twitter
    For Quick Alerts
    ALLOW NOTIFICATIONS  
    For Daily Alerts

    Jersey Postponed: 'ಕೆಜಿಎಫ್ 2'ಗೆ ಬೆದರಿದ 'ಜೆರ್ಸಿ': ಬಿಡುಗಡೆ ದಿನಾಂಕ ಮುಂದೂಡಿಕೆ

    |

    'ಕೆಜಿಎಫ್ 2' ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹೈಪ್ ಯಾವ ಮಟ್ಟಿಗಿದೆಯೆಂದರೆ ಅದರ ಜೊತೆಗೆ ಬಿಡುಗಡೆ ಅಗುತ್ತಿರುವ ಸೂಪರ್ ಸ್ಟಾರ್ ವಿಜಯ್‌ರ 'ಬೀಸ್ಟ್' ಸಿನಿಮಾ ಸಹ ಮಂಕಾಗುವ ಲಕ್ಷಗಳು ಗೋಚರಿಸುತ್ತಿವೆ.

    'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ಕ್ಕೆ ಬಿಡುಗಡೆ ಆಗುತ್ತಿದ್ದರೆ, 'ಬೀಸ್ಟ್' ಸಿನಿಮಾ ಏಪ್ರಿಲ್ 13 ಕ್ಕೆ ಬಿಡುಗಡೆ ಆಗುತ್ತಿದೆ. ಈ ಎರಡು ಮದಗಜಗಳ ನಡುವೆ ಹಿಂದಿಯ 'ಜೆರ್ಸಿ' ಸಿನಿಮಾ ತಾವೂ ಏಪ್ರಿಲ್ 14ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಘೋಷಿಸಿತ್ತು. ಸಿನಿಮಾ ಬಿಡುಗಡೆಗೆ ಪ್ರಚಾರ ಸಹ ಮಾಡಿತ್ತು. ಆದರೆ ಈಗ ತಪ್ಪಿನ ಅರಿವಾಗಿ 'ಜೆರ್ಸಿ' ಸಿನಿಮಾ ಬಿಡುಗಡೆ ಮುಂದೂಡಿದೆ.

    ಏಪ್ರಿಲ್ 14 ಕ್ಕೆ ಬಿಡುಗಡೆ ಆಗಬೇಕಿದ್ದ 'ಜೆರ್ಸಿ' ಸಿನಿಮಾ ಬಿಡುಗಡೆ ದಿನಾಂಕವನ್ನು ಒಂದು ವಾರ ಮುಂದೆ ಹಾಕಿಕೊಂಡಿದೆ. ಈ ಸಿನಿಮಾ ಈಗ ಏಪ್ರಿಲ್ 22 ಕ್ಕೆ ಬಿಡುಗಡೆ ಆಗಲಿದೆ. ಆ ಮೂಲಕ 'ಕೆಜಿಎಫ್ 2' ಸಿನಿಮಾದಿಂದ ತಮ್ಮ ಸಿನಿಮಾಕ್ಕೆ ಆಗಬಹುದಾಗಿದ್ದ ನಷ್ಟವನ್ನು ಕಡಿಮೆ ಮಾಡಿಕೊಂಡಿದೆ 'ಜೆರ್ಸಿ'.

    ಸ್ಪರ್ಧೆ ಮಾಡಬಲ್ಲೆವು ಎಂದಿದ್ದ ಶಾಹಿದ್

    ಸ್ಪರ್ಧೆ ಮಾಡಬಲ್ಲೆವು ಎಂದಿದ್ದ ಶಾಹಿದ್

    ಈ ಹಿಂದೆ ತಮ್ಮ ಸಿನಿಮಾ 'ಕೆಜಿಎಫ್ 2' ಜೊತೆ ಬಿಡುಗಡೆ ಆಗಲಿರುವ ಬಗ್ಗೆ ಮಾತನಾಡಿದ್ದ ಶಾಹಿದ್ ಕಪೂರ್, ''ಕೆಜಿಎಫ್ 2' ಸಿನಿಮಾ ಆಕ್ಷನ್ ಸಿನಿಮಾ, ಅದಕ್ಕೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ. ನಮ್ಮದು ಕ್ರೀಡೆಯ ಕುರಿತ ಕತೆ ಹೊಂದಿರುವ ಕೌಟುಂಬಿಕ ಸಿನಿಮಾ, ನಮ್ಮ ಸಿನಿಮಾಕ್ಕೆ ನಮ್ಮದೇ ಆದ ಅಭಿಮಾನಿಗಳಿದ್ದಾರೆ'' ಎಂದಿದ್ದರು. ಆ ಮೂಲಕ ತಾವು 'ಕೆಜಿಎಫ್ 2' ಜೊತೆ ಸ್ಪರ್ಧೆ ಮಾಡಬಲ್ಲೆವು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈಗ ವಸ್ತುಸ್ಥಿತಿಯ ಅರಿವಾದಂತಿದ್ದು, ಸಿನಿಮಾದ ಬಿಡುಗಡೆ ಮುಂದಕ್ಕೆ ಹಾಕಿಕೊಂಡಿದ್ದಾರೆ.

    'ಕೆಜಿಎಫ್ 2' ಅನ್ನು 'ಕೆಜಿಎಫ್' ಅಭಿಮಾನಿಗಷ್ಟೆ ನೋಡುತ್ತಾರೆ ಎಂದಿದ್ದ ಶಾಹಿದ್

    'ಕೆಜಿಎಫ್ 2' ಅನ್ನು 'ಕೆಜಿಎಫ್' ಅಭಿಮಾನಿಗಷ್ಟೆ ನೋಡುತ್ತಾರೆ ಎಂದಿದ್ದ ಶಾಹಿದ್

    'ಜೆರ್ಸಿ' ಸಿನಿಮಾಕ್ಕಾಗಿ ಸಾಕಷ್ಟು ಪ್ರಚಾರವನ್ನೂ ಈ ತಂಡ ಮಾಡಿತ್ತು, ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಹಿದ್ ಕಪೂರ್, 'ಕೆಜಿಎಫ್ 2' ಸೀಕ್ವೆಲ್ ಆಗಿರುವುದರಿಂದ 'ಕೆಜಿಎಫ್' ಮೊದಲ ಸಿನಿಮಾ ನೋಡಿದ ಜನ ಸೀಕ್ವೆಲ್ ಅನ್ನು ನೋಡುತ್ತಾರೆ. ಹೀಗಾಗಿ ನಮಗೆ ನಮ್ಮದೆ ಆದ ಸ್ಪೇಸ್ ಸಿಗುತ್ತೆ ಎಂದು ಕೊಂಡಿದ್ದೇನೆ. ನಮಗೆ ನಾಲ್ಕು ರಜೆಯ ದಿನಗಳಿವೆ. ಥಿಯೇಟರ್‌ಗಳೂ ಸಿಕ್ಕಿವೆ. ಹೀಗಾಗಿ ಪ್ರೇಕ್ಷಕರು ಎಲ್ಲಾ ಸಿನಿಮಾವನ್ನು ನೋಡುತ್ತಾರೆ. ಈ ಸಮಯದಲ್ಲಿ ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದರೆ, ಇದು ಸರಿಯಾದ ಸಮಯ ಎಂದರ್ಥ. ಇಲ್ಲಾ ನಾವೇಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೆವು. ಮೂರು ವಿಭಿನ್ನ ಸಿನಿಮಾಗಳಿಗೆ ಅವರದ್ದೇ ಆದ ಸ್ಪೇಸ್ ಸಿಕ್ಕಿದೆ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬರುತ್ತಿರುವುದು ಖುಷಿ ವಿಚಾರ." ಎಂದು ಶಾಹಿದ್ ಅಭಿಪ್ರಾಯ ಪಟ್ಟಿದ್ದರು. ಆದರೆ ಈಗ ಅಭಿಪ್ರಾಯ ಬದಲಿಸಿಕೊಂಡಂತಿದೆ.

    ವಿಜಯ್ ರನ್ನು ಹೊಗಳಿ, ಯಶ್ ಗೆ ಆಲ್ ದಿ ಬೆಸ್ಟ್ ಅಷ್ಟೆ ಹೇಳಿದ್ದ ಶಾಹಿದ್

    ವಿಜಯ್ ರನ್ನು ಹೊಗಳಿ, ಯಶ್ ಗೆ ಆಲ್ ದಿ ಬೆಸ್ಟ್ ಅಷ್ಟೆ ಹೇಳಿದ್ದ ಶಾಹಿದ್

    ಇದೇ ಸಮಯದಲ್ಲಿ ತಮಿಳಿನ 'ಬೀಸ್ಟ್' ಸಿನಿಮಾವನ್ನು ಹೊಗಳಿ, 'ಕೆಜಿಫ್ 2' ಕೇವಲ ವಿಶ್ ಆಷ್ಟೆ ಮಾಡಿದ್ದರು ಶಾಹಿದ್, ಇದು ಯಶ್ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು, ''ನಾನು ವಿಜಯ್ ಅವರ ದೊಡ್ಡ ಫ್ಯಾನ್. ನಾನು ಅವರ ಸಿನಿಮಾವನ್ನು ಇಷ್ಟ ಪಡುತ್ತೇನೆ. ಅವರು ಒಬ್ಬ ಉತ್ತಮ ಡ್ಯಾನ್ಸರ್. ಬೀಸ್ಟ್ ಸಿನಿಮಾ ಅತ್ಯದ್ಭುತ ಸಿನಿಮಾ ಆಗುತ್ತೆ ಎನ್ನುವ ನಂಬಿಕೆ ಇದೆ ಎಂದಿದ್ದರು. ''ರಾಕಿಭಾಯ್‌ಗೆ ಆಲ್‌ ದಿ ಬೆಸ್ಟ್ ಹೇಳುತ್ತೇನೆ. ಇದೊಂದು ವಿಭಿನ್ನ ಕಥೆ, ದೊಡ್ಡ ಆಕ್ಷನ್ ಸಿನಿಮಾ, ನಮ್ಮ ಭಾವನಾತ್ಮಕ ಸ್ಟೋರ್ಟ್ಸ್ ಸಿನಿಮಾ. ಕೌಟುಂಬಿಕ ಕಥೆ ಹಾಗೂ ಸಂದೇಶವಿದೆ'' ಎಂದಿದ್ದರು.

    ತೆಲುಗಿನ 'ಜೆರ್ಸಿ' ಸಿನಿಮಾದ ರೀಮೇಕ್

    ತೆಲುಗಿನ 'ಜೆರ್ಸಿ' ಸಿನಿಮಾದ ರೀಮೇಕ್

    ಶಾಹಿದ್ ಕಪೂರ್ ನಟನೆಯ 'ಜೆರ್ಸಿ' ಸಿನಿಮಾ ತೆಲುಗಿನ ರಾಷ್ಟ್ರಪ್ರಶಸ್ತಿ ವಿಜೇತ 'ಜೆರ್ಸಿ' ಸಿನಿಮಾದ ರೀಮೇಕ್. ತೆಲುಗಿನ ಸಿನಿಮಾದಲ್ಲಿ ನಟ ನಾನಿ ನಟಿಸಿದ್ದರು. ಕ್ರಿಕೆಟ್ ಕುರಿತ ಕತೆಯನ್ನು ಹೊಂದಿರುವ ಈ ಸಿನಿಮಾ ಹಿಟ್ ಅಗಿತ್ತು. ರಾಷ್ಟ್ರಪ್ರಶಸ್ತಿ ಸಹ ಗಳಿಸಿತು. ಇದೇ ಸಿನಿಮಾವನ್ನು ಈಗ ಶಾಹಿದ್ ರೀಮೇಕ್ ಮಾಡಿದ್ದಾರೆ. ಈ ಹಿಂದೆ ತೆಲುಗಿನ ಜನಪ್ರಿಯ ಸಿನಿಮಾ 'ಅರ್ಜುನ್ ರೆಡ್ಡಿ'ಯನ್ನು ರೀಮೇಕ್ ಮಾಡಿ ದೊಡ್ಡ ಹಿಟ್ ಗಳಿಸಿಕೊಂಡಿದ್ದರು. ಗ ತೆಲುಗಿನ 'ಜೆರ್ಸಿ' ಸಿನಿಮಾ ರೀಮೇಕ್ ಮಾಡುತ್ತಿದ್ದಾರೆ.

    English summary
    Shahid Kapoors Jersey movie postponed to April 22. Earlier It was shceduled to release on April 14 along with KGF 2 and Beast.
    Monday, April 11, 2022, 11:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X