For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣಕ್ಕೆ ಮರಳಲು ಶಾರುಖ್ ತಯಾರಿ: ಮಗನ ಬಂಧನದಿಂದ ಶೂಟಿಂಗ್‌ ಸ್ಥಗಿತಗೊಳಿಸಿದ್ದ ನಟ

  |

  ಬಾಲಿವುಡ್‌ ನಟ, ಸೂಪರ್‌ಸ್ಟಾರ್ ಶಾರುಖ್ ಖಾನ್ ಇತ್ತೀಚೆಗೆ ಮಗನ ಡ್ರಗ್ಸ್ ಪ್ರಕರಣದ ಮೂಲಕ ಹೆಚ್ಚಾಗಿ ಸುದ್ದಿ ಆಗಿದ್ದರು. ಬ್ರೇಕ್ ಬಳಿಕ ಬಣ್ಣ ಹಚ್ಚಿದ ಶಾರುಖ್ ತಮ್ಮ ಸಾಲು, ಸಾಲು ಸಿನಿಮಾಗಳ ಮೂಲಕ ಸದ್ದು ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ದುರಾದೃಷ್ಟವಶಾತ್ ತಮ್ಮ ಪುತ್ರ ಆರ್ಯನ್‌ ಖಾನ್ ಡ್ರಗ್ಸ್ ಪ್ರಕರಣದ ಮೂಲಕ ಶಾರುಖ್ ಹೆಸರು ಹೆಚ್ಚು ಸುದ್ದಿ ಆಯ್ತು. ಆದರೆ ದೀಪಾವಳಿ ಶಾರುಖ್ ಖಾನ್‌ ಹುಟ್ಟು ಹಬ್ಬಕ್ಕೂ ಮೊದಲೇ ಮಗ ಆರ್ಯನ್ ಮನೆಗೆ ಬಂದಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ಇದೀಗ ಶಾರುಖ್ ಖಾನ್ ಸಿನಿಮಾ ಚಿತ್ರೀಕರಣಕ್ಕೆ ಮರಳಲು ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ.

  ಬಾಲಿವುಡ್‌ ಮೂಲಗಳ ಪ್ರಕಾರ ಶಾರುಖ್ ಖಾನ್‌ ಸದ್ಯ ಚಿತ್ರೀಕರಣಕ್ಕೆ ಮರಳುವ ಮನಸ್ಸು ಮಾಡಿದ್ದಾರಂತೆ. ಸದ್ಯದಲ್ಲೇ ಶಾರುಖ್ ಶೂಟಿಂಗ್‌ ಸ್ಪಾಟ್‌ನಲ್ಲಿ ಸಿಗಲಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಅವರ ಚಿತ್ರದಲ್ಲಿ ಶಾರುಖ್ ಖಾನ್‌ ನಟಿಸುತ್ತಿದ್ದಾರೆ. ಇದೆ ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಅರಂಭ ಆಗಬೇಕಿತ್ತು. ಆದರೆ ಶಾರುಖ್‌ ಪುತ್ರನ ಬಂಧನದಿಂದ ಅದು ಸಾಧ್ಯ ಆಗಿರಲಿಲ್ಲ. ಶೂಟಿಂಗ್‌ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು. ಶಾರುಖ್‌ ಖಾನ್‌ ಸದ್ಯದಲ್ಲೇ ಶೂಟಿಂಗ್‌ಗೆ ಮರಳಲಿದ್ದಾರೆ.

  ಸದ್ಯ ಶಾರುಖ್ ಖಾನ್ ಚಿತ್ರೀಕರಣವನ್ನು ಪುನರಾರಂಭಿಸುವ ಯೋಜನೆಗಳು ನಡೆಯುತ್ತಿವೆ. ಆದರೆ ಶಾರುಖ್ ಖಾನ್ ಅವರು ಚಿತ್ರೀಕರಣಕ್ಕೆ ಮರಳುವ ದಿನಾಂಕವನ್ನು ಸದ್ಯದಲ್ಲೇ ಖಚಿತ ಪಡಿಸಲಿದ್ದಾರೆ. ಶಾರುಖ್ ಖಾನ್ ನಿಗದಿತ ದಿನಾಂಕಕ್ಕೆ ಚಿತ್ರೀಕರಣಕ್ಕೆ ಹಾಜರು ಆಗದೆ ಇರುವ ಸಲುವಾಗಿ ನಟಿ ನಯನ ತಾರ ಈ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ನಯನತಾರ ಈ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗಿತ್ತು. ಬಳಿಕ ಚಿತ್ರ ತಂಡ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ನಯನ ತಾರ ಸಿನಿಮಾ ತಂಡದಲ್ಲಿಯೆ ಇದ್ದರೆ ಎನ್ನುವ ಮಾಹಿತಿ ನೀಡಿತ್ತು.

  ಅಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ನಯನ ತಾರಾ ತನಿಖಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಶಾರುಖ್ ಖಾನ್ ಅವರು ತಂದೆ ಮತ್ತು ಮಗನ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಸಹಜವಾಗಿಯೇ ಇದೆ. ಆದರೆ ಚಿತ್ರೀಕರಣ ತಡವಾಗುತ್ತಿರುವುದರಿಂದ ಅಂದು ಕೊಂಡ ಸಮಯಕ್ಕೆ ಚಿತ್ರ ರಿಲೀಸ್‌ ಆಗುವುದು ಅನುಮಾನ.

  ಆರ್ಯನ್‌ ಖಾನ್‌ ಬಂಧನದ ಸಲುವಾಗಿ ಶಾರುಖ್‌ ಖಾನ್ ತಮ್ಮ ಸಿನಿಮಾಗಳ ಎಲ್ಲಾ ಕೆಲಸಗಳನ್ನು ನಿಲ್ಲಿಸ ಬೇಕಾಯಿತು. ಈಗ ಮಗ ಜೈಲಿನಿಂದ ಜಾಮೀನು ಪಡೆದು ಹೊರ ಬಂದ ಬಳಿಕ ಈಗ ಶಾರುಖ್ ತನ್ನ ಸಿನಿಮಾ ಕೆಲಸವನ್ನು ಪುನರಾರಂಭಿಸಲು ಸಜ್ಜಾಗುತ್ತಿದ್ದಾರೆ . ಶಾರುಖ್‌ ಖಾನ್ ಮಗನನ್ನು ಅಕ್ಟೋಬರ್ 2ರಂದು ಎನ್‌ಸಿಬಿ ಬಂಧಿಸಿತು. ಆರ್ಯನ್ ಖಾನ್ 22 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ.

   Shahrukh Khan Back to Movie Shooting

  ಶಾರುಖ್ ಖಾನ್ 2018ರಲ್ಲಿ ಬಂದ ಝೀರೊ ಸಿನಿಮಾದ ಬಳಿಕ ಎರಡು ವರ್ಷಗಳ ಕಾಲ ಬ್ರೇಕ್‌ ತೆಗೆದು ಕೊಂಡಿದ್ದರು. ಯಾವುದೇ ಹೊಸ ಚಿತ್ರಗಳನ್ನು ಶಾರುಖ್ ಒಪ್ಪಿಕೊಂಡಿರಲಿಲ್ಲ. 2021ರಲ್ಲಿ ಶಾರುಖ್‌ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿದ್ದರು. ಝೀರೊ ಸಿನಿಮಾ ಫ್ಲಾಪ್ ಆದ ಕಾರಣ ಶಾರುಖ್ ಖಾನ್ ಸದ್ಯ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳನ್ನು ಅತಿ ಎಚ್ಚರಿಕೆಯಿಂದ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ರಾಕೆಟ್ರಿ, ಪಠಾಣ್ ಮತ್ತು ಅಟ್ಲಿ ನಿರ್ದೇಶನದ ಚಿತ್ರಗಳನ್ನು ಮಾಡುತ್ತಿದ್ದಾರೆ. ಸದ್ಯ ಪಠಾಣ್ ಚಿತ್ರದ ಬಹುತೇಕ ಕೆಲಸಗಳನ್ನು ಶಾರುಖ್‌ ಖಾನ್‌ ಮಾಡಿ ಮುಗಿಸಿದ್ದಾರೆ. ಈಗ ಅಟ್ಲಿ ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ.

  English summary
  Shah Rukh Khan To Finally Resume The Shoot For Atlee’s Next Film
  Thursday, November 11, 2021, 10:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X