ನಾನಿ ನನ್ನನ್ನು ಅನೇಕ ಬಾರಿ ಕಣ್ಣೀರು ಹಾಕುವಂತೆ ಮಾಡಿದರು: ಶಾಹಿದ್ ಕಪೂರ್

By ಫಿಲ್ಮೀ ಬಿಟ್ ಡೆಸ್ಕ್

ಬಾಲಿವುಡ್ ನಟ ಸಾಹಿದ್ ಕಪೂರ್ ಸದ್ಯ ತೆಲುಗಿನ ಸೂಪರ್ ಹಿಟ್ 'ಜರ್ಸಿ' ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಅರ್ಜುನ್ ರೆಡ್ಡಿ' ರಿಮೇಕ್‌ನಲ್ಲಿ ಕಾಣಿಸಿಕೊಂಡಿದ್ದ ಶಾಹಿದ್ ಕಪೂರ್‌ಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. 'ಕಬೀರ್ ಸಿಂಗ್' ಹೆಸರಲ್ಲಿ 'ಅರ್ಜುನ್ ರೆಡ್ಡಿ' ಬಾಲಿವುಡ್‌ಗೆ ರಿಮೇಕ್ ಆಗಿತ್ತು.

'ಕಬೀರ್ ಸಿಂಗ್' ಸಕ್ಸಸ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಶಾಹಿದ್ ಕಪೂರ್ 'ಜರ್ಸಿ' ಮೂಲಕ ಮತ್ತೆ ಅಭಿಮಾನಿಗಳ ಹೃದಯ ಕದಿಯಲು ಸಿದ್ಧರಾಗಿದ್ದಾರೆ. 'ಜರ್ಸಿ' ತೆಲುಗು ನಟ ನಾನಿ ನಟಿಸಿದ್ದ ಸಿನಿಮಾ. ಟಾಲಿವುಡ್‌ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಮೂಲಕ ಶಾಹಿದ್ ಕಪೂರ್ ಕೂಡ ಮತ್ತೊಂದು ಹಿಟ್ ನೀಡಲು ಶ್ರಮಿಸುತ್ತಿದ್ದಾರೆ.

ಇತ್ತೀಚಿಗೆ ಶಾಹಿದ್ ಕಪೂರ್ 'ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಜರ್ಸಿ ಸಿನಿಮಾದ ಬಗ್ಗೆ ಮಾಡಿನಾಡಿದ್ದಾರೆ. ಈ ಸಿನಿಮಾ ತನ್ನ ವೃತ್ತಿ ಜೀವನಕ್ಕೆ ತುಂಬಾ ಹತ್ತಿರವಾಗಿದೆ, ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ ಎಂದು ಹೇಳಿದ್ದಾರೆ.

Shahid Kapoor talks about Jersey Hindi remake, he says Nani made me cry in the movie

"ಈ ಸಿನಿಮಾದಲ್ಲಿ ನಾನಿ ನನ್ನನ್ನು 5-6 ಬಾರಿ ಕಣ್ಣೀರು ಹಾಕುವಂತೆ ಮಾಡಿದ್ದಾರೆ" ಎಂದು ಶಾಹಿದ್ ಬಹಿರಂಗ ಪಡಿಸಿದ್ದಾರೆ. ನಾನಿ ನಟನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಹಿದ್, ಜರ್ಸಿ ಚಿತ್ರವನ್ನು ಶಾಹಿದ್ ತನ್ನ ವೈಯಕ್ತಿಕ ಜೀವನದೊಂದಿಗೆ ಸಂಪರ್ಕಮಾಡಿ, "ನನಗೆ 40 ವರ್ಷ. ನನ್ನ ಜೀವನ ಕೂಡ ಜರ್ಸಿ ಕಥೆಗೆ ಹತ್ತಿರವಾಗಿದೆ. ತಡವಾದ ಯಶಸ್ಸಿನ ಬಗ್ಗೆ ಹೇಳುವ ಕಥೆ. ತಡವಾಗಿ ಯಶಸ್ಸು ಕಂಡವರಲ್ಲಿ ನಾನು ಕೂಡ ಒಬ್ಬ. ಜರ್ಸಿ ಒಂದು ಕುಟುಂಬದ ಚಿತ್ರ. ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ" ಎಂದು ಹೇಳಿದರು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಹಿದ್ "ನಾನಿ ಅದ್ಭುತ ನಟ. ಈ ಸಿನಿಮಾ ನೋಡುವಾಗ ಅನೇಕ ಬಾರಿ ಅಳುವಂತೆ ಮಾಡಿದರು" ಎಂದು ಬಹಿರಂಗ ಪಡಿಸಿದರು.

ಜರ್ಸಿ ಸಿನಿಮಾ ನೋಡಿದ ಬಳಿಕ ವೃತ್ತಿಜೀವನದ ಪ್ರಮುಖ ಅಂಶವನ್ನು ಅರಿತುಕೊಂಡಿರುವುದಾಗಿ ಹೇಳಿದ್ದಾರೆ. ಜೊತೆಗೆ ಉತ್ತಮ ಕಥೆಯ ಮಹತ್ವ ಕೂಡ ಅರಿವಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. ಪ್ರೇಕ್ಷಕರಿಗೆ ಉತ್ತಮ ಕಥೆ ತರಲು ನಿರ್ಧರಿಸಿರುವುದಾಗಿ ಶಾಹಿದ್ ಹೇಳಿದ್ದಾರೆ.

ಹಿಂದಿ ಜರ್ಸಿಯಲ್ಲಿ ಶಾಹಿದ್ ಕಪೂರ್‌ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದರು. ಇನ್ನು ಮೂಲ ನಿರ್ದೇಶಕರಾದ ಗೌತಮ್ ಹಿಂದಿ ರಿಮೇಕ್‌ಗೂ ಆಕ್ಷನ್ ಕಟ್ ಹೇಳುವ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

More from Filmibeat

English summary
Bollywood Actor Shahid Kapoor talks about Jersey Hindi remake. He says Nani made me cry in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X