'ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್' ಆದ ಬಾಲಿವುಡ್ ನಟ ಶಾಹಿದ್ ಕಪೂರ್

By Naveen

ಬಾಲಿವುಡ್ ನಟ ಶಾಹಿದ್ ಕಪೂರ್ 'ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್' ಆಗಿದ್ದಾರೆ. ಇದೀಗ 'ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ 2017' ಪಟ್ಟಿ ಹೊರಬಂದಿದ್ದು, ಇದರಲ್ಲಿ ಶಾಹಿದ್ ಕಪೂರ್ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

50 ಜನರ ಈ ಪಟ್ಟಿಯಲ್ಲಿ ಶಾಹಿದ್ ನಂ1 ಆಗಿದ್ದಾರೆ. ಶಾಹಿದ್ ಕಪೂರ್ ನಂತರದ ಸ್ಥಾನದಲ್ಲಿ ನಟ ಹೃತಿಕ್ ರೋಷನ್ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಪಾಪ್ ಸ್ಟಾರ್ ಝಯಾನ್ ಮಲಿಕ್, ವಿವಿಯನ್ ಡಿಸೆನಾ, ಆಶಿಶ್ ಶರ್ಮಾ ಮೂರು ಜನ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

Shahid Kapoor is now Sexiest Asian Man

'ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್' ಪಟ್ಟ ಪಡೆದ ಶಾಹಿದ್ ಕಪೂರ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ''ಇದು ಸದ್ಯ ಆಗಿದ್ದು ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹ ದಿಂದ'' ಅಂತ ಹೇಳಿರುವ ಅವರು ''ನನ್ನ ಪ್ರಕಾರ ಸೆಕ್ಸಿ ಎನ್ನುವುದು ಶರೀರದಿಂದ ಅಲ್ಲ, ಮನಸ್ಸಿನ ದೃಷ್ಟಿಕೋನದಿಂದ.'' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಶಾಹಿದ್ ಕಪೂರ್ 2013ರಲ್ಲಿ 'ಇಷ್ಕ್ ವಿಷ್ಕ್' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಆ ಬಳಿಕ ಅನೇಕ ಸೂಪರ್ ಹಿಟ್ ಸಿನಿಮಾ ನೀಡಿದ ಇವರು ಸದ್ಯ 'ಪದ್ಮಾವತಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ, ಇತ್ತೀಚಿಗಷ್ಟೆ ನಟಿ ಪ್ರಿಯಾಂಕ ಚೋಪಾ 'ಏಷ್ಯಾದ ಸೆಕ್ಸಿಯಸ್ಟ್ ಮಹಿಳೆ' ಆಗಿದ್ದು, ಈಗ ನಟ ಶಾಹಿದ್ ಕಪೂರ್ 'ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್' ಅಂತ ಕರೆಸಿಕೊಂಡಿದ್ದಾರೆ.

More from Filmibeat

English summary
Bollywood actor Shahid Kapoor is now Sexiest Asian Man. The actor has topped the list of 50 Sexiest Asian Men 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X