»   » 'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರೂಖ್ ಖಾನ್ ಗೆಟಪ್ ಲೀಕ್

'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರೂಖ್ ಖಾನ್ ಗೆಟಪ್ ಲೀಕ್

Posted By:
Subscribe to Filmibeat Kannada

ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ 'ಟ್ಯೂಬ್ ಲೈಟ್'. ಸಲ್ಮಾನ್ ಖಾನ್ ನಟನೆಯ ಈ ಚಿತ್ರ ಇದೇ ಜೂನ್ 23 ಕ್ಕೆ ವಿಶ್ವದ್ಯಾಂತ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಗೆ ಒಂದು ದಿನ ಬಾಕಿ ಇರುವಾಗಲೇ ಚಿತ್ರತಂಡಕ್ಕೊಂದು ಶಾಕ್ ಎದುರಾಗಿದೆ.

ಹೌದು, 'ಟ್ಯೂಬ್ ಲೈಟ್' ಚಿತ್ರದಲ್ಲಿ ನಟ ಶಾರೂಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದುವರೆಗೂ ಚಿತ್ರತಂಡ ಶಾರೂಖ್ ಅವರ ಪಾತ್ರದ ಬಗ್ಗೆ ಮತ್ತು ಅವರ ಲುಕ್ ಎಲ್ಲವನ್ನು ಗೌಪ್ಯವಾಗಿಟ್ಟಿತ್ತು. ಆದ್ರೆ, 'ಟ್ಯೂಬ್ ಲೈಟ್ ಚಿತ್ರದಲ್ಲಿನ ಶಾರೂಖ್ ಗೆಟಪ್ ಈಗ ಲೀಕ್ ಆಗಿದ್ದು, ಶಾರೂಕ್ ಖಾನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Shah Rukhkhan’s 'Tubelight' Movie Look Leaked

ಅಂದ್ಹಾಗೆ, 'ಟ್ಯೂಬ್ ಲೈಟ್' ಸಿನಿಮಾ 1962ರಲ್ಲಿ ನಡೆದ ಸಿನೋ-ಇಂಡಿಯನ್ ಯುದ್ಧದ ಹಿನ್ನಲೆಯ ಚಿತ್ರವಾಗಿದೆ. 'ಭಜರಂಗಿ ಭಾಯಿಜಾನ್' ಚಿತ್ರದ ನಂತರ ಮತ್ತೆ ನಿರ್ದೇಶಕ ಕಬೀರ್ ಖಾನ್ ಮತ್ತು ಸಲ್ಮಾನ್ ಖಾನ್ ಒಂದಾಗಿದ್ದು, ಮತ್ತೆ ಮ್ಯಾಜಿಕ್ ಮಾಡುವ ಸೂಚನೆ ಕೊಟ್ಟಿದ್ದಾರೆ.

English summary
Pictures of Shahrukh Khan’s 'Tubelight' Cameo Get leaked in Online

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada