For Quick Alerts
  ALLOW NOTIFICATIONS  
  For Daily Alerts

  ಶಾಹಿದ್ ಕಪೂರ್-ಮೀರಾ ದಂಪತಿಗೆ ಗಂಡು ಮಗು ಜನನ

  By Harshitha
  |

  ತಮ್ಮ ಅಭಿಮಾನಿಗಳಿಗೆಲ್ಲಾ ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತೊಂದು ಬಾರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

  ಶಾಹಿದ್ ಕಪೂರ್ ಹಾಗೂ ಮೀರಾ ರಜ್ ಪೂತ್ ದಂಪತಿಗೆ ಗಂಡು ಮಗು ಜನನವಾಗಿದೆ. ಸೆಪ್ಟೆಂಬರ್ 5, 2018 (ಬುಧವಾರ) ರಂದು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವಿಗೆ ಮೀರಾ ರಜ್ ಪೂತ್ ಜನ್ಮ ನೀಡಿದ್ದಾರೆ.

  ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ನಿನ್ನೆ ಸಂಜೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ಮೀರಾ ದಾಖಲಾದರು. ಶಾಹಿದ್ ಕಪೂರ್ ಹಾಗೂ ಮೀರಾ ರಜ್ ಪೂತ್ ಕುಟುಂಬ ಆಸ್ಪತ್ರೆಯಲ್ಲಿ ಹಾಜರಿದ್ದು, ಗಂಡು ಮಗುವನ್ನ ಬರಮಾಡಿಕೊಂಡರು.

  ನಟ ಶಾಹಿದ್ ಕಪೂರ್ ಕಡೆಯಿಂದ ಬಂದ ಸಿಹಿ ಸುದ್ದಿ ಇದುನಟ ಶಾಹಿದ್ ಕಪೂರ್ ಕಡೆಯಿಂದ ಬಂದ ಸಿಹಿ ಸುದ್ದಿ ಇದು

  2015 ಜುಲೈ 7 ರಂದು ದಾಂಪತ್ಯ ಜೀವನಕ್ಕೆ ಶಾಹಿದ್ ಕಪೂರ್ ಹಾಗೂ ಮೀರಾ ಕಾಲಿಟ್ಟರು. ಈ ದಂಪತಿಗೆ ಈಗಾಗಲೇ ಎರಡು ವರ್ಷದ ಹೆಣ್ಣು ಮಗುವಿದೆ. 2016 ಆಗಸ್ಟ್ 26 ರಂದು ಹೆಣ್ಣು ಮಗುವಿಗೆ ಮೀರಾ ಜನ್ಮ ನೀಡಿದ್ದರು.

  ಸದ್ಯ ಸಂತಸದಲ್ಲಿ ಇರುವ ಶಾಹಿದ್-ಮೀರಾ ದಂಪತಿಗೆ ಬಾಲಿವುಡ್ ತಾರೆಯರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

  English summary
  Bollywood Lovely Couple Shahid Kapoor-Mira Rajput are blessed with a Baby Boy on September 5th at Hinduja hospital, Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X