ಎರಡನೇ ಮಗುವಿಗೆ ಶಾಹಿದ್ ಕಪೂರ್ ಏನಂತ ಹೆಸರಿಟ್ಟಿದ್ದಾರೆ.?

By Harshitha

ಸೆಪ್ಟೆಂಬರ್ 5, 2018 (ಬುಧವಾರ) ರಂದು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿಗೆ ಮೀರಾ ರಜ್ ಪೂತ್ ಜನ್ಮ ನೀಡಿದರು. ಎರಡನೇ ಮಗುವನ್ನು ಬರಮಾಡಿಕೊಂಡ ಶಾಹಿದ್ ಕಪೂರ್ ಮೊಗದಲ್ಲಿ ಮಂದಹಾಸ ಮೂಡಿದೆ.

2015ರಲ್ಲಿ ಜುಲೈ 7 ರಂದು ಶಾಹಿದ್ ಕಪೂರ್-ಮೀರಾ ರಜ್ ಪೂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016 ಆಗಸ್ಟ್ 26 ರಂದು ಈ ದಂಪತಿಗೆ ಹೆಣ್ಣು ಮಗು ಜನಿಸಿತು.

ತಮ್ಮಿಬ್ಬರ ಹೆಸರನ್ನೂ ಜೋಡಿಸಿ ಹೆಣ್ಣು ಮಗುವಿಗೆ ಮಿಶಾ (ಮಿ-ಮೀರಾ, ಶಾ-ಶಾಹಿದ್) ಕಪೂರ್ ಎಂದು ದಂಪತಿ ನಾಮಕರಣ ಮಾಡಿದ್ದರು. ಇದೀಗ ಗಂಡು ಮಗುವಿಗೆ ಶಾಹಿದ್ ಹಾಗೂ ಮೀರಾ ಏನಂತ ಹೆಸರಿಟ್ಟಿದ್ದಾರೆ ಗೊತ್ತಾ.?

Shahid Kapoor and Mira Rajput name their son Zain Kapoor

ಎರಡು ದಿನಗಳ ಹಿಂದೆಯಷ್ಟೇ ಹುಟ್ಟಿದ ಕೂಸಿಗೆ ಝೇನ್ ಕಪೂರ್ (Zain Kapoor) ಅಂತ ದಂಪತಿ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಶಾಹಿದ್ ಕಪೂರ್ ಟ್ವೀಟ್ ಮಾಡಿದ್ದಾರೆ.

''ಝೇನ್ ಕಪೂರ್ ನಮ್ಮ ಜೊತೆಯಾಗಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗೆ ನನ್ನ ಧನ್ಯವಾದಗಳು'' ಎಂದು ಇಂದು ಶಾಹಿದ್ ಕಪೂರ್ ಟ್ವೀಟ್ ಮಾಡಿದ್ದಾರೆ.

ಹಾಗ್ನೋಡಿದ್ರೆ, ಶಾಹಿದ್ ಕಪೂರ್ ರವರ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಆಗಿತ್ತು. ಅದನ್ನೆಲ್ಲ ಸರಿ ಪಡಿಸಿಕೊಂಡ ಬಳಿಕ ಶಾಹಿದ್ ಕಪೂರ್ ಈ ಶುಭ ಸಮಾಚಾರವನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

More from Filmibeat

English summary
Bollywood Actor Shahid Kapoor and Mira Rajput name their son Zain Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X