ಸಮಂತಾ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಬಾಲಿವುಡ್ ಸ್ಟಾರ್ ನಟ
ಸೌತ್ ಸ್ಟಾರ್ ಸಮಂತಾ ಇತ್ತೀಚಿಗೆ ಅನೇಕ ಕಾರಣಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪತಿ ನಾಗ ಚೈತನ್ಯ ಅವರಿಂದ ಸಮಂತಾ ದೂರ ಆಗಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಸದ್ದು ಮಾಡುತ್ತಿದೆ. ಈಗಾಗಲೇ ಸಮಂತಾ ಪತಿ ನಾಗ ಚೈತನ್ಯ ಮನೆಯಿಂದ ಹೊರಬಂದಿದ್ದು, ಸದ್ಯದಲ್ಲೇ ವಿಚ್ಛೇದನದ ಬಗ್ಗೆ ಬಹಿರಂಗ ಪಡಿಸಲಿದ್ದಾರೆ ಎನ್ನಲಾಗುತ್ತಿದೆ. ವೈಯಕ್ತಿಕ ವಿಚಾರದ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದರೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ತಮ್ಮತಮ್ಮ ಸಿನಿಮಾ ಕೆಲಸಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.
ಸಮಂತಾ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಬಳಿಕ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಸೌತ್ ಮಾತ್ರವಲ್ಲದೇ ಸಮಂತಾಗೆ ಬಾಲಿವುಡ್ ನಿಂದನೂ ಹೆಚ್ಚು ಆಫರ್ ಗಳು ಬರುತ್ತಿವೆ. ರಾಜಿ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಸಮಂತಾ ಸ್ಟಾರ್ ಕಲಾವಿದರ ಹೃದಯವನ್ನು ಗೆದ್ದಿದ್ದಾರೆ. ಸೌತ್ ಸ್ಟಾರ್ ಸಮಂತಾ ಜೊತೆ ನಟಿಸಲು ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್-2 ನೋಡಿ ಹಾಡಿಹೊಗಳಿರುವ ಶಾಹಿದ್ ಕಪೂರ್, ಸಮಂತಾ ಜೊತೆ ನಟಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಸಮಂತಾ ಬಗ್ಗೆ ಏನಾದರೂ ಹೇಳಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಶಾಹಿದ್ ಕಪೂರ್, "ಸಮಂತಾ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾರೆ.

ವೆಬ್ ಸರಣಿ ಬಳಿಕ ಉತ್ತರದಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿರುವ ಸಮಂತಾ ಇದುವರೆಗೂ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ತೆಲುಗಿನಲ್ಲಿ ಶಕುಂತಲಂ ಸಿನಿಮಾ ಮುಗಿಸಿರುವ ಸಮಂತಾ ತಮಿಳಿನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾ ಬಿಟ್ಟರೆ ಸಮಂತಾ ಯಾವ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಮಂತಾ ನಿರಂತರ ಸಿನಿಮಾ ಕೆಲಸಗಳಿಂದ ಧಣಿದಿರುವ ನಟಿ ಕೊಂಚ ಬ್ರೇಕ್ ಪಡೆಯಬೇಕೆಂದು ಹೇಳಿದ್ದರು. ಹಾಗಾಗಿ ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ.
ಸಮಂತಾ ಸದ್ಯ ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚಿಗೆ ಎಲ್ಲೂ ನಾಗ ಚೈತನ್ಯ ಜೊತೆ ಸಮಂತಾ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿಯೂ ನಾಗ ಚೈತನ್ಯ ಜೊತೆ ಇರುವ ಫೋಟೋಗಳನ್ನು ಸಹ ಶೇರ್ ಮಾಡಿಲ್ಲ. ಹಾಗಾಗಿ ಪತಿಯಿಂದ ದೂರ ಆಗಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಆದರೆ ಈ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿದ ಸಮಂತಾ ತನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











