ಗಗನಚುಂಬಿ ಬುರ್ಜ್ ಖಲೀಫಾದಲ್ಲಿ 'ಜವಾನ್' ಖದರ್!: ದುಬೈನಲ್ಲಿ ಶಾರುಖ್ ಭರ್ಜರಿ ಪ್ರಚಾರ

ಈ ವರ್ಷದಲ್ಲಿ ಶಾರುಖ್ ಖಾನ್ ಅವರ ಎರಡನೇ ಚಿತ್ರ ಜವಾನ್ ಬಿಡುಗಡೆಯಾಗುತ್ತಿದ್ದು, ಮೊದಲ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಅವರು ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೇಶವಲ್ಲದೇ ಜವಾನ್ ಪ್ರಚಾರವನ್ನು ದುಬೈನಲ್ಲೂ ಮಾಡಲಾಗುತ್ತಿದೆ.

ಆಗಸ್ಟ್ 31 ರಂದು ಜವಾನ್ ಟ್ರೈಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ತಿಯೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಈ ಹಿಂದೆ ಭರವಸೆ ನೀಡಿದಂತೆ ಶಾರುಖ್ ಖಾನ್ ದುಬೈಗೆ ಆಗಮಿಸಿ ಅಭಿಮಾನಿಗಳ ಜೊತೆಗೆ 'ಜವಾನ್' ಟ್ರೈಲರ್ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡದ ಸುತ್ತಲೂ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

Shah Rukh Khans Jawan trailer played in Burj Khalifa

ಬುರ್ಜ್ ಖಲೀಫಾದಲ್ಲಿ 'ಜವಾನ್' ಟ್ರೈಲರ್

'ಜವಾನ್' ಚಿತ್ರದ ಟ್ರೇಲರ್ ಭಾರೀ ಯಶಸ್ಸನ್ನು ಗಳಿಸುತ್ತಿದ್ದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಅವರ ತಂಡವು ಬುರ್ಜ್ ಖಲೀಫಾದಲ್ಲಿ ಮತ್ತೊಂದು ದಾಖಲೆ ಮಾಡಿದೆ. ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಮೇಲೆ ಟ್ರೇಲರ್ ಅನ್ನು ಪ್ರದರ್ಶಿಸಲಾಗಿದೆ. ತಮ್ಮ ಸಿನಿಮಾದ ಟ್ರೈಲರ್ ಅನ್ನು ಎಸ್‌ಆರ್‌ಕೆ, ಅಟ್ಲಿ ಮತ್ತು ಅನಿರುದ್ಧ್ ರವಿಚಂದರ್ ಹೆಮ್ಮೆಯಿಂದ ನೋಡುತ್ತಿರುವ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ.

ಬುರ್ಜ್ ಖಲೀಫಾದಲ್ಲಿ ಟ್ರೈಲರ್ ಬಿಡುಗಡೆಗೂ ಮುನ್ನ ತಮ್ಮ ಅಭಿಮಾನಿಗಳಲ್ಲಿ ಶಾರುಖ್ ಖಾನ್ ವಿಶೇಷ ಮನವಿ ಮಾಡಿಕೊಂಡಿದ್ದರು. ಈ ಸಂಭ್ರಮದಲ್ಲಿ ಭಾಗಿಯಾಗುವ ತಮ್ಮ ಅಭಿಮಾನಿಗಳು ಕೆಂಪು ಬಟ್ಟೆಯನ್ನು ಧರಿಸುವಂತೆ ಕೇಳಿಕೊಂಡಿದ್ದರು. ಬುರ್ಜ್ ಖಲೀಫಾದಲ್ಲಿ ಆಗಸ್ಟ್ 31 ರಂದು ರಾತ್ರಿ 9 ಗಂಟೆಗೆ ನನ್ನೊಂದಿಗೆ ಜವಾನ್ ಸಂಭ್ರಮ ಆಚರಿಸಿ. ಅಂದು ಪ್ರೀತಿಯ ಸಂಕೇತವಾದ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸೋಣ ಎಂದು ಹೇಳಿದ್ದರು.

ಬುರ್ಜ್ ಖಲೀಫಾದಲ್ಲಿ 'ಪಠಾಣ್'!

ಈ ವರ್ಷದ ಸೂಪರ್ ಹಿಟ್ ಬಾಲಿವುಡ್ ಚಿತ್ರ 'ಪಠಾಣ್' ಬಿಡುಗಡೆ ಸಂದರ್ಭದಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಚಿತ್ರದ ಪ್ರೋಮೋ ಬುರ್ಜ್ ಖಲೀಫಾದಲ್ಲಿ ಪ್ರದರ್ಶನವಾಗಿತ್ತು. ಆ ವೇಳೆಯಲ್ಲಿಯೂ ಶಾರುಖ್ ಖಾನ್ ಸ್ವತಃ ದುಬೈನಲ್ಲಿ ಈ ಪ್ರೋಮೋ ವೀಕ್ಷಿಸಿದರು. ಷಿತ್ರದ ಪ್ರಚಾರ ಮಾಡಿದ್ ಅವರು ಸೂಪರ್ ಹಿಟ್ ಹಾಡು 'ಜೂಮ್ ಜೋ ಪಠಾಣ್' ನ ಟ್ಯಾನ್ಸ್ ಮೂವ್ ಪ್ರದರ್ಶಿಸಿದ್ದರು.

Shah Rukh Khans Jawan trailer played in Burj Khalifa

'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಟಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲೋತ್ರಾ ಮತ್ತು ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಜವಾನ್ ಬಿಡುಗಡೆಯಾಗುತ್ತದೆ.

More from Filmibeat

English summary
Jawan' trailer played in Burj Khalifa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X