ಆನ್‌ಲೈನ್‌ನಲ್ಲಿ 'ಜವಾನ್' ಲೀಕ್: ಪೈರಸಿಗೆ ಬಲಿಯಾಗುತ್ತಾ ಶಾರುಖ್ ಖಾನ್, ಅಟ್ಲಿ ಚಿತ್ರ?

'ಜವಾನ್' ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಲ್ಲಿ ಗ್ರಾಂಡ್ ಎಂಟ್ರಿ ಪಡೆದಿದೆ. ಸಿನಿಮಾಗೆ ಎಲ್ಲಾ ಕಡೆಗಳಿಂದ ಪ್ರಶಂಸೆ ಬರುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರು, ತಮಿಳು ನಿರ್ದೇಶಕ ಅಟ್ಲಿ ಶೈಲಿಯಲ್ಲಿ ಆಕ್ಷನ್ ಹೀರೋ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಆಕ್ಷನ್, ಎಮೋಷನಲ್ ಸೀನ್ ಗಳು, ಹಾಡು, ಡ್ಯಾನ್ಸ್, ಶಾರುಖ್ ಖಾನ್ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಸೌತ್ ಬ್ಯೂಟಿ ನಯನತಾರಾ, ವಿಜಯ್ ಸೇತುಪತಿ ಸೇರಿ ಹೆಚ್ಚಾಗಿ ದಕ್ಷಿಣ ಭಾರತದವರೇ ಇದ್ದು, ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. ಇದರ ಜೊತೆಗೆ ಕೆಟ್ಟ ಸುದ್ದಿಯೊಂದು ಕೇಳಿ ಬಂದಿದೆ.

shah-rukh-khans-jawan-movie

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಜವಾನ್ ಸೋರಿಕೆ

ಹೌಸ್‌ಫುಲ್ ಶೋಗಳು ಪ್ರದರ್ಶನವಾಗುತ್ತಿರುವ ಜವಾನ್ ಚಿತ್ರವು ಮೊದಲ ದಿನದಂದು ಕನಿಷ್ಠ 75 ಕೋಟಿ ರೂಪಾಯಿಗಳನ್ನು ಮುಟ್ಟುವ ನಿರೀಕ್ಷೆಯಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿಯಾಗಿದೆ. ಈಗಾಗಲೇ ಹಲವಾರು ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿದೆ.

ಟೊರೆಂಟ್ ವೆಬ್‌ಸೈಟ್‌ಗಳು, ತಮಿಳು ರಾಕರ್ಸ್, ಟೆಲಿಗ್ರಾಮ್ ಮತ್ತು ಮೂವೀರುಲ್ಜ್‌ನಲ್ಲಿ ಎಚ್‌ಡಿ ಡೌನ್‌ಲೋಡ್‌ನಲ್ಲಿ 'ಜವಾನ್' ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಯಾದ ದಿನದಂದು ಚಿತ್ರದ ಸೋರಿಕೆಯಾಗಿರುವುದು ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಶಾರುಖ್ ಖಾನ್ ಸಿನಿಮಾವಾಗಿರುವ ಕಾರಣ ಗಲ್ಲಾ ಪೆಟ್ಟಿಗೆ ಮೇಲೆ ಅಂತಹ ದೊಡ್ಡ ಪರಿಣಾಮ ಬಿರಲಾರದು ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

shah-rukh-khans-jawan-movie

1957 ರ ಕೃತಿಸ್ವಾಮ್ಯ ಕಾಯಿದೆಯ ಪ್ರಕಾರ, ಸಿನಿಮಾ ಪೈರಸಿ ಮಾಡುವುದು ಕ್ರಿಮಿನಲ್ ಅಪರಾಧವಾಗಿದೆ ಮತ್ತು ಕಾನೂನಿನಡಿಯಲ್ಲಿ ಶಿಕ್ಷಾರ್ಹವಾಗಿದೆ. ಆದರೂ ಕೂಡ ಹಲವು ಸಿನಿಮಾಗಳು ಬಿಡುಗಡೆಯಾದ ದಿನವೇ ಪೈರಸಿಗೆ ಬಲಿಯಾಗುತ್ತಿವೆ. ನಟ ರಜನಿಕಾಂತ್ ಅವರ ಜೈಲರ್ ಕೂಡ ಪೈರಸಿಯಾಗಿತ್ತು. ಆದರೆ, ಸಿನಿಮಾ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಥಿಯೇಟರ್‌ಗಳಲ್ಲಿ 'ಜವಾನ್' ಹವಾ

ಬಹು ನಿರೀಕ್ಷಿತ ಶಾರುಖ್ ಖಾನ್ ಚಿತ್ರ 'ಜವಾನ್' ಸೆಪ್ಟೆಂಬರ್ 7 ರಂದು ಥಿಯೇಟರ್‌ ಬಿಡುಗಡೆಯಾಗಿದೆ. ಅಟ್ಲಿ ನಿರ್ದೇಶನದ ಚಿತ್ರವು ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಶಾರುಖ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಸಾಥ್ ನೀಡಿದ್ದಾರೆ. ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

More from Filmibeat

English summary
Jawan: Shah rukh khan's Jawan movie leaked online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X