ಶಾಹಿದ್ ಕಪೂರ್ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್.!
ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳು ನಿನ್ನೆ ಹ್ಯಾಕ್ ಆಗಿತ್ತು.
ಹಾಗ್ನೋಡಿದ್ರೆ, ನಿನ್ನೆ ಶಾಹಿದ್ ಕಪೂರ್ ಸಂತಸದಲ್ಲಿದ್ದರು. ಮುದ್ದಾದ ಗಂಡು ಮಗುವಿಗೆ ಪತ್ನಿ ಮೀರಾ ರಜ್ ಪೂತ್ ಜನ್ಮ ನೀಡಿದ್ದರಿಂದ, ಪತ್ನಿ ಹಾಗೂ ಮಗುವಿನ ಜೊತೆ ಶಾಹಿದ್ ಖುಷಿಯಾಗಿದ್ದರು. ಇದೇ ಸಂದರ್ಭದಲ್ಲಿ ಶಾಹಿದ್ ಅವರ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಗಳು ಹ್ಯಾಕ್ ಆಗಿವೆ.
ತಮ್ಮ ಎರಡನೇ ಮಗುವಿನ ಫೋಟೋನ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಶಾಹಿದ್ ಶೇರ್ ಮಾಡ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಶಾಕ್ ಸಿಕ್ತು. ಯಾಕಂದ್ರೆ, ಶಾಹಿದ್ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಿಂದ ನಿನ್ನೆ ವಿಚಿತ್ರ ಪೋಸ್ಟ್ ಹೊರಬಂತು.

''ಸಿನಿಮಾದಲ್ಲಿ ನೀವು ತೋರಿಸಿದ ಹಾಗೆ ಅಲ್ಲಾವುದ್ದೀನ್ ಖಿಲ್ಜಿ ಬಾರ್ಬರ್, ಪ್ರಾಣಿ ಅಲ್ಲ'' ಎಂಬ ಸಂದೇಶ ಹೊತ್ತ ಪೋಸ್ಟ್ ಶಾಹಿದ್ ಕಪೂರ್ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಿಂದ ಬಂತು.
ವರದಿಗಳ ಪ್ರಕಾರ, ಶಾಹಿದ್ ಕಪೂರ್ ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನ ಟರ್ಕಿಶ್ ಹ್ಯಾಕರ್ ಹ್ಯಾಕ್ ಮಾಡಿದ್ದನಂತೆ. 'ಪದ್ಮಾವತ್' ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಆಗಿ ರಣ್ವೀರ್ ಸಿಂಗ್ ಅಭಿನಯಿಸಿದ್ದರೆ, ಮಹಾರಾವಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ನಟಿಸಿದ್ದರು.

ತಮ್ಮ ಖಾತೆಗಳಿಂದ ಅಸಂಬದ್ಧ ಪೋಸ್ಟ್ ಗಳು ಹೊರಬರುತ್ತಿದ್ದಂತೆಯೇ, ಶಾಹಿದ್ ಎಚ್ಚರಗೊಂಡರು. ಹ್ಯಾಕ್ ಆಗಿದ್ದ ಖಾತೆಗಳನ್ನ ಸರಿ ಪಡಿಸಿಕೊಂಡರು. ಹ್ಯಾಕರ್ ಮಾಡಿದ್ದ ಪೋಸ್ಟ್ ಗಳು ಸದ್ಯ ಶಾಹಿದ್ ಕಪೂರ್ ಅಕೌಂಟ್ ನಿಂದ ಡಿಲೀಟ್ ಮಾಡಲಾಗಿದೆ.


Click it and Unblock the Notifications










