ಬಾಲಿವುಡ್ ಗೆ ಎಂಟ್ರಿ ಕೊಟ್ಟ ಶಾರುಖ್ ಪುತ್ರ, ಆದ್ರೆ ನಟನಾಗಿ ಅಲ್ಲ?

ಬಾಲಿವುಡ್ ನ ಸ್ಟಾರ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಪಯಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಖಾನ್ ಪುತ್ರನ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿಯೂ ಇದೆ. ಆದ್ರೀಗ ಅ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ ನಟ ಶಾರುಖ್.

ದೇಶ-ವಿದೇಶದಲ್ಲಿ ಬಹುದೊಡ್ಡ ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ನಟ ಶಾರುಖ್ ಖಾನ್ ಮಕ್ಕಳು ಅಂದ್ಮೇಲೆ ಕುತೂಹಲ ತುಸು ಜಾಸ್ತಿಯೇ ಇರುತ್ತೆ. ಅಪ್ಪನಂತೆ ಮಕ್ಕಳಿಗೂ ಅಭಿಮಾನಿಗಳ ಸಂಖ್ಯೆ ಏನು ಕಮ್ಮಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶಾರುಖ್ ಮಕ್ಕಳು ಆರ್ಯನ್ ಮತ್ತು ಸುಹಾನಾ ಖಾನ್ ಸಿನಿಮಾ ಜರ್ನಿಯ ಬಗ್ಗೆ ಆಗಾಗ ಪ್ರಶ್ನೆಗಳು ಎದುರಾಗುತ್ತಲೆ ಇದೆ.

ಆದ್ರೀಗ ಶಾರುಖ್ ಮಗ ಆರ್ಯನ್ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡಲು ಅಣಿಯಾಗಿದ್ದಾರೆ. ಆರ್ಯನ್ ನಟನಾಗಿ ಎಂಟ್ರಿ ಕೊಡುತ್ತಿಲ್ಲ, ಬದಲಿಗೆ ಸಹಾಯಕ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದ್ರೆ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ನಿರ್ದೇಶನದ 'ತಖ್ತ್' ಸಿನಿಮಾದಲ್ಲಿ ಆರ್ಯನ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಮೂಲಕ ಬಾಲಿವುಡ್ ಗೆ ಕಾಲಿಡುತ್ತಿದ್ದಾರಂತೆ.

Shah Rukh Khans son Aryan Khan entered Bollywood

ಈ ಹಿಂದೆ ಕೂಡ ಶಾರಖ್ ಮಗನ ಸಿನಿ ಜರ್ನಿಯ ಬಗ್ಗೆ ಹೇಳಿದ್ದರು. ಆರ್ಯನ್ ಗೆ ನಟನಾಗುವುದಕ್ಕಿಂತ ನಿರ್ದೇಶನದ ಕಡೆ ಹೆಚ್ಚು ಆಸಕ್ತಿ ಇದೇ ಹಾಗಾಗಿಯೇ ಅಮೇರಿಕಾದಲ್ಲಿ ತರಬೇತಿ ಕೂಡ ಪಡೆದು ಬಂದಿದ್ದಾರೆ ಎಂದು ಹೇಳಿದ್ರು. ಅದರಂತೆ ಆರ್ಯನ್ ಈಗ 'ತಖ್ತ್' ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗುವುದರ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸುವ ಸಾಧ್ಯತೆ ಇದೆ.

'ತಖ್ತ್' ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಕರೀನಾ ಕಪೂರ್ ಖಾನ್, ರಣವೀರ್ ಸಿಂಗ್, ಜಾಹ್ನವಿ ಕಪೂರ್, ವಿಕ್ಕಿ ಕೌಶಲ್, ಅನಿಲ್ ಕಪೂರ್ ಸೇರಿದಂತೆ ದೊಡ್ಡ ಕಲಾವಿದರ ದಂಡೆ ಚಿತ್ರದಲ್ಲಿದೆ. ಇವರೆಲ್ಲರಿಗೂ ಆರ್ಯನ್ ಖಾನ್ ಸಹಾಯಕ ನಿರ್ದೇಶಕನಾಗಿ ಇರ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Shah Rukh Khan's son Aryan Khan begin his Bollywood journey with as an assistant director. He is starting his journey with Karan Johar's 'Takht'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X