ಪುರುಷರ ಈ ವಸ್ತುವನ್ನು ಶಾರೂಖ್ 'ಆನ್ಲೈನ್'ನಲ್ಲಿ ಶಾಪಿಂಗ್ ಮಾಡಲ್ಲ! ಏನದು?
ಆನ್ಲೈನ್ ಶಾಪಿಂಗ್ ಮಾಡುವ ವೇಳೆ ತನಗೆ ಆಗುವ ಗೊಂದಲ ಬಗ್ಗೆ ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿಕೊಂಡಿದ್ದಾರೆ. ಸದ್ಯ ಜಗತ್ತಿನಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಆನ್ಲೈನ್ ಶಾಪಿಂಗ್ ವೆಬ್ ಸೈಟ್ ಅಮೇಜಾನ್ ಸಿಇಓ ಜೆಫ್ ಬೆಜೋಸ್ ಸಮ್ಮುಖದಲ್ಲಿ ಶಾರೂಖ್ ಅಚ್ಚರಿಯ ವಿಷಯವೊಂದನ್ನು ಬಹಿರರಂಗಪಡಿಸಿದ್ದಾರೆ.
ಎಲ್ಲರಂತೆ ಅಮೇಜಾನ್ ತಾಣದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುತ್ತೇನೆ. ಪುಸ್ತಕ, ತರಕಾರಿ ಇನ್ನಿತರ ವಸ್ತುಗಳನ್ನು ಆರ್ಡರ್ ಮಾಡುತ್ತೇನೆ ಎಂದು ಹೇಳಿದ ಬಾದ್ ಶಾ, ಪುರುಷರ ಬಳುಸುವ ಒಂದು ವಸ್ತುವನ್ನು ಮಾತ್ರ ನಾನು ಆನ್ ಲೈನ್ ನಲ್ಲಿ ಆರ್ಡರ್ ಮಾಡಲ್ಲ ಎಂದಿದ್ದಾರೆ. ಏನದು? ಮುಂದೆ ಓದಿ...

ಶಾರೂಖ್ ಆರ್ಡರ್ ಮಾಡದ ವಸ್ತು ಯಾವುದು?
ಭಾರತದ ಅತಿ ದೊಡ್ಡ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಶಾರೂಖ್ ಖಾನ್ ಅವರಿಗೆ, ಆನ್ ಲೈನ್ ನಲ್ಲಿ ತಮ್ಮ ಒಳ ಉಡುಪು (Underwear) ಖರೀದಿಸುವುದಕ್ಕೆ ಕಂಫರ್ಟ್ ಆಗಿಲ್ಲ ಎಂದು ತಿಳಿಸಿದ್ದಾರೆ.

ಡಾನ್ ಡೈಲಾಗ್ ಹೇಳಿದ
ಶಾರೂಖ್ ಖಾನ್ ಜೊತೆ ವೇದಿಕೆ ಹಂಚಿಕೊಂಡ ಅಮೇಜಾನ್ ಸಿಇಓ ಜೆಫ್ ಬೆಜೋಸ್, ಡಾನ್ ಸಿನಿಮಾದ ಡೈಲಾಗ್ ಹೇಳಿ ಖುಷಿ ಪಟ್ಟರು. ಡಾನ್ ಸಿನಿಮಾ ಫೇಮಸ್ ಡೈಲಾಗ್ ''ಡಾನ್ ಕೋ ಪಕಡ್ನಾ ಮುಷ್ಕಿಲ್ ಹೈ ನಹೀ...ನಾಮುಕಿನ್ ಹೈ'' ಹೊಡೆದರು.

ಶಾರೂಖ್ ವಿನಮ್ರ ವ್ಯಕ್ತಿ
ಶಾರೂಖ್ ಖಾನ್ ವಿನಮ್ರ ವ್ಯಕ್ತಿ ಎಂದು ಅಮೇಜಾನ್ ಸಿಇಓ ಜೇಫ್ ಜೆಫ್ ಬೆಜೋಸ್ ಹೇಳಿದ್ದಾರೆ. ಕಾರ್ಯಕ್ರಮ ಆರಂಭವಾಗುವುದಕ್ಕು ಮುನ್ನ ವೇದಿಕೆ ಹಿಂದೆ ಅವರ ಬಳಿ ಮಾತನಾಡುತ್ತಿದ್ದೆ. ಅವರೊಬ್ಬರ ವಿನಮ್ರ ವ್ಯಕ್ತಿ ಎಂದು ಶೋನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾರೂಖ್ ಮುಂದಿನ ಸಿನಿಮಾ?
ಜೀರೋ ಸಿನಿಮಾದ ಸೋಲಿನ ಬಳಿಕ ಶಾರೂಖ್ ಖಾನ್ ಹೊಸ ಚಿತ್ರವನ್ನು ಇನ್ನು ಆರಂಭಿಸಿಲ್ಲ. ಬಾಲಿವುಡ್ ಜೋಡಿ ನಿರ್ದೇಶಕರಾದ ಡಿಕೆ ಮತ್ತು ರಾಜ್ ನಿರ್ದೇಶನದಲ್ಲಿ ಕಿಂಗ್ ಖಾನ್ ಮುಂದಿನ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾವುದೇ ಪಕ್ಕಾ ಆಗಿಲ್ಲ.


Click it and Unblock the Notifications











