Jawan: ವಿಶ್ವದಾದ್ಯಂತ 850 ಕೋಟಿ ಗಳಿಸಿದ ಜವಾನ್, ಶೀಘ್ರದಲ್ಲೇ ಸಾವಿರ ಕೋಟಿ ಕ್ಲಬ್‌ಗೆ ಶಾರುಖ್ ಚಿತ್ರ!

ಮಾಸ್ ಸಿನಿಮಾ ನಿರ್ದೇಶಕ ಅಟ್ಲಿ ಅವರ ಬಾಲಿವುಡ್ ಸಿನಿಮಾ 'ಜವಾನ್' ದೇಶದಲ್ಲಿ ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ. ಸಿನಿಮಾ ಈಗ ವಿಶ್ವದಾದ್ಯಂತ 850 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ವರದಿಗಳಿವೆ. ಶೀಘ್ರದಲ್ಲೇ ಜವಾನ್ ಸಾವಿರ ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ.

ಸೋಮವಾರ ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 10 ದಿನಗಳ ಹಿಂದೆ ತೆರೆಗೆ ಬಂದ ಜವಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿ ಕ್ಲಬ್‌ಗೆ ಪ್ರವೇಶಿಸಿದೆ ಎಂದಿದ್ದಾರೆ. ಜವಾನ್ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Shah Rukh Khans Jawan film enters Rs 850 crore worldwide

1000 ಕೋಟಿ ಕ್ಲಬ್ ಸೇರಲಿದೆ ಜವಾನ್!

ಸೆಪ್ಟೆಂಬರ್ 17 ರಂದು ಅಂದರೆ ಭಾನುವಾರ ಈ ಸಿನಿಮಾ ಭಾರತದಲ್ಲಿ 36 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇದು ಜವಾನ್ ಇನ್ನು ಥಿಯೇಟರ್‌ಗಳಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. ಸಿನಿಮಾ ಹೀಗೇಯೇ ನಾಗಾಲೊಟ ಮುಂದುವರೆಸಿದರೇ 'ಜವಾನ್' ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಲಭವಾಗಿ 1000 ಕೋಟಿ ಗಳಿಸುತ್ತದೆ.

ಶಾರುಖ್ ಖಾನ್ ಅಭಿನಯದ 'ಜವಾನ್' ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ತಮಿಳಿನ ನಿರ್ದೇಶಕ ಅಟ್ಲಿ ಅವರ ನಿರ್ದೇಶನದ ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 11 ದಿನಗಳ ಒಟ್ಟು ಕಲೆಕ್ಷನ್ ಈಗ ಭಾರತದಲ್ಲಿ 477.28 ಕೋಟಿ ರೂಪಾಯು. ಸೆಪ್ಟೆಂಬರ್ 17 ರಂದು ಚಿತ್ರವು ಶೇಕಡಾ 45.32 ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ.

ದೇಶದ ಜೊತೆಗೆ ವಿದೇಶಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರಾಂತ್ಯದಲ್ಲಿ, ಜವಾನ್ 7.30 ಮಿಲಿಯನ್ ಯುಎಸ್ ಡಾಲರ್ ಗಳಿಸಿದೆ. ಕಳೆದ ವಾರಕ್ಕಿಂತ ಈ ವಾರಾಂತ್ಯಕ್ಕೆ ಶೇಕಡಾ 57 ರಷ್ಟು ಕುಸಿತ ಕಂಡರೂ ಕೂಡ ಪಠಾಣ್ ಸಿನಿಮಾಗಿಂತ 'ಜವಾನ್' ಉತ್ತಮ ಪ್ರದರ್ಶನ ಕಾಣುತ್ತಿದೆ.

Shah Rukh Khans Jawan film enters Rs 850 crore worldwide

'ಜವಾನ್'

ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಜೊತೆಗೆ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ದೀಪಿಕಾ ಪಡುಕೋಣೆ, ಸಂಜಯ್ ದತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ - ಮಗನ ಕಥೆಯಾದ ಜವಾನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಶಾರುಖ್ ಖಾನ್ ಅಕತ್ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ರೋಮ್ಯಾಂಟಿಕ್ ಇಮೇಜ್‌ನಿಂದ ಹೊಸ ಬಂದಿದ್ದಾರೆ.

ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ನಟಿಸಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಮಾಡಿರುವ 'ಜವಾನ್' ಸಿನಿಮಾಗೆ ಗೌರಿ ಖಾನ್ ಬಂಡವಾಳ ಹೂಡಿದ್ದಾರೆ. ಗೌರವ್ ವರ್ಮಾ ಸಹ-ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ಔರಂಗಾಬಾದ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

More from Filmibeat

English summary
Shah Rukh Khan's Jawan film enters Rs 850 crore worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X