'ಕಬೀರ್ ಸಿಂಗ್' ನಂತರ ಮತ್ತೊಂದು ಸೌತ್ ಚಿತ್ರದ ರೀಮೇಕ್ನಲ್ಲಿ ಶಾಹೀದ್ ಕಪೂರ್.?

ತೆಲುಗು ಬ್ಲಾಕ್ ಬಸ್ಟರ್ ಅರ್ಜುನ್ ರೆಡ್ಡಿ ಚಿತ್ರದ ಹಿಂದಿ ರೀಮೇಕ್ ಕಬೀರ್ ಸಿಂಗ್ ಕಳೆದ ಶುಕ್ರವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಶಾಹಿದ್ ಕಪೂರ್ ನಟನೆಯ ಈ ಚಿತ್ರ ನಾಲ್ಕು ದಿನದಲ್ಲಿ ಸುಮಾರು 80 ಕೋಟಿ ಗಳಿಕೆ ಕಂಡು ವರ್ಷದ ದೊಡ್ಡ ಹಿಟ್ ಎನಿಸಿಕೊಂಡಿದೆ.

ಪದ್ಮಾವತ್ ಚಿತ್ರದ ನಂತರ ಶಾಹೀದ್ ಕಪೂರ್ ನಟನೆಯ ಚಿತ್ರ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ ಎಂದು ಬಿಟೌನ್ ನಲ್ಲಿ ಚರ್ಚೆಯಾಗ್ತಿದೆ. ಹೀಗಿರುವಾಗ ಮತ್ತೊಂದು ಸೌತ್ ಇಂಡಿಯಾ ಚಿತ್ರವನ್ನ ರೀಮೇಕ್ ಮಾಡಲು ಶಾಹೀದ್ ಕಪೂರ್ ಸಜ್ಜಾಗಿದ್ದಾರಂತೆ.

ಈಗಾಗಲೇ ಬಾಲಿವುಡ್ ನ ಖ್ಯಾತ ನಿರ್ಮಾಪಕರು ಮೂಲ ಚಿತ್ರದ ರೀಮೇಕ್ ಹಕ್ಕು ಖರೀದಿಸಿದ್ದು, ಶಾಹೀದ್ ಕಪೂರ್ ಅವರನ್ನ ನಾಯಕನನ್ನಾಗಿಸುವ ನಿರ್ಧಾರ ಮಾಡಿದ್ದಾರಂತೆ. ಅಷ್ಟಕ್ಕೂ, ಆ ಸೂಪರ್ ಹಿಟ್ ಸಿನಿಮಾ ಯಾವುದು? ರೀಮೇಕ್ ಹಕ್ಕು ಹೊಂದಿರುವ ಆ ನಿರ್ಮಾಪಕ ಯಾರು? ಮುಂದೆ ಓದಿ......

ಕ್ರಿಕೆಟರ್ ಆಗ್ತಾರಾ ಶಾಹೀದ್ ಕಪೂರ್.!

ಕ್ರಿಕೆಟರ್ ಆಗ್ತಾರಾ ಶಾಹೀದ್ ಕಪೂರ್.!

ಏಪ್ರಿಲ್ ತಿಂಗಳಲ್ಲಿ ತೆರೆಕಂಡಿದ್ದ ತೆಲುಗು ಸಿನಿಮಾ ಜೆರ್ಸಿ ಚಿತ್ರವನ್ನ ಹಿಂದಿಯಲ್ಲಿ ಮಾಡಲು ಪ್ಲಾನ್ ಮಾಡಲಾಗಿದೆ. ನಾನಿ, ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದ ಈ ಚಿತ್ರವನ್ನ ಹಿಂದಿಯಲ್ಲಿ ಶಾಹೀದ್ ಕಪೂರ್ ಮಾಡುವ ಸಾಧ್ಯತೆ ಇದೆಯಂತೆ.

ಕರಣ್ ಜೋಹರ್ ಬಳಿ ಇದೆ ರೀಮೇಕ್ ಹಕ್ಕು.!

ಕರಣ್ ಜೋಹರ್ ಬಳಿ ಇದೆ ರೀಮೇಕ್ ಹಕ್ಕು.!

ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಜೆರ್ಸಿ ಚಿತ್ರದ ಹಿಂದಿ ರೀಮೇಕ್ ಹಕ್ಕು ಖರೀದಿಸಿದ್ದು, ಶಾಹೀದ್ ಕಪೂರ್ ಮೊದಲ ಆಯ್ಕೆ ಎಂದು ತೀರ್ಮಾನಿಸಿದ್ದಾರಂತೆ. ಸದ್ಯ ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಣ್ಬೀರ್ ಕಪೂರ್, ಮೌನಿ ರಾಯ್ ನಟನೆಯ ಬ್ರಹ್ಮಾಸ್ತ್ರ ಚಿತ್ರವನ್ನ ಕರಣ್ ನಿರ್ಮಿಸುತ್ತಿದ್ದಾರೆ.

ತೆಲುಗು ನಿರ್ದೇಶಕರೇ ಡೈರೆಕ್ಷನ್.!

ತೆಲುಗು ನಿರ್ದೇಶಕರೇ ಡೈರೆಕ್ಷನ್.!

ಮೂಲ ಚಿತ್ರವನ್ನ ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೌರಿ ಅವರೇ ಹಿಂದಿಯ ಜೆರ್ಸಿಗೂ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆಯಂತೆ. ರೀಮೇಕ್ ಹಕ್ಕು ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ, ದೊಡ್ಡ ಮೊತ್ತ ಎಂದು ಹೇಳಲಾಗ್ತಿದೆ.

ದಕ್ಷಿಣ ಭಾರತದ ಮೇಲೆ ಬಾಲಿವುಡ್ ಕಣ್ಣು.!

ದಕ್ಷಿಣ ಭಾರತದ ಮೇಲೆ ಬಾಲಿವುಡ್ ಕಣ್ಣು.!

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಮಂದಿ ಸೌತ್ ಇಂಡಿಯಾ ಸಿನಿಮಾಗಳನ್ನ ರೀಮೇಕ್ ಮಾಡುವುದು ಹೆಚ್ಚಾಗಿದೆ. ಈಗಷ್ಟೇ ಅರ್ಜುನ್ ರೆಡ್ಡಿ ಸಿನಿಮಾ ರೀಮೇಕ್ ಮಾಡಿದ್ದರು. ಅಷ್ಟರಲ್ಲೇ ಇನ್ನೊಂದು ಹಿಟ್ ಸಿನಿಮಾದ ಹಕ್ಕು ಖರೀದಿಸಿದ್ದಾರೆ.

More from Filmibeat

English summary
After Huge success of Kabir singh, Bollywood actor shahid kapoor ready to do another south indian blockbuster remake in hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X