For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ಶಾರುಖ್ ಖಾನ್: 5 ಸಾವಿರ ಅಭಿಮಾನಿಗಳಿಂದ ಜನ್ಮದಿನ ಆಚರಣೆ

  |

  ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ನಟ ಶಾರುಖ್ ಖಾನ್ ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದರೂ, ಅಭಿಮಾನಿಗಳು ಅದ್ದೂರಿಯಾಗಿ ಆಚರಮೆ ಮಾಡಿ ಸಂಭ್ರಮಿಸಲು ಸಜ್ಜಾಗಿದ್ದಾರೆ.

  ಬರೋಬ್ಬರಿ 5 ಸಾವಿರ ಜನರು ಸೇರಿಕೊಂಡು ಶಾರುಖ್ ಖಾನ್ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಕೊರೊನಾ ನಡುವೆಯೂ ಈ ಅದ್ದೂರಿ ಆಚರಣೆ ಮಾಡುತ್ತಿರುವುದೇ ಈ ಬಾರಿಯ ಶಾರುಖ್ ಹುಟ್ಟುಹಬ್ಬದ ವಿಶೇಷ. ಬಾಲಿವುಡ್ ಕಿಂಗ್ ಖಾನ್ ಹುಟ್ಟುಹಬ್ಬ ಎಂದರೆ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ಈ ಹಬ್ಬವನ್ನು ಅದ್ದೂರಿಯಾಗೆ ಆಚರಣೆ ಮಾಡುತ್ತಿರುವುದು ಹೇಗೆ? ಮುಂದೆ ಓದಿ...

  'ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಏನು ಗಿಫ್ಟ್ ಕೊಟ್ರಿ' ಎಂದ ಅಭಿಮಾನಿಗೆ ಶಾರುಖ್ ಹೇಳಿದ್ದೇನು?'ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಏನು ಗಿಫ್ಟ್ ಕೊಟ್ರಿ' ಎಂದ ಅಭಿಮಾನಿಗೆ ಶಾರುಖ್ ಹೇಳಿದ್ದೇನು?

  ಮನ್ನತ್ ನಿವಾಸದ ಮುಂದೆ ಜನಸಾಗವೇ ಸೇರುತ್ತಿತ್ತು

  ಮನ್ನತ್ ನಿವಾಸದ ಮುಂದೆ ಜನಸಾಗವೇ ಸೇರುತ್ತಿತ್ತು

  ಪ್ರತಿವರ್ಷ ಶಾರುಖ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಶಾರುಖ್ ಮುಂಬೈ ನಿವಾಸ ಮನ್ನತ್ ಎದುರು ಸಾವಿರಾರು ಅಭಿಮಾನಿಗಳು ಬಂದು ಸೇರುತ್ತಾರೆ. ಶಾರುಖ್ ಖಾನ್ ಮನ್ನತ್ ನಿವಾಸದ ಮುಂದೆ ಬಂದು ಅಭಿಮಾನಿಗಳತ್ತ ಕೈ ಬೀಸಿ, ಅಭಿಮಾನಿಗಳ ಪ್ರೀತಿಯ ಶುಭಾಶಯ ಸ್ವೀಕರಿಸುತ್ತಿದ್ದರು. ಶಾರುಖ್ ಖಾನ್ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದರು.

  ವಿಡಿಯೋ ಕಾಲ್ ಮೂಲಕ ಹುಟ್ಟುಹಬ್ಬ

  ವಿಡಿಯೋ ಕಾಲ್ ಮೂಲಕ ಹುಟ್ಟುಹಬ್ಬ

  ಆದರೆ ಈ ವರ್ಷ ಕೊರೊನಾ ವೈರಸ್ ಕಾರಣ ಮನ್ನತ್ ನಿವಾಸದ ಮುಂದೆ ಸಾವಿರಾರು ಅಭಿಮಾನಿಗಳು ಬಂದು ಸೇರುವ ಹಾಗಿಲ್ಲ. ಹಾಗಾಗಿ ಈ ಬಾರಿ ಹೊಸ ಯೋಜನೆ ರೂಪಿಸಿದ್ದಾರೆ. ವರ್ಚುವಲ್ ಮೂಲಕ ಶಾರುಖ್ ಖಾನ್ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲು ಪ್ಲಾನ್ ಮಾಡಲಾಗಿದೆ.

  ಕಾಜೋಲ್ ಮಗಳ ಜೊತೆ ಶಾರುಖ್ ಖಾನ್ ಪುತ್ರನ ಮದುವೆ ಸುದ್ದಿ ವೈರಲ್ ಕಾಜೋಲ್ ಮಗಳ ಜೊತೆ ಶಾರುಖ್ ಖಾನ್ ಪುತ್ರನ ಮದುವೆ ಸುದ್ದಿ ವೈರಲ್

  5 ಸಾವಿರ ಅಭಿಮಾನಿಗಳು ಭಾಗಿ

  5 ಸಾವಿರ ಅಭಿಮಾನಿಗಳು ಭಾಗಿ

  ಸುಮಾರು 5 ಸಾವಿರ ಜನರು ವಿಡಿಯೋ ಕಾಲ್ ನಲ್ಲಿ ಜೊತೆಯಾಗಿ ಶಾರುಖ್ ಗೆ ಶುಭಾಶಯ ಕೋರುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಲೈವ್ ಮೂಲಕ ನೋಡುವ ವ್ಯವಸ್ಥೆಯನ್ನು ಮಾಡಲಾಗಿದೆಯಂತೆ. ಶಾರುಖ್ ವಿವಿಧ ಅಭಿಮಾನಿ ಸಂಘಟನೆಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಮನ್ನತ್ ಮುಂಭಾಗದಲ್ಲಿ ಪ್ರತಿವರ್ಷ ಇದ್ದ ಸಂಭ್ರಮದ ಹಾಗೆ ಇರಲಿದೆ ಎಂದು ಹೇಳಲಾಗುತ್ತಿದೆ.

  ಅಭಿಮಾನಿಗಳಲ್ಲಿ ಶಾರುಖ್ ಮನವಿ

  ಅಭಿಮಾನಿಗಳಲ್ಲಿ ಶಾರುಖ್ ಮನವಿ

  ಈ ಬಾರಿಯ ಹುಟ್ಟುಹಬ್ಬದ ಬಗ್ಗೆ ನಟ ಶಾರುಖ್ ಖಾನ್, ಟ್ವಿಟ್ಟರ್ ಮೂಲಕ ಬಹಿರಂಗ ಪಡಿಸಿದ್ದರು. ಈ ವರ್ಷ ಮನೆ ಬಳಿ ಯಾರು ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಯಾರು ಗುಂಪು ಸೇರಬೇಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಹುಟ್ಟುಹಬ್ಬ ಅಥವಾ ಯಾವುದೇ ಸಮಾರಂಭ, ಈ ವರ್ಷ ಪ್ರೀತಿ ದೂರದಿಂದನೇ ಬರಲಿ ಎಂದು ಹೇಳಿದ್ದರು. ಹಾಗಾಗಿ ಅಭಿಮಾನಿಗಳು ಈ ಬಾರಿ ವಿಭಿನ್ನವಾದ ಪ್ಲಾನ್ ಮಾಡಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

  ದುಬೈನಲ್ಲಿರುವ ಶಾರುಖ್

  ದುಬೈನಲ್ಲಿರುವ ಶಾರುಖ್

  ಅಂದ್ಹಾಗೆ ಶಾರುಖ್ ಖಾನ್ ಈ ವರ್ಷ ಮುಂಬೈನಲ್ಲಿಲ್ಲ. ಪ್ರತಿವರ್ಷ ಹುಟ್ಟುಹಬ್ಬದ ದಿನ ಮುಂಬೈ ನಿವಾಸದಲ್ಲಿ ಇರುತ್ತಿದ್ದರು. ಆದರೆ ಈ ಬಾರಿ ಐಪಿಎಲ್ ಕಾರಣ ದುಬೈನಲ್ಲಿದ್ದಾರೆ. ಶಾರುಖ್ ಇಡೀ ಕುಟುಂಬ ದುಬೈನಲ್ಲಿ ನೆಲೆಸಿದೆ. ಅಲ್ಲೇ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

  English summary
  Bollywood Actor Shahrukh khan celebrating 55th birthday. Fans club celebration global virtual birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X