ಮತ್ತೊಂದು ರಿಮೇಕ್‌ಗೆ ಸಜ್ಜಾದ ಶಾಹೀದ್ ಕಪೂರ್?

ಬಾಲಿವುಡ್ ನಟ ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ಬಿಡುಗಡೆಯಾಗಬೇಕಿದೆ. ತೆಲುಗಿನ ಜೆರ್ಸಿ ಚಿತ್ರದ ಹಿಂದಿ ರಿಮೇಕ್ ಇದಾಗಿದ್ದು, ಕೋವಿಡ್ ಕಾರಣದಿಂದ ಇನ್ನು ರಿಲೀಸ್ ಆಗಲಿಲ್ಲ. ಕೊರೊನಾದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳು ತೆರೆದ ತಕ್ಷಣ ಜೆರ್ಸಿ ಥಿಯೇಟರ್‌ಗೆ ಬರಲಿದೆ.

ಈ ನಡುವೆ ಮತ್ತೊಂದು ರಿಮೇಕ್‌ಗೆ ಶಾಹೀದ್ ಕಪೂರ್ ಸಜ್ಜಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಫ್ರೆಂಚ್ ಭಾಷೆಯ ಹಿಟ್ ಚಿತ್ರ 'Nuit Blanche' ಹಿಂದಿಗೆ ರಿಮೇಕ್ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಚಿತ್ರದಲ್ಲಿ ಶಾಹೀದ್ ನಾಯಕನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಖ್ಯಾತ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಈ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದು, ಮೊದಲ ಸಲ ಶಾಹೀದ್ ಕಪೂರ್ ಜೊತೆ ಕೆಲಸ ಮಾಡಲು ಆಸಕ್ತಿ ತೋರಿದ್ದಾರೆ. ಈ ಚಿತ್ರದಲ್ಲಿ ಶಾಹೀದ್ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

Shahid kapoor Set to remake French Movie Nuit Blanche

"ಟಮರ್ ಸಿಸ್ಲೆ ನಾಯಕನಾಗಿ ನಟಿಸಿದ ನುಯಿ ಬ್ಲಾಂಚ್ 'Nuit Blanche' (ಇಂಗ್ಲಿಷ್‌ನಲ್ಲಿ Sleepless nights ಎಂಬ ಅರ್ಥ) ಚಿತ್ರದ ರೀಮೇಕ್ ಹಕ್ಕುನ್ನು ಅಲಿ ಅಬ್ಬಾಸ್ ಪಡೆದಿದ್ದಾರೆ. 2011ರಲ್ಲಿ ರಿಲೀಸ್ ಆಗಿದ್ದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಪೋಲಿಸ್ ಮತ್ತು ಅಂಡರ್‌ವರ್ಲ್ಡ್ ನಡುವಿನ ಸಂಪರ್ಕದ ಸುತ್ತ ಮೂಡಿ ಬಂದಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿದೆ. ಅಪರಾಧಿಗಳ ಕೈಯಲ್ಲಿ ಸಿಲುಕಿಕೊಂಡಿರುವ ತನ್ನ ಮಗುವನ್ನು ಕಾಪಾಡಲು ಪೊಲೀಸ್ ಆಫೀಸರ್ ಹೇಗೆ ಸಾಹಸ ಮಾಡ್ತಾನೆ ಎನ್ನುವುದು ರೋಚಕತೆ. ಭಾರತೀಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಈ ಸ್ಕ್ರಿಪ್ಟ್ ಬದಲಾಯಿಸಿ ತೆರೆಮೇಲೆ ತರಲು ಅಬ್ಬಾಸ್ ಜಾಫರ್ ಮುಂದಾಗಿದ್ದಾರೆ'' ಎಂದು ವೆಬ್‌ಸೈಟ್ ವರದಿ ಮಾಡಿದೆ.

2011ರಲ್ಲಿ 'ಮೇರಾ ಬ್ರದರ್ ಕೀ ದುಲ್ಹಾನ್' ಚಿತ್ರದ ಮೂಲಕ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್, ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್', 'ಟೈಗರ್ ಜಿಂದಾ ಹೈ', 'ಭಾರತ್' ಅಂತಹ ಚಿತ್ರಗಳನ್ನು ಮಾಡಿದ್ದಾರೆ. 'ಗುಂಡೇ' ಚಿತ್ರ ಮಾಡಿರುವುದು ಇದೇ ಅಲಿ ಅಬ್ಬಾಸ್. 2021ರಲ್ಲಿ 'ತಾಂಡವ್' ಎನ್ನುವ ವೆಬ್ ಸಿರೀಸ್ ಮಾಡಿದ್ದರು.

ಇನ್ನು 2019ರಲ್ಲಿ ತೆಲುಗಿನಲ್ಲಿ ಮೂಡಿ ಬಂದಿದ್ದ 'ಜೆರ್ಸಿ' ಸಿನಿಮಾವನ್ನು ಹಿಂದಿಯಲ್ಲಿ ಶಾಹೀದ್ ಕಪೂರ್ ಮಾಡಿದ್ದಾರೆ. ನಟ ನಾನಿ ಅಭಿನಯಿಸಿದ್ದ ಪಾತ್ರದಲ್ಲಿ ಶಾಹೀದ್ ನಟಿಸಿದ್ದಾರೆ. 2019ರಲ್ಲಿ ಕೊನೆಯದಾಗಿ 'ಕಬೀರ್ ಸಿಂಗ್' ಸಿನಿಮಾ ತೆರೆಕಂಡಿತ್ತು.

More from Filmibeat

English summary
Shahid kapoor's Next with Ali Abbas Zafar is the remake that Nuit Blanche is that French thriller.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X