»   » ಕನ್ನಡ ಆಯ್ತು, ಈಗ ಹಿಂದಿಯಲ್ಲಿ 'ಅರ್ಜುನ್ ರೆಡ್ಡಿ'.! ಹೀರೋ ಇವ್ರಾ.?

ಕನ್ನಡ ಆಯ್ತು, ಈಗ ಹಿಂದಿಯಲ್ಲಿ 'ಅರ್ಜುನ್ ರೆಡ್ಡಿ'.! ಹೀರೋ ಇವ್ರಾ.?

Posted By:
Subscribe to Filmibeat Kannada

ತೆಲುಗು ಸಿನಿಮಾ 'ಅರ್ಜುನ್ ರೆಡ್ಡಿ' ಸೂಪರ್ ಹಿಟ್ ಆಗಿದ್ದೇ ತಡ ಆ ಭಾಷೆಯಲ್ಲಿ ರೀಮೇಕ್ ಆಗ್ತಿದೆ. ಈ ಭಾಷೆಯಲ್ಲಿ ರೀಮೇಕ್ ಆಗ್ತಿದೆ ಎಂಬ ಸುದ್ದಿಗಳೇ. ಕನ್ನಡದವರು ರೀಮೇಕ್ ಹಕ್ಕು ಖರೀದಿಸಿಟ್ಟುಕೊಂಡಿದ್ದಾರೆ. ಆದ್ರೆ, ಯಾರು ಮಾಡಲಿದ್ದಾರೆ ಎಂಬುದು ಗೌಪ್ಯವಾಗಿದೆ.

ಇದೀಗ, ಹಿಂದಿಯಲ್ಲಿ 'ಅರ್ಜುನ್ ರೆಡ್ಡಿ' ಸಿನಿಮಾ ರೀಮೇಕ್ ಆಗೋದು ಬಹುತೇಕ ಖಚಿತವಾಗಿದೆ. ಬಾಲಿವುಡ್ ನಲ್ಲಿ ನಟ ಶಾಹೀದ್ ಕಪೂರ್ 'ಅರ್ಜುನ್ ರೆಡ್ಡಿ' ಆಗಲಿದ್ದಾರಂತೆ.

ಮನೆಯಿಂದ 'ಶಾಹೀದ್ ಕಪೂರ್'ರನ್ನ ಹೊರಹಾಕಿದ್ದರಂತೆ ಪತ್ನಿ.!

ಈ ಹಿಂದೆ ಅರ್ಜುನ್ ಕಪೂರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಆದ್ರೆ, ನಿರ್ದೇಶನ ವಿಚಾರದಲ್ಲಿ ಕಾಂಪ್ರುಮೈಸ್ ಆಗದಿದ್ದ ಕಾರಣ ಅವರನ್ನ ಬಿಟ್ಟು, ಅಂತಿಮವಾಗಿ ಶಾಹೀದ್ ಅವರನ್ನ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

Shahid Kapoor In Vijay Deverakondas Arjun Reddy

ಜುಲೈನಲ್ಲಿ ಸಿನಿಮಾ ಆರಂಭಿಸಲು ನಿರ್ಧರಿಸಿರುವ ಚಿತ್ರತಂಡ ನಾಯಕಿಯಾಗಿ ಹುಡುಕಾಟ ನಡೆಸುತ್ತಿದೆ. ದೆಹಲಿ ಮತ್ತು ವಿದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

ಹಿಂದಿಯಲ್ಲೂ ಈ ಚಿತ್ರವನ್ನ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನುಳಿದಂತೆ ತಮಿಳಿನಲ್ಲಿ ನಟ ವಿಕ್ರಂ ಅವರ ಮಗ ಧ್ರುವ ನಟಿಸುತ್ತಿದ್ದಾರೆ.

English summary
Vijay Deverakonda's highly acclaimed Telugu film 'Arjun Reddy' is finally getting remade in Bollywood. While reports suggested that Arjun Kapoor will be stepping into Vijay's shoes, a leading tabloid recently confirmed that it is Shahid Kapoor who has finally bagged the role.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X