For Quick Alerts
  ALLOW NOTIFICATIONS  
  For Daily Alerts

  ಹೊಸ ಸಿನಿಮಾ ಘೋಷಿಸಿದ ಬಾಲಿವುಡ್ ನಟ ಶಾರೂಖ್ ಖಾನ್

  |

  ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎರಡು ವರ್ಷಗಳಿಂದ ಕಾಡುತ್ತಿದೆ. ಜೀರೋ ಸಿನಿಮಾ ಬಳಿಕ ಕಿಂಗ್ ಖಾನ್ ಯಾವುದೇ ಚಿತ್ರ ಆರಂಭಿಸಿಲ್ಲ. ತಮಿಳು ನಿರ್ದೇಶಕ ಅಟ್ಲಿ, ರಾಜ್ ಕುಮಾರ್ ಹಿರಾನಿ ಹಾಗೂ ಸಿದ್ಧಾರ್ಥ್ ಆನಂದ್ ಎಂಬ ನಿರ್ದೇಶಕನ ಚಿತ್ರದಲ್ಲೂ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada

  ಇದೀಗ, ಶಾರೂಖ್ ಖಾನ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಶಾರೂಖ್ ನಟಿಸುತ್ತಿಲ್ಲ, ನಿರ್ಮಿಸುತ್ತಿದ್ದಾರೆ.

  ಹೌದು, ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್‌ ಅಡಿಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ಲವ್ ಹಾಸ್ಟೇಲ್ ಎಂದು ಹೆಸರಿಡಲಾಗಿದೆ.

  ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಶಂಕರ್ ರಾಮನ್ ನಿರ್ದೇಶನ ಮಾಡುತ್ತಿದ್ದಾರೆ. ಗೌರಿ ಖಾನ್, ಮನೀಶ್ ಮುಂದ್ರಾ, ಗೌರವ್ ವರ್ಮಾ ಜಂಟಿಯಾಗಿ ಬಂಡವಾಳ ಹಾಕುತ್ತಿದ್ದಾರೆ.

  Shahrukh khan announces New Film Titled Love Hostel

  'ಲವ್ ಹಾಸ್ಟೇಲ್' ಚಿತ್ರದಲ್ಲಿ ಸನ್ಯ ಮಲ್ಹೋತ್ರ, ವಿಕ್ರಾಂತ್ ಮಸ್ಸಿ, ಹಾಗೂ ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, 2021ರಲ್ಲಿ ಈ ಚಿತ್ರ ಸೆಟ್ಟೇರಲಿದ್ದು, ಅದೇ ವರ್ಷ ಬಿಡುಗಡೆಯಾಗಲಿದೆ.

  English summary
  Bollywood actor shahrukh khan announces New Film Titled 'Love Hostel'. The crime-thriller stars Sanya Malhotra, Vikrant Massey and BobbyDeol.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X