For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್-ಅಟ್ಲಿ ಚಿತ್ರದಿಂದ ಹೊರಬಿತ್ತು ಭರ್ಜರಿ ಸುದ್ದಿ

  |

  2018ರ ನಂತರ ಶಾರೂಖ್ ಖಾನ್ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಮುಂದಿನ ವರ್ಷ ಎರಡು ನಿರೀಕ್ಷೆಯ ಚಿತ್ರಗಳೊಂದಿಗೆ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿದ್ದಾರೆ ಖಾನ್. ಒಂದು ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ನಟಿಸುತ್ತಿದ್ದರೆ, ಮತ್ತೊಂದೆಡೆ ಅಟ್ಲಿ ಸಿನಿಮಾಗೂ ಚಾಲನೆ ಕೊಟ್ಟಿದ್ದಾರೆ.

  ಸೌತ್ ನಿರ್ದೇಶಕ ಅಟ್ಲಿ ಜೊತೆ ಶಾರೂಖ್ ಖಾನ್ ಸಿನಿಮಾ ಮಾಡ್ತಾರೆ ಎನ್ನುವುದು ಬಹಳ ವರ್ಷಗಳಿಂದಲೂ ಸುದ್ದಿಯಲ್ಲಿತ್ತು. ಆ ಸುದ್ದಿ ಈಗ ನಿಜವಾಗಿದೆ. ಅಟ್ಲಿ ಮತ್ತು ಶಾರೂಖ್ ಖಾನ್ ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಆರಂಭಿಸಿದೆ. ಪಠಾಣ್ ಚಿತ್ರಕ್ಕೆ ಬ್ರೇಕ್ ಕೊಟ್ಟಿದ್ದು, ಈ ವಿರಾಮದ ನಡುವೆ ಅಟ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಶಾರೂಖ್ ಖಾನ್ ತೊಡಗಿಕೊಂಡಿದ್ದಾರೆ. ಈ ಮೂಲಕ ಮುಂದಿನ ವರ್ಷಕ್ಕೆ ಎರಡು ಭರ್ಜರಿ ಸಿನಿಮಾಗಳನ್ನು ಅಭಿಮಾನಿಗಳಿಗೆ ಕೊಡುವ ಯೋಜನೆ ಖಾನ್ ಮುಂದಿದೆ.

  ಶಾರೂಖ್ ಖಾನ್-ಅಟ್ಲಿ ಚಿತ್ರದ ಟೈಟಲ್ ಫಿಕ್ಸ್, ಚಿತ್ರೀಕರಣಕ್ಕೆ ಚಾಲನೆ!ಶಾರೂಖ್ ಖಾನ್-ಅಟ್ಲಿ ಚಿತ್ರದ ಟೈಟಲ್ ಫಿಕ್ಸ್, ಚಿತ್ರೀಕರಣಕ್ಕೆ ಚಾಲನೆ!

  ಸೆಪ್ಟೆಂಬರ್ ಆರಂಭದಲ್ಲಿ ಅಟ್ಲಿ ಸಿನಿಮಾದ ಶೂಟಿಂಗ್ ಶುರುವಾಗಿದೆ. ಈ ಪ್ರಾಜೆಕ್ಟ್ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ ಯೋಜನೆಯಂತೆ ಚಿತ್ರೀಕರಣ ಸಾಗ್ತಿದೆ. ಮೊದಲ ಹಂತದ ಶೂಟಿಂಗ್ ಮುಂಬೈನಲ್ಲಿ ಆರಂಭವಾಗಿತ್ತು. ಇದೀಗ, ಶಾರೂಖ್-ಅಟ್ಲಿ ಅಡ್ಡಾದಿಂದ ಸರ್ಪ್ರೈಸ್ ಸುದ್ದಿಯೊಂದು ಹೊರಬಿದ್ದಿದೆ. ಮುಂದೆ ಓದಿ...

  ದ್ವಿಪಾತ್ರದಲ್ಲಿ ಶಾರೂಖ್ ಖಾನ್

  ದ್ವಿಪಾತ್ರದಲ್ಲಿ ಶಾರೂಖ್ ಖಾನ್

  ಅಟ್ಲಿ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಶಾರೂಖ್ ಖಾನ್ ಪಾತ್ರ ಏನು ಎನ್ನುವುದರ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ, ಭರ್ಜರಿ ಸುದ್ದಿ ಹೊರಬಿದ್ದಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವಂತೆ ಶಾರೂಖ್ ಖಾನ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಸುತ್ತಿದ್ದಾರಂತೆ. ಮಗ ಹಾಗೂ ತಂದೆ ಎರಡು ಪಾತ್ರದಲ್ಲಿ ಶಾರೂಖ್ ಬಣ್ಣ ಹಚ್ಚಿದ್ದಾರೆ ಎಂದು ಹೇಳಲಾಗಿದೆ.

  ಜೂನಿಯರ್ ಮತ್ತು ಸೀನಿಯರ್

  ಜೂನಿಯರ್ ಮತ್ತು ಸೀನಿಯರ್

  "ಅಟ್ಲಿಯ ಮುಂದಿನ ಚಿತ್ರದಲ್ಲಿ ಎಸ್‌ಆರ್‌ಕೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಈ ಚಿತ್ರದಲ್ಲಿ ಇಬ್ಬರು ಶಾರುಖ್ ಖಾನ್ ನೋಡಬಹುದು. ಇದೊಂದು ಥ್ರಿಲ್ಲರ್ ಕಥಾಹಂದರ ಆಗಿದ್ದು, ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾಗಿ ಶಾರೂಖ್ ಅಭಿನಯಿಸುತ್ತಿದ್ದಾರೆ ಎಂದು ತಿಳಿದಿದೆ. ತಂದೆ ಮತ್ತು ಮಗ ಎರಡೂ ಪಾತ್ರವನ್ನು ಶಾರೂಖ್ ಅವರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಹಿರಿಯ ಎಸ್‌ಆರ್‌ಕೆ ಮತ್ತು ಕಿರಿಯ ಎಸ್‌ಆರ್‌ಕೆ ಚಿತ್ರದಲ್ಲಿ ಇರಲಿದ್ದಾರೆ" ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

  ಶಾರೂಖ್ ಖಾನ್-ರಾಜ್ ಕುಮಾರ್ ಹಿರಾನಿ ಚಿತ್ರದ ಅಪ್‌ಡೇಟ್ಶಾರೂಖ್ ಖಾನ್-ರಾಜ್ ಕುಮಾರ್ ಹಿರಾನಿ ಚಿತ್ರದ ಅಪ್‌ಡೇಟ್

  ಲಯನ್ ಅಥವಾ ಜವಾನ್

  ಲಯನ್ ಅಥವಾ ಜವಾನ್

  ಅಟ್ಲಿ ಮತ್ತು ಶಾರೂಖ್ ಖಾನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಹೆಸರು ಏನು ಎನ್ನುವುದು ಕುತೂಹಲ ಕೆರಳಿಸಿದೆ. ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರ ಏಕಕಾಲದಲ್ಲಿ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆ. ಆರಂಭದಲ್ಲಿ ಈ ಚಿತ್ರಕ್ಕೆ 'ಸಂಖಿ' ಎಂದು ಹೆಸರಿಡಲಾಗಿದೆ ಎಂದು ಸುದ್ದಿ ಕೇಳಿ ಬಂದಿತ್ತು. ನಂತರ 'ಲಯನ್' ಎಂಬ ಹೆಸರು ಸದ್ದು ಮಾಡಿತು. ಈಗ 'ಜವಾನ್' ಎನ್ನುವ ಹೆಸರು ಚಾಲ್ತಿಯಲ್ಲಿದೆ. ಈ ಮೂರರಲ್ಲಿ ಯಾವ ಟೈಟಲ್ ಅಂತಿಮವಾಗಲಿದೆ ಎನ್ನುವುದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.

  ಲೇಡಿ ಸೂಪರ್ ಸ್ಟಾರ್ ನಾಯಕಿ

  ಲೇಡಿ ಸೂಪರ್ ಸ್ಟಾರ್ ನಾಯಕಿ

  ಲೈಕಾ ಪ್ರೊಡಕ್ಷನ್ ಮತ್ತು ಶಾರೂಖ್ ಖಾನ್ ಅವರ ರೆಡ್ ಚಿಲ್ಲೀಸ್ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಸುಮಾರು 200 ಕೋಟಿ ಪ್ರಾಜೆಕ್ಟ್ ಎನ್ನಲಾಗಿದೆ. ಇನ್ನು ಅಟ್ಲಿ ಮತ್ತು ಶಾರೂಖ್ ಖಾನ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಲಿರುವ ಹೊಸ ಚಿತ್ರದಲ್ಲಿ ನಯನತಾರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಟ್ಲಿ ನಿರ್ದೇಶನದ 'ರಾಜರಾಣಿ' ಸಿನಿಮಾದಲ್ಲಿ ನಯನತಾರ ಅಭಿನಯಿಸಿದ್ದರು. ಇದು 'ಲೇಡಿ ಸೂಪರ್‌ಸ್ಟಾರ್‌'ಗೆ ಚೊಚ್ಚಲ ಹಿಂದಿ ಸಿನಿಮಾ.

  ರಾಜ್ ಕುಮಾರ್ ಹಿರಾನಿ ಜೊತೆ ಪ್ರಾಜೆಕ್ಟ್?

  ರಾಜ್ ಕುಮಾರ್ ಹಿರಾನಿ ಜೊತೆ ಪ್ರಾಜೆಕ್ಟ್?

  ಶಾರೂಖ್ ಖಾನ್ ಸದ್ಯ 'ಪಠಾಣ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದು, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಹುತೇಕ ಕೊನೆಯ ಹಂತದಲ್ಲಿದೆ. ಇದರ ಜೊತೆಯಲ್ಲೇ ಅಟ್ಲಿ ಚಿತ್ರವೂ ಆರಂಭಿಸಿದ್ದಾರೆ. ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಹೊಸ ಸಿನಿಮಾವೊಂದು ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

  English summary
  Bollywood actor shahrukh khan has double role in Atlee's next. He will play the role of both father and son.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X