»   » ಸಲ್ಮಾನ್ ಜೊತೆ ಶಾರುಖ್ ಯುದ್ಧ ಶೀಘ್ರ ಪ್ರಾರಂಭ?

ಸಲ್ಮಾನ್ ಜೊತೆ ಶಾರುಖ್ ಯುದ್ಧ ಶೀಘ್ರ ಪ್ರಾರಂಭ?

Posted By:
Subscribe to Filmibeat Kannada

ಈ ವರ್ಷ ಸಲ್ಮಾನ್ ಖಾನ್ ಅಭಿನಯದ 'ಏಕ್ ಥಾ ಟೈಗರ್' ಚಿತ್ರವು ಸೂಪರ್ ಹಿಟ್ ದಾಖಲಿಸಿರುವುದು ಎಲ್ಲರಿಗೂ ಗೊತ್ತು. ಆದರೆ ಆಶ್ಚರ್ಯವೆಂಬಂತೆ, ಈ ಚಿತ್ರವು ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ಅಮೀರ್ ಖಾನ್ ನಟನೆಯ 'ತ್ರೀ ಈಡಿಯಟ್ಸ್' ಚಿತ್ರದ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲ, ಸಲ್ಲೂ 'ಏಕ್ ಥಾ ಟೈಗರ್' ಚಿತ್ರಕ್ಕೆ ಈಗ ಶಾರುಖ್ ಖಾನ್ ಬರಲಿರುವ ಚಿತ್ರ 'ಜಬ್ ತಕ್ ಹೈ ಜಾನ್' ವಿಲನ್ ಆಗಲಿದೆ ಎನ್ನಲಾಗುತ್ತಿದೆ.

ಸಲ್ಮಾನ್ ಖಾನ್ ಅಭಿನಯದ 'ಏಕ್ ಥಾ ಟೈಗರ್' ಚಿತ್ರವು ಸಲ್ಲೂರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದೆ. ಅವರ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿರುವುದಷ್ಟೇ ಅಲ್ಲದೇ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿ ಸಲ್ಲೂ ಅಭಿಮಾನಿ ಬಳಗ ಮೊದಲಿಗಿಂತ ಭಾರಿ ಹೆಚ್ಚಾಗಿದೆ. ಆದರೆ ಈ ಚಿತ್ರದಿಂದ ಸಲ್ಲೂಗೆ, ಬಾಲಿವುಡ್ ಉಳಿದಿಬ್ಬರು 'ಕಿಂಗ್'ಖಾನ್ ಗಳಾದ ಅಮೀರ್ ಹಾಗೂ ಶಾರುಖ್ ಅವರಿಗಿಂತ ಮೇಲೇರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಅದೇನೆ ಇರಲಿ, ಶಾರುಖ್ ಖಾನ್ ಅಭಿನಯದ ಬರಲಿರುವ ಚಿತ್ರ 'ಜಬ್ ತಕ್ ಹೈ ಜಾನ್', ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಅಷ್ಟೇ ಅಲ್ಲ, ಬಾಲಿವುಡ್ ಅಂಗಳದಿಂದ ಬಂದ ಸುದ್ದಿ ಪ್ರಕಾರ, ಈ ಶಾರುಖ್ ಖಾನ್ ಚಿತ್ರವು ಸಲ್ಮಾನ್ ಖಾನ್ ಅಭಿನಯದ 'ಏಕ್ ಥಾ ಟೈಗರ್' ಚಿತ್ರವನ್ನು ಗಳಿಕೆಯಲ್ಲಿ ಮೀರಿಸುವುದು ಗ್ಯಾರಂಟಿ ಎಂಬ ಸುದ್ದಿ ಎಲ್ಲಡೆ ಕೇಳಿಬರುತ್ತಿದೆ. ಇದರಿಂದ ಸಲ್ಲೂ ಅಭಿಮಾನಿಗಳು ಕಂಗಾಲಾಗಿದ್ದರೆ ಶಾರುಖ್ ಅಭಿಮಾನಿಗಳ ದಿಲ್ ಫುಲ್ ಖುಷ್.

ಒಟ್ಟಿನಲ್ಲಿ ಬರಲಿರುವ ಚಿತ್ರದ ಮೂಲಕ ಸಲ್ಮಾನ್ ಜೊತೆ ಶಾರುಖ್ ಯುದ್ಧ ಶೀಘ್ರ ಪ್ರಾರಂಭವಾಗಲಿದೆ. ಅದು ಶಾರುಖ್ ಖಾನ್ ಚಿತ್ರವೇ ಆಗಿರಲಿ ಅಥವಾ ಸಲ್ಮಾನ್ ಖಾನ್ ಚಿತ್ರವೇ ಆಗಿರಲಿ, ಬಾಲಿವುಡ್ ಚಿತ್ರಗಳ ಅಭಿಮಾನಿಗಳಿಗಂತೂ ಹಬ್ಬವೇ ಸರಿ. ಕಾರಣ, ಒಂದೇ ವರ್ಷದಲ್ಲಿ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೋಡಬಹುದಲ್ಲ ಎಂಬುದು ಮೆಚ್ಚಬೇಕಾದ ಅಂಶವೂ ಹೌದು. ಆದರೆ, ಚಿತ್ರ ಬಿಡುಗಡೆಯಾದ ಮೇಲಷ್ಟೇ ಪಕ್ಕಾ ಹಣೆಬರಹ ತಿಳಿಯಬಹುದು, ಅಲ್ಲಿಯವರೆಗೆ ಉಳಿದಿರುವುದು ಕಾದು ನೋಡುವುದೊಂದೇ ದಾರಿ! (ಏಜೆನ್ಸೀಸ್)

English summary
Shahrukh Khan's movie Jab Tak Hai Jaan will beat Salman's film Ek Tha Tiger at the Box Office collections, as the Bollywood movies news sources. 
 
Please Wait while comments are loading...