ಇದಪ್ಪ ವರಸೆ ಅಂದರೆ ; ನಿಜ ಜೀವನದಲ್ಲಿ ಕಬೀರ್ ಸಿಂಗ್ ಆಗಿ ಬದಲಾದ ಶಾಹಿದ್ ಕಪೂರ್..!

ಭಿಕ್ಷಾಟನೆಗೆ ಇಳಿದ ಮಕ್ಕಳಿಗೆ ಹಣ ಕೊಡುವುದು ಇರಲಿ, ಅವರತ್ತ ತಿರುಗಿ ನೋಡುವ ಸೌಜನ್ಯವೂ ತೋರದ ಕಾರಣಕ್ಕೆ ಇತ್ತೀಚೆಗಷ್ಟೇ ಜನರಿಂದ ವ್ಯಾಪಕವಾಗಿ ಛೀಮಾರಿ ಹಾಕಿಸಿಕೊಂಡವರು ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್.

ಇಂಥ ಮೀರಾ ರಜಪೂತ್ ಕಳೆದ ಒಂದೂವರೆ ಎರಡು ತಿಂಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಅವತ್ತು ಆದ ಅವಮಾನ ಮತ್ತು ಟ್ರೋಲ್ ಗಳಿಂದ ಮನನೊಂದು ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಅಜ್ಞಾತವಾಸದಲ್ಲಿದ್ದಾರೆ ಎಂದು ಎಲ್ಲರು ಅಂದುಕೊಂಡು ಸುಮ್ಮನಾಗಿದ್ದರು. ಆದರೆ, ಅಷ್ಟರಲ್ಲಿಯೇ.. ಮೀರಾ ತಮ್ಮ ಗಂಡ ಶಾಹಿದ್ ಜೊತೆ ಪ್ರತ್ಯಕ್ಷವಾಗಿದ್ದಾರೆ.

shahid-kapoor-gets-angry-at-paps-during-his-date-with-mira-rajput-behave-yourself-guys-says-the-act

ಆದರೆ ವಿಷಯ ಅದಲ್ಲ, ವಿಷಯ ಇರುವುದು ಶಾಹಿದ್ ಕಪೂರ್ ಅವರ ನಡೆ ಮತ್ತು ನುಡಿಯಲ್ಲಿ. ಹೌದು.. ಶಾಹಿದ್ ಕಪೂರ್ ತಮ್ಮ ಪತ್ನಿ ಮೀರಾ ಜೊತೆ ಇತ್ತೀಚೆಗೆ ಊಟಕ್ಕೆಂದು ಹೊಟೇಲ್‌ಗೆ ತೆರಳಿದ್ದರು. ಆದರೆ..ಊಟ ಮುಗಿಸಿ ಹೊರ ಬರುವಷ್ಟರಲ್ಲಿ, ಕ್ಯಾಮರಾ ಪಡೆ ಶಾಹಿದ್ ಮತ್ತು ಮೀರಾ ಮುಂದೆ ಪ್ರತ್ಯಕ್ಷವಾಗಿತ್ತು. ರೆಸ್ಟೋರೆಂಟ್‌ನಿಂದ ಆಚೆ ಬರುತ್ತಿದ್ದಂತೆ ಇದೇ ಕ್ಯಾಮರಾ ಪಡೆ ಇಬ್ಬರನ್ನೂ ಸುತ್ತುವರೆಯಿತು.

ಊಟಕ್ಕೆ ಮುನ್ನ ಮತ್ತು ನಂತರ ಶಾಹಿದ್ ಕಪೂರ್ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಪ್ರಚಾರದ ಹುಚ್ಚಿಗೆ ತಾವೇ ನೇಮಿಸಿಕೊಂಡ ಕ್ಯಾಮರಾ ಕಂಡು ಶಾಹಿದ್ ಏಕಾಏಕಿ ಸಿಡಿದೆದ್ದರು. ನಿಲ್ಲಿಸುತ್ತೀರಾ ಇಲ್ಲವಾ ಎಂದು ಕೂಗಾಡಿದರು.

shahid-kapoor-gets-angry-at-paps-during-his-date-with-mira-rajput-behave-yourself-guys-says-the-act

ಸಹಜವಾಗಿ ಶಾಹಿದ್ ಕಪೂರ್ ಅವರ ಈ ಕೋಪ-ತಾಪ ಎಲ್ಲವೂ ಕ್ಯಾಮರಾದಲ್ಲಿ ರೆಕಾರ್ಡ್ ಆದ ಹಿನ್ನೆಲೆಯಲ್ಲಿ ಈಗ ಸಾಮಾಜಿಕ ಜಾಲತಾಣ ರೊಚ್ಚಿಗೆದ್ದಿದೆ. ಶಾಹಿದ್ ಕಪೂರ್ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದೆ.

ಯಶಸ್ಸು ಸಿಕ್ಕ ಬಳಿಕ ಶಾಹಿದ್​ ಕಪೂರ್​ಗೆ ಆ್ಯಟಿಟ್ಯೂಡ್​ ಬಂದಿದೆ' ಎಂದು ಕೆಲವರು ಕಮೆಂಟ್​ ಮಾಡಿದ್ದರೆ. 'ನಿಜ ಜೀವನದಲ್ಲೂ ಕಬೀರ್​ ಸಿಂಗ್​ ಪಾತ್ರದ ರೀತಿ ಮಾಡುತ್ತಿದ್ದಾರೆ' ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ. ಇದೆಲ್ಲವೂ ಕಬೀರ್ ಸಿಂಗ್ ಚಿತ್ರದ ಅಡ್ಡ ಪರಿಣಾಮ ಎಂಬ ಅಭಿಪ್ರಾಯವನ್ನೂ ಅನೇಕರು ಇದೇ ಸಮಯದಲ್ಲಿ ಹೊರ ಹಾಕಿದ್ದಾರೆ.

ಇನ್ನೂ ಕೆಲವರು ಶಾಹಿದ್ ಕಪೂರ್ ಅವರ ವರ್ತನೆ ಸರಿ ಇದೆ, ಯಾಕೆಂದರೆ ಸೆಲೆಬ್ರಿಟಿಗಳಿಗೂ ವ್ಯೆಯಕ್ತಿಕ ಜೀವನ ಇರುತ್ತೆ ಎಂದು ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ಅವರ ಈ ಡಿನ್ನರ್ ಡೇಟ್ ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಂದ್ಹಾಗೇ ಶಾಹಿದ್ ಕಪೂರ್ ಸದ್ಯಕ್ಕೆ ಅಶ್ವತ್ಥಾಮ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಕನ್ನಡಿಗ ಸಚಿನ್ ರವಿ ನಿರ್ದೇಶನ ಇರಲಿದೆ. ಸಚಿನ್ ರವಿ ಬೇರೆ ಯಾರು ಅಲ್ಲ ಬದಲಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಅನ್ನುವುದು ನಿಮ್ಮ ಗಮನಕ್ಕಿರಲಿ. ಉಳಿದಂತೆ ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ 2015ರ ಜುಲೈನಲ್ಲಿ ಮದುವೆ ಆದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ದಂಪತಿಗೆ ಏಳು ವರ್ಷದ ಮಿಶಾ ಎಂಬ ಪುತ್ರಿ ಹಾಗೂ ನಾಲ್ಕು ವರ್ಷದ ಝೈನ್​ ಎಂಬ ಪುತ್ರ ಇದ್ದಾನೆ.

More from Filmibeat

English summary
Bollywood Actor Kabir Singh Fame Shahid Kapoor gets angry at paps during his date with mira rajput, Behave yourself guys Says The Actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X