ಯಶ್ ಬಾಲಿವುಡ್ ನಂ.1 ಸ್ಟಾರ್ ಎಂದ ಬಾಲಿವುಡ್ ಸ್ಟಾರ್ ನಟ!
'ಕೆಜಿಎಫ್ 2' ಸಿನಿಮಾದ ಬಳಿಕ ನಟ ರಾಕಿಂಗ್ ಸ್ಟಾರ್ ಯಶ್ ಅವರ ವರ್ಚ್ಚಸು ದುಪ್ಪಟ್ಟಾಗಿದೆ. ಸಾವಿರ ಕೋಟಿ ಸರದಾರ ಎನಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ದೇಶದೆಲ್ಲೆಡೆ ಸುಪ್ರಸಿದ್ಧ ನಟನಾಗಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದ, ಬಾಲಿವುಡ್ ಮಂದಿ ಇದೀಗ ಕನ್ನಡದ ನಟನೆಗೆ ಜೈಕಾರ ಹಾಕುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ರಾಕಿ ಭಾಯ್ ಆಗಿರುವುದಕ್ಕೆ ಕಾರಣ ಕೆಜಿಎಫ್ ಸಿನಿಮಾ. ಕೆಜಿಎಫ್ ಸಿನಿಮಾ ಅಬ್ಬರಿಸಿದ ರೀತಿಗೆ ಪ್ರತಿಯೊಬ್ಬರೂ ತಲೆಬಾಗಿದ್ದಾರೆ. ಯಾರೂ ಊಹಿಸದಷ್ಟು ದೊಡ್ಡ ಮಟ್ಟಿಗೆ ಕೆಜಿಎಫ್ ಯಶಸ್ಸು ಕಂಡಿದ್ದು ಎಲ್ಲರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.
ಬಾಲಿವುಡ್ ತಾರೆಯರು ನಟ ಯಶ್ ಹೆಸರನ್ನು ಹಲವು ಬಾರಿ ತೆಗೆದುಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಅಥವಾ ಭಾರತೀಯ ಚಿತ್ರರಂಗಕ್ಕೆ ಸಂಬಂಧಪಟ್ಟ ವಿಚಾರಗಳು ಬಂದಾಗ ನಟ ರಾಕಿಂಗ್ ಸ್ಟಾರ್ ಯಶ್ ಹೆಸರು ಪ್ರಸ್ತಾಪ ಮಾಡಲಾಗುತ್ತಿದೆ. ಅನನ್ಯಾ ಪಾಂಡೆ ನಂತರ ಇದೀಗ ಶಾಹಿದ್ ಕಪೂರ್ ಯಶ್ ಬಗ್ಗೆ ಮಾತನಾಡಿದ್ದಾರೆ. ಅದು ಏನು ಎಂದು ಮುಂದೆ ಓದಿ....

ಯಶ್ ಜೊತೆ ನಟಿಸಬೇಕು: ಅನನ್ಯಾ ಪಾಂಡೆ!
ನಟಿ ಅನನ್ಯಾ ಪಾಂಡೆ ಸದ್ಯ 'ಲೈಗರ್' ಸಿನಿಮಾದ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಲೈಗರ್ ಚಿತ್ರದ ಪ್ರಚಾರಕ್ಕಾಗಿ ಅನನ್ಯಾ ಪಾಂಡೆ ಚಿತ್ರತಂಡದ ಜೊತೆಗೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅನನ್ಯಾಗೆ, ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾವ ನಟನ ಜೊತೆಗೆ ತೆರೆ ಹಂಚಿಕೊಳ್ಳಲು ಬಯಸುತ್ತೀರಿ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ತಟ್ಟಂತ ಉತ್ತರ ಕೊಟ್ಟ ಅನನ್ಯಾ ಪಾಂಡೆ, ಯಶ್ ಅವರ ಜೊತೆಗೆ ನಟಿಸುವ ಆಸೆ ಇದೆ ಎಂದು ಹೇಳಿಕೊಂಡರು. ಅನನ್ಯಾ ಪಾಂಡೆ ಯಶ್ ಬಗ್ಗೆ ನೀಡಿರುವ ಈ ಹೇಳಿಕೆ ಸಿಕ್ಕಾಪಟ್ಟೆ ವೈಲಾಗಿತ್ತು. ಈಗ ನಟ ಶಾಹಿದ್ ಕಪೂರ್ ನಟ ಯಶ್ ನಂಬರ್ 1 ನಟ ಎಂದು ಹೇಳಿದ್ದಾರೆ.

ಬಾಲಿವುಡ್ NO.1 ನಟ ಯಶ್!
ನಟ ಯಶ್ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇದೀಗ ಬಾಲಿವುಡ್‌ನಲ್ಲಿ ಕೂಡ ನಂಬರ್ ಎನಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಸಾಕಷ್ಟು ಸೂಪರ್ ಸ್ಟಾರ್ ನಟರಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಸೇರಿದಂತೆ ಹಲವು ಸ್ಟಾರ್ ನಟರಿದ್ದಾರೆ. ಆದರೆ ಈ ಎಲ್ಲಾ ನಟರನ್ನು ಮೀರಿ ರಾಕಿ ಭಾಯ್ ನಂಬರ್ 1 ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಹೀಗಂತ ಹೇಳಿದ್ದು ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್. ಪ್ರಸ್ತುತ ಬಾಲಿವುಡ್‌ನಲ್ಲಿ ನಂಬರ್ ಒನ್ ಪಟ್ಟದಲ್ಲಿರುವುದು ರಾಕಿಂಗ್ ಸ್ಟಾರ್ ಯಶ್ ಎಂದು ಶಾಹಿದ್ ಕಪೂರ್ ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಕೊಂಡಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಶಾಹಿದ್ ಹೇಳಿಕೆ!
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟ ಶಾಹಿದ್ ಕಪೂರ್ ಭಾಗಿಯಾಗಿದ್ದಾರೆ. ಇದೇ ವೇಳೆ ಕರಣ್ ಜೋಹರ್ ಶಾಹಿದ್ ಕಪೂರ್‌ಗೆ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ನಂಬರ್ 1 ನಟ ಮತ್ತು ನಟಿ ಯಾರು ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾಹಿದ್ ಕಪೂರ್, " ಬಾಲಿವುಡ್ ನಂ.1 ಇವರೇ ಕಿಯಾರಾ ಅಡ್ವಾಣಿ, ಮತ್ತು ನಟರ ಬಗ್ಗೆ ನಾವು ಕೊಂಚ ಚರ್ಚೆ ಮಾಡಬೇಕಾಗುತ್ತದೆ. ಆದರೆ ಸದ್ಯಕ್ಕೆ ರಾಕಿ ಭಾಯ್ ನಂ.1 ಸ್ಥಾನದಲ್ಲಿ ಇದ್ದಾರೆ" ಎಂದು ಶಾಹಿದ್ ಕಪೂರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರಣ್ ಜೋಹರ್ ರಾಕಿ ಭಾಯ್ ಯಶ್ ಕೆಜಿಎಫ್‌ಗಾಗಿ ಎಂದು ಮರು ಉತ್ತರ ಕೊಟ್ಟಿದ್ದಾರೆ.

ಯಶ್ 19 ಯಾವಾಗ!
ಇನ್ನು ನಟ ಯಶ್ ಹೆಸರು ಬಂದಾಗಲೆಲ್ಲ ಯಶ್ ಮುಂದಿನ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತದೆ. ಯಶ್ 19 ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೂ ಕೂಡ ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಯಾವುದೇ ರೀತಿಯ ಅಪ್ಡೇಟ್ ಅನ್ನ ನೀಡಿಲ್ಲ. ಹಾಗಾಗಿ ಯಶ್ ಅಭಿಮಾನಿಗಳು ಮುಂದಿನ ಸಿನಿಮಾದ ಅಪ್ಡೇಟ್ ಕೇಳುತ್ತಲೇ ಇರುತ್ತಾರೆ. ಸಪ್ಟೆಂಬರ್ ತಿಂಗಳಲ್ಲಿ ಯಶ್ ಮುಂದಿನ ಚಿತ್ರದ ಮಾಹಿತಿ ಹೊರುವ ಸಾಧ್ಯತೆ ಇದೆ.


Click it and Unblock the Notifications











