ಜವಾನ್ ಚಿತ್ರದ ಸೆಪ್ಟಂಬರ್ 7ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೆ ಏಳು ದಿನಗಳ ಮೊದಲು ಮುಂಗಡ ಬುಕ್ಕಿಂಗ್ ಓಪನ್ ಮಾಡಲಾಗಿದೆ. ಬೆಳ್ಳಿ ಪರದೆಯ ಮೇಲೆ ಜವಾನ್ ಕಣ್ತುಂಬಿಕೊಳ್ಳಲು ಇನ್ನೂ ಮೂರು ದಿನಗಳು ಬಾಕಿಯಿರುವಾಗ, ಈಗಾಗಲೇ 6 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.

ತೆರೆಗೆ ಬರುವ ಮುನ್ನವೇ 17.5 ಕೋಟಿ ಗಳಿಸಿದ 'ಜವಾನ್'!

ಶಾರುಖ್ ಖಾನ್ ಅವರ 'ಜವಾನ್' ಗಾಗಿ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಿದೆ. ಸೆಪ್ಟೆಂಬರ್ 4 ರ ಹೊತ್ತಿಗೆ, ಚಿತ್ರವು ಈಗಾಗಲೇ ಆರು ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಚಿತ್ರದ ಅಡ್ವಾನ್ಸ್ ಬುಕಿಂಗ್ ಸಂಗ್ರಹ ಈಗಾಗಲೇ 17.50 ಕೋಟಿ ರೂಪಾಯು ಬಾಚಿಕೊಂಡಿದೆ.

Shah Rukh Khans Jawan advance booking: 600k tickets sold

ಚಿತ್ರ ತೆರೆಗೆ ಬರಲು ಇನ್ನೂ 3 ದಿನಗಳು ಬಾಕಿ ಇರುವಾಗ ಮತ್ತಷ್ಟು ಟಿಕೆಟ್‌ಗಳು ಬುಕ್ ಆಗುವ ಸಾಧ್ಯತೆಯಿದೆ. ಹೀಗಾಗಿ ಎಸ್‌ಆರ್‌ಕೆ ಅವರ 'ಜವಾನ್' ಚಿತ್ರವು ಸನ್ನಿ ಡಿಯೋಲ್ ಅವರ 'ಗದರ್ 2' ದಾಖಲೆಯನ್ನು ಮುರಿಯಬಹುದು ಎಂದು ಅಂದಾಜಿಸಲಾಗಿದೆ. ಗದರ್- ಭಾಗ 2 ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್ 18.5 ಕೋಟಿ ಆಗಿತ್ತು.

24 ಗಂಟೆಗಳಲ್ಲಿ ಅತ್ಯಧಿಕ ಅಡ್ವಾನ್ಸ್ ಬುಕಿಂಗ್!

'ಜವಾನ್' ಚಿತ್ರ ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸಿದ ಮೊದಲ 24 ಗಂಟೆಗಳಲ್ಲಿ ಸುಮಾರು 2 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. ಆ ಮೂಲಕ ಮೊದಲ 24 ಗಂಟೆಗಳಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಮಾಡಿದ ಸಿನಿಮಾವಾಗಿ ದಾಖಲೆ ನಿರ್ಮಿಸಿದೆ. ಈ ಹಿಂದೆ ಯಾವುದೇ ಬಾಲಿವುಡ್ ಚಲನಚಿತ್ರ ಟಿಕೆಟ್‌ಗಳು ಇಷ್ಟು ಬೇಗ ಮಾರಾಟವಾಗಿರಲಿಲ್ಲ.

ಜವಾನ್ ಬಿಡುಗಡೆಯನ್ನು ಸಂಭ್ರಮಿಸಲು 85,000 ಮಂದಿ ಶಾರುಖ್ ಖಾನ್ ಅಭಿಮಾನಿಗಳು ಒಟ್ಟಿಗೆ ಸೇರುತ್ತಿದ್ದಾರೆ ಎಂದು 'ಪಿಂಕ್ವಿಲ್ಲಾ' ವರದಿ ಮಾಡಿದೆ. ಸೆಪ್ಟೆಂಬರ್ 7 ರಂದು ಸಿನಿಮಾ 300 ಕ್ಕೂ ಹೆಚ್ಚು ನಗರಗಳಲ್ಲಿ ಫ್ಯಾನ್ ಶೋಗಳು ನಡೆಯಲಿವೆ. ಶಾರುಖ್ ಖಾನ್ ಅವರ ಫ್ಯಾನ್ ಕ್ಲಬ್ ಎಸ್‌ಆರ್‌ಕೆ ಯೂನಿವರ್ಸ್ ಈ ಶೋಗಳನ್ನು ಆಯೋಜಿಸಿದೆ.

ಅಟ್ಲಿ ನಿರ್ದೇಶನದ, 'ಜವಾನ್' ಸಿನಿಮಾದಲ್ಲಿ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಸೇರಿ ಬೃಹತ್ ಪಾತ್ರವರ್ಗವಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಜವಾನ್‌ನಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜವಾನ್‌ನಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ಔರಂಗಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಹಿಟ್ ಆಗಿವೆ. 'ಜವಾನ್' ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗುತ್ತದೆ.

More from Filmibeat

English summary
Shah Rukh Khan's Jawan advance booking: 6 lakh tickets sold.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X