ಶಾರುಖ್ ಪುತ್ರಿ ಸುಹಾನಾ ಮೊಟ್ಟ ಮೊದಲ ಕಾಲ್ ಶೀಟ್ ಯಾರಿಗೆ ಸಿಗಬಹುದು.?

By Harshitha

ಬಾಲಿವುಡ್ ನಲ್ಲೀಗ ಹೊಸ ಪೀಳಿಗೆಯ ಆಗಮನ ಆಗುತ್ತಿದೆ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಆಯ್ತು, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಕೂಡ ಸದ್ಯದಲ್ಲಿಯೇ ಎಂಟ್ರಿ ಕೊಡ್ತಾರೆ. ಈಗ ಇದೇ ಸಾಲಿಗೆ ಸೇರಲು ಶಾರುಖ್ ಖಾನ್ ಪುತ್ರಿ ಸುಹಾನಾ ರೆಡಿ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಿಂಗ್ ಖಾನ್ ಶಾರುಖ್ ಪುತ್ರಿ ಇತ್ತೀಚೆಗಷ್ಟೇ ಮ್ಯಾಗಝೀನ್ ಒಂದಕ್ಕಾಗಿ ಫೋಟೋಶೂಟ್ ನಡೆಸಿದ್ದು ನಿಮಗೆ ತಿಳಿದಿರಬಹುದು. ಈಗ ನೋಡಿದ್ರೆ, ಚಿತ್ರರಂಗಕ್ಕೆ ಸುಹಾನಾ ಆದಷ್ಟು ಬೇಗ ಕಾಲಿಡುತ್ತಾರೆ ಅಂತ ಬಿಟೌನ್ ಮಂದಿ ಮಾತನಾಡಿಕೊಳ್ತಿದ್ದಾರೆ.

ಸುಹಾನಾಗಾಗಿ ಬಾಲಿವುಡ್ ನ ಕೆಲ ನಿರ್ದೇಶಕರು ಸ್ಕ್ರಿಪ್ಟ್ ಕೂಡ ರೆಡಿ ಮಾಡಿದ್ದಾರಂತೆ. ಯಾರು ಏನೇ ಮಾಡಿದರೂ, ಶಾರುಖ್ ಆತ್ಮೀಯ ಗೆಳೆಯ ಕರಣ್ ಜೋಹರ್ ಮೂಲಕವೇ ಸುಹಾನಾ ಲಾಂಚ್ ಆಗ್ತಾರೆ ಎನ್ನಲಾಗಿದೆ.

Shahrukh Khan daughter Suhana to make her Bollywood debut

ಆದ್ರೆ, ಗೌರಿ ಖಾನ್ ತಲೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ಸುಜಯ್ ಘೋಷ್ ಹೆಸರುಗಳಿವೆ. ಸುಹಾನಾ ಲಾಂಚ್ ಆದರೆ ಸಂಜಯ್ ಲೀಲಾ ಬನ್ಸಾಲಿ ಚಿತ್ರದ ಮೂಲಕವೇ ಆಗಬೇಕು ಅನ್ನೋದು ತಾಯಿ ಗೌರಿ ಖಾನ್ ಆಸೆ.

ಒಟ್ನಲ್ಲಿ, ಬಾಲಿವುಡ್ ಗೆ ಸುಹಾನಾ ಕಾಲಿಡುವುದು ಪಕ್ಕಾ. ಆದ್ರೆ, ಯಾವಾಗ.? ಯಾರ ಸಿನಿಮಾದಲ್ಲಿ.? ಅನ್ನೋದಿನ್ನೂ ಫೈನಲ್ ಆಗಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕು ಅಲ್ಲವೇ.!

More from Filmibeat

English summary
Bollywood Actor Shahrukh Khan daughter Suhana to make her Bollywood debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X