ಬಾಲಿವುಡ್ ಅಂಗಳದಲ್ಲಿ ಶುರುವಾಯ್ತು 'ಅರ್ಜುನ್ ರೆಡ್ಡಿ' ಹವಾ
ಸಾಮಾನ್ಯವಾಗಿ ಬಾಲಿವುಡ್ ಅಂಗಳದಲ್ಲಿ ಹಿಟ್ ಆದ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ, ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ರಿಮೇಕ್ ಆಗುವುದು ಸಾಮಾನ್ಯ ವಿಚಾರ. ಆದರೆ, ಟಾಲಿವುಡ್ ನಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಲಿಸ್ಟ್ ಸೇರಿದ್ದ 'ಅರ್ಜುನ್ ರೆಡ್ಡಿ' ಸಿನಿಮಾ ಬಿಟೌನ್ ನಲ್ಲಿ ಸೆಟ್ಟೇರಲು ಸಜ್ಜಾಗುತ್ತಿದೆ.
ಕನ್ನಡದಲ್ಲಿ ಧನಂಜಯ 'ಅರ್ಜುನ್ ರೆಡ್ಡಿ' ಆಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಚಂದನವನಕ್ಕೂ ಮುನ್ನವೇ ಬಾಲಿವುಡ್ ಅಂಗಳದಲ್ಲಿ 'ಅರ್ಜುನ್ ರೆಡ್ಡಿ' ಸಿನಿಮಾ ಶುರುವಾಗಲಿದೆ.

ಎಲ್ಲಾ ಭಾಷೆಯ ಸಿನಿಮಾರಂಗದವರನ್ನೂ ತನ್ನತ್ತ ನೋಡುವಂತೆ ಮಾಡಿದ್ದ 'ಅರ್ಜುನ್ ರೆಡ್ಡಿ' ಸಿನಿಮಾ ಬಾಲಿವುಡ್ ಮಂದಿಯನ್ನು ಬಿಟ್ಟಿಲ್ಲ. ಬಿ ಟೌನ್ ನ ಕ್ಯೂಟ್ ಹೀರೋ ಶಾಹಿದ್ ಕಪೂರ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸಂದೀಪ್ ವಂಗಾ ಅವರೇ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ.

ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಈಗಾಗಲೇ ನಿರ್ದೇಶಕರು ಸಿನಿಮಾಗೆ ಬೇಕಾಗಿರುವ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರಂತೆ.


Click it and Unblock the Notifications











