ನೂರು ಕೋಟಿ ಕ್ಲಬ್ ಸೇರಿದ ಶಾಹಿದ್ ಕಪೂರ್ 'ಕಬೀರ್ ಸಿಂಗ್'

ಬಾಲಿವುಡ್ ನಲ್ಲಿ ಸದ್ಯ ಕಬೀರ್ ಸಿಂಗ್ ಹವಾ ಜೋರಾಗಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಕಬೀರ್ ಸಿಂಗ್ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಚಿತ್ರ ರಿಲೀಸ್ ಆಗಿ ಐದೇ ದಿನಗಳಲ್ಲಿ ಬರೋಬ್ಬರಿ ನೂರು ಕೊಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

'ಕಬೀರ್ ಸಿಂಗ್' ರಿಲೀಸ್ ಆದ ಐದೇ ದಿನದಲ್ಲಿ ಶತಕೋಟಿ ಕ್ಲಬ್ ಸೇರಿದೆ. ಇದು ನಟ ಶಾಹಿದ್ ಕಪೂರ್ ಸಿನಿ ಜೀವನದಲ್ಲೆ ಅತೀ ದೊಡ್ಡ ಸಕ್ಸಸ್ ಎನ್ನುವುದು ವಿಶೇಷ. ಚಿತ್ರ ರಿಲೀಸ್ ಆದ ಸಮಯದಲ್ಲಿ ಯಾವುದೆ ರಜಾದಿನಗಳು ಅಥವಾ ವಿಶೇಷ ಹಬ್ಬಗಳಿಲ್ಲ ಅಲ್ಲದೆ ಕ್ರಿಕೆಟ್ ವಿಶ್ವ ಕಪ್ ನಡೆಯುತ್ತಿದೆ ಆದರು ಕೋಟಿ ಕೋಟಿ ಕಮಾಯಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ್ರು ಕಲೆಕ್ಷನ್ ವಿಚಾರದಲ್ಲಿ ಕಬೀರ್ ಸಿಂಗ್ ದಾಖಲೆ ನಿರ್ಮಿಸಿದೆ. ಕಬೀರ್ ಸಿಂಗ್ ಸಿನಿಮಾ ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾದ ರಿಮೇಕ್ ಆದ್ರು ಈ ಪರಿ ಹಣ ಬಾಚಿಕೊಂಡಿರುವುದು ಬಾಲಿವುಡ್ ಅನೇಕರಿಗೆ ಶಾಕ್ ಆಗಿದೆ.

Shahid Kapoor starrer Kabir Singh set to entered 100 cr club in just five days

ಚಿತ್ರ ರಿಲೀಸ್ ಆದ ಮೊದಲ ದಿನವೆ 20 ಕೋಟಿ ಬಾಚಿಕೊಂಡಿತ್ತು. ನಂತರ 22 ಕೋಟಿ, ಭಾನುವಾರ 27 ಕೋಟಿ ಮತ್ತು ಸೋಮವಾರ 17 ಕೋಟಿ ಕಮಾಯಿ ಮಾಡಿದೆ. ಇನ್ನು ಕೂಡ 'ಕಬೀರ್ ಸಿಂಗ್' ನಾಗಲೋಕ ಮುಂದುವರೆದಿದೆ. ಚಿತ್ರಕ್ಕೆ 'ಅರ್ಜುನ್ ರೆಡ್ಡಿ' ಖ್ಯಾತಿಯ ನಿರ್ದೇಶಕ ಸಂದೀಪ್ ವಾಂಗ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಸಿಕೊಂಡಿದ್ದಾರೆ.

More from Filmibeat

English summary
Shahid Kapoor starrer 'Kabir Singh' set to enter 100 cr club in just five days. This movie is remake of Telugu super hit Arjun Reddy and directed by Sandeep vanga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X