ಶೀಘ್ರದಲ್ಲೇ ಕಿಂಗ್ ಖಾನ್ ಶಾರುಖ್ ಆತ್ಮಚರಿತ್ರೆ

By Rajendra

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಅತ್ಮಕಥೆ ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಹೊರಬರಲಿದೆ. ಈ ಪುಸ್ತಕದಲ್ಲಿ ಶಾರುಖ್ ತಮ್ಮ ಖಾಸಗಿ ಹಾಗೂ ಭಾವನಾತ್ಮಕ ಸಂಗತಿಗಳನ್ನು ಪುಟಪುಟದಲ್ಲೂ ಹಂಚಿಕೊಳ್ಳಲಿದ್ದಾರಂತೆ.

ಕಳೆದ ಕೆಲ ಸಮಯದಿಂದ ಅವರು ತಮ್ಮ ಆತ್ಮಕಥೆ ಬರೆಯುತ್ತಿದ್ದು ಅದು ಈಗ ಒಂದು ಹಂತಕ್ಕೆ ಬಂದಿದೆಯಂತೆ. ಈ ಸಂಗತಿಯನ್ನು ಸ್ವತಃ ಅವರು ಇತ್ತೀಚೆಗೆ ಕೋಲ್ಕತ್ತಾದಲ್ಲಿ ತಿಳಿಸಿದ್ದಾರೆ. ಇನ್ನೇನು ತಮ್ಮ ಆತ್ಮಕಥೆ ಮುಗಿಯಲಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಡೆಯನೂ ಆಗಿರುವ ಶಾರುಖ್, ತಮ್ಮ ಆತ್ಮಕಥನದಲ್ಲಿ ಕೋಲ್ಕತ್ತಾ ಬಗೆಗೂ ಒಂದು ಅಧ್ಯಾಯವನ್ನು ಮೀಸಲಿಟ್ಟಿದ್ದಾರೆ. ತಾವು ಇಷ್ಟು ದಿನ 'ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ತೊಡಗಿಕೊಂಡಿದ್ದ ಕಾರಣ ಆತ್ಮಕಥೆ ಬಗ್ಗೆ ಹೆಚ್ಚಾಗಿ ಗಮನಹರಿಸಲು ಸಾಧ್ಯವಾಗಿರಲಿಲ್ಲ.

ಈಗ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸ್ವಲ್ಪ ಬಿಡುವೂ ಸಿಕ್ಕಿದೆ. ತಮ್ಮ ಆತ್ಮಕಥೆಯ ಉಳಿದ ಭಾಗವನ್ನು ಮುಗಿಸುತ್ತಿದ್ದೇನೆ ಎಂದಿದ್ದಾರೆ ಶಾರುಖ್. ತಮ್ಮ ಆತ್ಮಚರಿತ್ರೆಗೆ ಶಾರುಖ್ ಅವರು 'Twenty Years in a Decade' ಎಂದು ಹೆಸರಿಟ್ಟಿದ್ದಾರೆ ಎಂಬ ಸಂಗತಿಯೂ ಬಹಿರಂಗವಾಗಿದೆ.

ತಮ್ಮ ಬಾಲ್ಯ, ಯೌವನ, ಮದುವೆ, ಸಿನೆಮಾ, ವೃತ್ತಿಜೀವನ...ಹೀಗೇ ಜೀವನದ ನಾನಾ ಘಟ್ಟಗಳನ್ನು ತಮ್ಮ ಪುಸ್ತಕದಲ್ಲಿ ಬಿಡಿಬಿಡಿಯಾಗಿ ಬಿಚ್ಚಿಡಲಿದ್ದಾರೆ ಶಾರುಖ್. ಸಿನೆಮಾ ತಾರೆಗಳ ಆತ್ಮಚರಿತ್ರೆ ಎಂದರೆ ಕೇಳಬೇಕೆ. ಅಭಿಮಾನಳಿಗೆ, ಸಾಮಾನ್ಯ ಓದುಗರಿಗೆ ದೀಪಾವಳಿ ಇದ್ದಂತೆ. ಶಾರುಖ್ ಅವರ ಆತ್ಮಕಥೆಯನ್ನೂ ಅವರ ಅಭಿಮಾನಿಗಳು ಕುತೂಹಲದಿಂದ ಎದುರುನೋಡುವಂತಾಗಿದೆ. (ಏಜೆನ್ಸೀಸ್)

More from Filmibeat

English summary
Bollywood actor King Khan Sharukh Khan recently in Kolkata revealed that his autobiography, which was in the making for quite some time now, is almost nearing its completion. Reportedly titled 'Twenty Years in a Decade'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X