ಬನ್ಸಾಲಿ ಸಿನಿಮಾಗಾಗಿ ಮತ್ತೆ ಒಂದಾಗ್ತಾರಾ ಖಾನ್ ಬ್ರದರ್ಸ್
Recommended Video

ಇತ್ತೀಚಿಗಷ್ಟೆ ಶಾರೂಖ್ ನಟನೆಯ 'ಜೀರೋ' ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರ ಮಾಡಿದ್ದರು. ಅದರ ಬಳಿಕ ಈಗ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಇದೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇದೀಗ ಹೊಸ ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಇಬ್ಬರು ಖಾನ್ ಗಳು ಮತ್ತೆ ಒಂದಾಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಸ್ಟಾರ್ ಗಳನ್ನು ಮತ್ತೆ ಪರದೆ ಮೇಲೆ ಒಂದು ಮಾಡಲು ಬನ್ಸಾಲಿ ಪ್ಲಾನ್ ಮಾಡಿದ್ದಾರಂತೆ.
ಈ ಹಿಂದೆ 'ದುಷ್ಮಾನ್ ದುನಿಯಾ ಕಾ' 'ಕರಣ್ ಅರ್ಜುನ್', 'ಕುಚ್ ಕುಚ್ ಹೋತಾ ಹೇ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಬನ್ಸಾಲಿ ಈ ಹಿಂದೆ ಸಲ್ಮಾನ್ ಹಾಗೂ ಶಾರೂಖ್ ಇಬ್ಬರ ಜೊತೆಗೆ ಕೂಡ ಸಿನಿಮಾ ಮಾಡಿದ್ದಾರೆ. ಇದೀಗ ಇಬ್ಬರು ನಟರನ್ನು ಸೇರಿಸಿ ಸಿನಿಮಾ ಮಾಡುವ ತಯಾರಿಯಲ್ಲಿ ಅವರು ಇದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಹಿಂದಿನ ಸಿನಿಮಾ 'ಪದ್ಮಾವತಿ' ದೊಡ್ಡ ಹಿಟ್ ಆಗಿದೆ. ಬನ್ಸಾಲಿ ಸಿನಿಮಾ ಅಂದರೆ ಒಂದು ವಿಶೇಷ ಇದ್ದೇ ಇರುತ್ತದೆ. ಅದ್ದರಿಂದ ಈ ಸಿನಿಮಾದ ಮೇಲೆ ಸಹ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.


Click it and Unblock the Notifications











