ಶಾಹಿದ್ ಕಪೂರ್ ಪತ್ನಿ ವರ್ತನೆ ನೋಡಿ ಅಬ್ಬಬ್ಬಾ ಇದೆಂಥಾ ದುರಹಂಕಾರ ಎಂದ ಜನ..!
ಸುಖಾಸುಮ್ಮನೆ ಪಾರ್ಟಿ ಮಾಡಿ ಹಣವನ್ನು ಪೋಲು ಮಾಡುವ ಮಂದಿಗೆ ಆ ಹಣದ ಬೆಲೆ ಗೊತ್ತಿರಲ್ಲ.ಇನ್ನೂ ಹಣದ ಅಮಲನ್ನೇರಿಸಿಕೊಂಡ ಬಣ್ಣದ ಪ್ರಪಂಚದಲ್ಲಿರುವ ಅನೇಕರಲ್ಲಿ ಮಾನವೀಯತೆಯ ಲವಲೇಶವೂ ಕಾಣುವುದಿಲ್ಲ. ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಇದಕ್ಕೆ ತಾಜಾ ಉದಾಹರಣೆ.
ಹೌದು. ನಾವು ನಿಮಗೆ ಹಿಂದೆಯೇ ಹೇಳಿದಂತೆ, ಬಾಲಿವುಡ್ ನವರಿಗೆ ದುಡ್ಡು ಕೊಟ್ಟು ಕ್ಯಾಮರಾ ಕರೆಸಿಕೊಳ್ಳುವ ಕೆಟ್ಟ ಚಟ ಇದೆ. ತಾವೂ ಹೋದಲೆಲ್ಲ ಕ್ಯಾಮರಾದ ಫ್ಲ್ಯಾಶ್ ಲೈಟ್ ಗಳೆಲ್ಲ ಇವರ ಮೇಲೆ ಬೀಳಬೇಕು ಎಂಬ ಹಪಾಹಪಿ ಇದಕ್ಕೆ ಕಾರಣ. ಮೀರಾ ರಜಪೂತ್ ಕೂಡ ಇದರಿಂದ ಹೊರತಾಗಿಲ್ಲ. ಆದರೆ ಈ ಬಾರಿ ಈ ತಂತ್ರ ಶಾಹಿದ್ ಕಪೂರ್ ಅವರ ಪ್ರೀತಿಯ ಪತ್ನಿ ಮೀರಾಗೆ ಮುಳುವಾಗಿದೆ.

ಮೀರಾ ರಜಪೂತ್ ಅವರ ವ್ಯಕ್ತಿತ್ವಕ್ಕೆ ಕೈ ಗನ್ನಡಿ ಹಿಡಿದಂತೆ ಇರುವ ಈ ಸನ್ನಿವೇಶದಲ್ಲಿ, ಒಂದಿಲ್ಲೊಂದು ಕಾರಣದಿಂದ ಭಿಕ್ಷಾಟನೆಗೆ ಇಳಿದ ಮಕ್ಕಳು ಮೀರಾ ಅವರನ್ನ ಸುತ್ತುವರೆದುಕೊಳ್ತಾರೆ. ಹಣಕ್ಕಾಗಿ ದುಂಬಾಲು ಬೀಳುತ್ತಾರೆ. ಆದರೆ ಹಣ ನೀಡುವುದು ಇರಲಿ, ಮೀರಾ ಆ ಮಕ್ಕಳ ಕಡೆ ತಿರುಗಿಯೂ ನೋಡುವುದಿಲ್ಲ.
ಮೀರಾ ರಜಪೂತ್ ಅವರ ಇದೇ ದುರಂಹಕಾರದ ವರ್ತನೆ ಈಗ ಅನೇಕರನ್ನ ಕೆರಳಿಸಿದೆ. ಹೀಗಾಗಿಯೇ ಸಾಮಾಜಿಕ ಜಾಲತಾಣದ ಮೊರೆ ಹೋಗಿರುವ ಅನೇಕರು, ಮೀರಾ ರಜಪೂತ್ ಅವರ ಮೇಲೆ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ. ಮಾನವೀಯತೆ ಅನ್ನುವುದು ನಿಮ್ಮಲ್ಲಿ ಇನ್ನೂ ಬದುಕಿದೆಯಾ ಅಥವಾ ಸತ್ತಿದೆಯಾ ಎಂಬ ಪ್ರಶ್ನೆಯನ್ನ ಕೇಳುತ್ತಿದ್ದಾರೆ.

ನಿಜಾ, ಮಕ್ಕಳಿಂದ ಭಿಕ್ಷಾಟನೆ ಮಾಡಿಸುವುದು ಅಪರಾಧ. ಅದಕ್ಕೆ ಕಾನೂನು ಇದೆ. ಪೊಲೀಸ್ ಇಲಾಖೆಯೂ ಇದೆ. ಹೀಗಿದ್ದೂ ಮಕ್ಕಳಿಂದ ಭಿಕ್ಷಾಟನೆ ಮಾಡಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಂಥ ಏನೂ ಅರಿಯದ ಮಕ್ಕಳ ಮುಂದೆ ತನ್ನ ದರ್ಪ ತೋರಿಸುವುದು ಸರಿಯಲ್ಲ ಅನ್ನುವ ಅಭಿಪ್ರಾಯವನ್ನ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇದು ಹಣದ ದುರಹಂಕಾರದ ಪರಮಾವಧಿ ಎಂದು ಮೀರಾ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ದುಬಾರಿ ಕಾರಿಂದ ಇಳಿಯುವ ಈ ಸೆಲೆಬ್ರಿಟಿಗಳ ಜೇಬಲ್ಲಿ ಹತ್ತು ರೂಪಾಯಿ ಕೂಡ ಇರಲ್ಲವಾ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.
ಆ ಪೈಕಿ ಕೆಲವರು ಹಣ ನೀಡುವುದು ಬೇಡ ಕೊನೆ ಪಕ್ಷ ಮಕ್ಕಳ ಕಡೆ ನೋಡಿ, ಅವರನ್ನ ನಗಿಸುವ ಪ್ರಯತ್ನವಾದರೂ ಮೀರಾ ಮಾಡಬಹುದಿತ್ತು ಎಂದರೆ, ಇನ್ನೂ ಕೆಲವರ ಪ್ರಕಾರ ಮೀರಾ ಹೆಣ್ಣು ಕುಲಕ್ಕೆ ಕಪ್ಪು ಚುಕ್ಕೆ. ಬಹುತೇಕರು ಲೇಡಿ ಕಬೀರ್ ಸಿಂಗ್ ಎಂಬ ಬಿರುದನ್ನೂ ಕೂಡ ಮೀರಾಗೆ ಕೊಟ್ಟಿದ್ದಾರೆ. ವಿಡಿಯೋ ನೋಡಿ ಕೆರಳಿ ಕೆಂಡವಾಗಿ ಜನ ಸಾಮಾನ್ಯರು ಮೀರಾ ರಜಪೂತ್ ಗೆ ಸಾಮಾಜಿಕ ಜಾಲತಾಣದ ಸಹಾಯವನ್ನ ಪಡೆದು ಛೀಮಾರಿ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಸಮಾಜದ ಎಲ್ಲ ರಂಗಗಳಲ್ಲಿ ಸಾಮಾಜಿಕ ಮೌಲ್ಯ ಕಣ್ಮರೆಯಾಗುತ್ತಿವೆ. ಈ ಮೌಲ್ಯ ಗಳ ಸಂರಕ್ಷಣೆಯೇ ನಿಜವಾದ ಧರ್ಮ. ಅದನ್ನ ಮಾಡದೇ ಮಜಾ ಮಾಡುವ ಸಲುವಾಗಿಯೇ ಹಣವನ್ನ ವ್ಯರ್ಥ ಮಾಡಿದರೆ ಪರಮಾತ್ಮ ಮೆಚ್ಚಬಲ್ಲನೇ..? ಉತ್ತರ ಖುದ್ದು ಮೀರಾ ಅವರೇ ಕೊಡಬೇಕು


Click it and Unblock the Notifications










