ಚಿತ್ರಗಳು: 'ಅಸಹಿಷ್ಣುತೆ' ಎಫೆಕ್ಟ್ ಶಾರುಖ್ ಚಿತ್ರಕ್ಕೆ ಭಾರಿ ಕಂಟಕ
ಅಸಹಿಷ್ಣುತೆ ಬಗ್ಗೆ ಕಿಂಗ್ ಖಾನ್ ಶಾರುಖ್ ಅವರು ನೀಡಿರುವ ಹೇಳಿಕೆ ಅವರನ್ನು ಬೆಂಬಿಡದೆ ಕಾಡುತ್ತಿದೆ. ಅವರ 'ದಿಲ್ವಾಲೆ' ಚಿತ್ರಕ್ಕೆ ವಿ.ಹೆಚ್.ಪಿ ಸೇರಿದಂತೆ ಹಿಂದು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದಾಗ ಶಾರುಖ್ ಅವರು 'ಇನ್ನು ಯಾವುದರ ಬಗ್ಗೆಯೂ, ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ' ಎಂದಿದ್ದರು.
ಅಸಹಿಷ್ಣುತೆ ಎಫೆಕ್ಟ್ ನಿಂದಾಗಿ ಶಾರುಖ್ ಖಾನ್ ಅವರ 'ದಿಲ್ವಾಲೆ' ಸಿನಿಮಾ ಬಾಕ್ಸಾಪೀಸ್ ನಲ್ಲಿ ಮಕಾಡೆ ಮಲಗಿತ್ತು. ಆದಾದ ನಂತರ ಶಾರುಖ್ ಅವರು ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದರು.[ಭವಿಷ್ಯದ ಸೂಪರ್ ಜೋಡಿಯಂತೆ ಈ ಮುದ್ದು ಕಂದಮ್ಮಗಳು]
ಇದೀಗ ಎಲ್ಲಾ ಮುಗಿದರೂ ಕೂಡ ವಿಶ್ವ ಹಿಂದು ಪರಿಷತ್ ಶಾರುಖ್ ಅವರನ್ನು ಕಾಡುತ್ತಿದ್ದು, ಅವರ ಮುಂದಿನ ಚಿತ್ರ 'ರಾಯಿಸ್' ಗೆ ಕಂಟಕ ಒದಗಿ ಬಂದಿದೆ. ಗುಜರಾತ್ ನಲ್ಲಿ 'ರಾಯಿಸ್' ಚಿತ್ರದ ಶೂಟಿಂಗ್ ಗೆ ಅವಕಾಶ ನೀಡಲ್ಲ ಎಂದು ವಿಶ್ವ ಹಿಂದು ಪರಿಷತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾರುಖ್ ಖಾನ್ ಚಿತ್ರದ ಶೂಟಿಂಗ್ ಗೆ ಅವಕಾಶ ನೀಡಬಾರದು ಎಂದು ವಿ.ಹೆಚ್.ಪಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಶೂಟಿಂಗ್ ಗೆ ಅನುಮತಿ ಕೊಟ್ಟರೆ ತಡೆಯುವುದು ಹೇಗೆ ಎಂದು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.[ದಯವಿಟ್ಟು ನನ್ನ ಸಿನಿಮಾ ನೋಡಿ, ನಾನು ತಪ್ಪು ಮಾಡಿಲ್ಲ: ಶಾರುಖ್]
ಇನ್ನು ಭುಜ್ ನಗರದ ಹೊರ ವಲಯದಲ್ಲಿ ಶೂಟಿಂಗ್ ನಡೆಯುವ ಸ್ಥಳಕ್ಕೆ ತೆರಳಿ ದಾಂಧಲೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ತಡೆದಿದ್ದಾರೆ. ಮುಂದೆ ಓದಿ....

'ರಾಯಿಸ್'
ಕಿಂಗ್ ಖಾನ್ ಶಾರುಖ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಯಿಸ್' ಈ ವರ್ಷ 'ಈದ್ ಮಿಲಾದ್' ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ಇದೇ ಸಂದರ್ಭದಲ್ಲಿ ಬಾಕ್ಸಾಪೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ 'ಸುಲ್ತಾನ' ಸಿನಿಮಾ ತೆರೆ ಕಾಣಲಿದೆ.[ದಿಲ್ವಾಲೆ: ಶಾರುಖ್ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು]

'ಸುಲ್ತಾನ'
ಸಲ್ಮಾನ್ ಖಾನ್ ಅವರು ಶಾರುಖ್ ಅವರ 'ರಾಯಿಸ್' ಚಿತ್ರಕ್ಕಾಗಿ ತಮ್ಮ 'ಸುಲ್ತಾನ' ಚಿತ್ರವನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಅಲ್ಲಲ್ಲಿ ಸುದ್ದಿಯಾಗಿದೆ.(ಚಿತ್ರದಲ್ಲಿ: 'ರಾಯಿಸ್' ಚಿತ್ರದ ಸೆಟ್ ನಲ್ಲಿ ಶಾರುಖ್)

ನಟಿ ಮಹೀರಾ ಖಾನ್
ಪಾಕಿಸ್ತಾನಿ ನಟಿ ಮಹೀರಾ ಖಾನ್ ಅವರು ನಟ ಶಾರುಖ್ ಅವರ ಜೊತೆ 'ರಾಯಿಸ್' ಚಿತ್ರದಲ್ಲಿ ಮಿಂಚುತ್ತಿದ್ದು, ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.(ಚಿತ್ರದಲ್ಲಿ: 'ರಾಯಿಸ್' ಚಿತ್ರದ ಸೆಟ್ ನಲ್ಲಿ ಶಾರುಖ್)

ಎಸ್.ಆರ್.ಕೆ ಮತ್ತು ಮಹೀರಾ ಖಾನ್
ಲೇಟೇಸ್ಟ್ ಮಾಹಿತಿ ಪ್ರಕಾರ ಪಾಕಿಸ್ತಾನಿ ಬೆಡಗಿ ಮಹೀರಾ ಖಾನ್ ಅವರು 'ರಾಯಿಸ್' ಚಿತ್ರದಲ್ಲಿ ಶಾರುಖ್ ಖಾನ್ ಅವರ ಪತ್ನಿಯಾಗಿ ನಟಿಸುತ್ತಿದ್ದಾರೆ.(ಚಿತ್ರದಲ್ಲಿ: 'ರಾಯಿಸ್' ಚಿತ್ರದ ಸೆಟ್ ನಲ್ಲಿ ಶಾರುಖ್)

'ರಾಯಿಸ್' ಕಥೆ
ನಟ ಶಾರುಖ್ ಮತ್ತು ಮಹೀರಾ ಖಾನ್ ಜುಗಲ್ ಬಂದಿಯ 'ರಾಯಿಸ್' ನಿಜ ಕಥೆಯಾಧರಿತ ಸಿನಿಮಾ ಆಗಿದ್ದು, 1980 ರಲ್ಲಿ ಗುಜರಾತ್ ನಲ್ಲಿ ನಡೆದ ನಿಜ ಘಟನೆ ಆಗಿದೆ. (ಚಿತ್ರದಲ್ಲಿ ಶಾರುಖ್ ಜೊತೆ ಕನ್ನಡಿಗ ಸ್ಟಂಟ್ ಮಾಸ್ಟರ್ ರವಿವರ್ಮ)

ಪ್ರೊಡಕ್ಷನ್ಸ್
ಶಾರುಖ್ ಅವರ 'ರಾಯಿಸ್' ಚಿತ್ರಕ್ಕೆ ನಿರ್ದೇಶಕ ರಾಹುಲ್ ಡೋಲಾಕೀಯಾ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.ಈ ಚಿತ್ರಕ್ಕೆ ನಿರ್ಮಾಪಕ ರಿತೇಶ್ ಸಿಧ್ವಾನಿ, ಶಾರುಖ್ ಪತ್ನಿ ಗೌರಿ ಖಾನ್ ಮತ್ತು ಫರಾ ಅಖ್ತರ್ ಈ ಮೂರು ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.

ಎಸ್.ಆರ್.ಕೆ
ಕಿಂಗ್ ಖಾನ್ ಅವರ 'ರಾಯಿಸ್' ಸಿನಿಮಾ ಅಸಹಿಷ್ಣುತೆ ಎಫೆಕ್ಟ್ ನಿಂದ ಸಮಸ್ಯೆ ಎದುರಿಸುತ್ತಿದೆ. ಈ ಮಧ್ಯೆ ಶಾರುಖ್ ವಿರುದ್ಧ ವಿ.ಹೆಚ್.ಪಿಯ ಗುಜರಾತ್ ಕಾರ್ಯದರ್ಶಿ ರಾಂಚೋಡ್ ಭರವಾದ್ ಅವರು ಶಾರುಖ್ ವಿರುದ್ಧ ಕಿಡಿಕಾರಿದ್ದಾರೆ. ಭಾರತದಲ್ಲಿನ ಅಸಹಿಷ್ಣುತೆ ಬಗ್ಗೆ ಮಾತನಾಡುವ ಶಾರುಖ್, ಅಮೀರ್ ಮತ್ತು ಇನ್ನಿತರರು ಪಾಕಿಸ್ತಾನದಲ್ಲಿ ಹಿಂದು ದೇಗುಲದ ಮೇಲೆ ಧಾಳಿ ನಡೆದಿರುವುದನ್ನು ಯಾಕೆ ಖಂಡಿಸುತ್ತಿಲ್ಲ ಎಂದು ರಾಂಚೋಡ್ ಪ್ರಶ್ನಿಸಿದ್ದಾರೆ.


Click it and Unblock the Notifications











