For Quick Alerts
  ALLOW NOTIFICATIONS  
  For Daily Alerts

  ಮುಂದಿನ ಚಿತ್ರದ ಬಗ್ಗೆ 'ದೊಡ್ಡ ಸುಳಿವು' ನೀಡಿದ ಶಾರೂಖ್ ಖಾನ್

  |

  ಬಾಲಿವುಡ್ ಶಾರೂಖ್ ಖಾನ್ ಬುಧವಾರ ಮಧ್ಯಾಹ್ನ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸಿದರು. #AskSRK ಹ್ಯಾಷ್‌ಟ್ಯಾಗ್ ಅಡಿ ಪ್ರಶ್ನೆಗಳನ್ನು ಕೇಳುವಂತೆ ಕರೆ ನೀಡಿದ್ದ ಶಾರೂಖ್‌ಗೆ ತಮ್ಮ ಮುಂದಿನ ಚಿತ್ರ ಬಗ್ಗೆಯೇ ಹೆಚ್ಚು ಪ್ರಶ್ನೆಗಳು ಕೇಳಿ ಬಂದವು.

  ಈ ವೇಳೆ ಅಭಿಮಾನಿಯೊಬ್ಬ ಶಾರೂಖ್ ಖಾನ್ ಅವರಿಗೆ ''ಸರ್ ನಿಮ್ಮ ಮುಂದಿನ ಸಿನಿಮಾದ ಬಗ್ಗೆ ಒಂದು ಸುಳಿವು ನೀಡಿ'' ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾರೂಖ್ ಖಾನ್ ''ಮುಂದಿನ ಚಿತ್ರದಲ್ಲಿ ನಾನು ಪ್ರಮುಖ ನಟನಾಗಿ ಅಭಿನಯಿಸುತ್ತಿದ್ದೇನೆ. ಯಾರಿಗೂ ಹೇಳಬೇಡಿ'' ಎಂದು ಹಾಸ್ಯ ಚಟಾಕಿ ಬಾರಿಸಿದರು.

  ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?

  ಮತ್ತೊಬ್ಬ ಅಭಿಮಾನಿ ''ಸರ್ ಅಧಿಕೃತ ಘೋಷಣೆ ಯಾವಾಗ ಮಾಡ್ತೀರಾ?'' ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಾರೂಖ್ ಖಾನ್ ''ಪ್ರಕಟಣೆ ಎನ್ನುವುದು ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಮೈ ಫ್ರೆಂಡ್'' ಎಂದಿದ್ದಾರೆ.

  ಅಂದ್ಹಾಗೆ, ಶಾರೂಖ್ ಖಾನ್ ಸದ್ಯ 'ಪಠಾಣ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಈ ಚಿತ್ರ ನಿರ್ದೇಶಿಸುತ್ತಿದ್ದು, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಪ್ರಮುಖ ತಾರಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ವಿಶೇಷ ಅಂದ್ರೆ ಸಲ್ಮಾನ್ ಖಾನ್ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಕಳೆದ ವರ್ಷ ಮುಂಬೈನಲ್ಲಿ ಚಿತ್ರೀಕರಣ ಆರಂಭಿಸಿದ್ದ ಪಠಾಣ್ ದುಬೈನಲ್ಲಿ ಸಹ ಶೂಟಿಂಗ್ ಮಾಡಿದೆ.

  Thalaiva Rajnikanth ಗೆ ಒಲಿಯಿತು ಶ್ರೇಷ್ಠ Dada Saheb Phalke ಪ್ರಶಸ್ತಿ | Filmibeat Kannada

  ಶಾರೂಖ್ ಖಾನ್ ಕೊನೆಯದಾಗಿ 'ಜೀರೋ' ಸಿನಿಮಾದಲ್ಲಿ ಅಭಿನಯಿಸಿದ್ದರು. 2018ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಾಯಕಿಯರಾಗಿದ್ದರು. ಕುಬ್ಜನ ಪಾತ್ರದಲ್ಲಿ ಶಾರೂಖ್ ಬಣ್ಣ ಹಚ್ಚಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿತ್ತು.

  English summary
  Shahrukh Khan Has Drops Strong Hint About His next movie during #AskSRK session.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X