ಅರೇ... 16ನೇ ವಯಸ್ಸಿನಿಂದ ಅಂಥದ್ದೇನು ಮಾಡ್ತಿದ್ರು ಶಾರುಖ್ ಪುತ್ರಿ ಸುಹಾನಾ?
ಬಾಲಿವುಡ್ ಬಾದ್ಷಾ.. ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ನಿನ್ನೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಮೇ 22 ರಂದು 18ನೇ ವಯಸ್ಸಿಗೆ ಸುಹಾನಾ ಖಾನ್ ಕಾಲಿಟ್ಟರು.
ಮಗಳ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವುದರ ಜೊತೆಗೆ, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿಯೂ ಸುಹಾನಾಗೆ ಶಾರುಖ್ ಶುಭ ಕೋರಿದ್ದರು.

''ಎಲ್ಲ ಹೆಣ್ಮಕ್ಕಳಂತೆ, ನೀನು ಕೂಡ ಸದಾ ಹಾರಲು ಬಯಸಿದವಳು. 16ನೇ ವಯಸ್ಸಿನಿಂದ ನೀನು ಏನೇನೆಲ್ಲ ಮಾಡ್ತಿದ್ಯೋ, ಅದನ್ನೆಲ್ಲ ನೀನೀಗ ಕಾನೂನಾತ್ಮಕವಾಗಿ ಮಾಡಬಹುದು. ಲವ್ ಯು'' ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಸುಹಾನಾ ಹಾರುತ್ತಿರುವ ಫೋಟೋವನ್ನೂ ಶಾರುಖ್ ಟ್ವೀಟಿಸಿದ್ದಾರೆ.
ಜನ್ಮದಿನದಂದು ಸುಹಾನಾಗೆ ಶಾರುಖ್ ಅಭಿಮಾನಿಗಳು ಕೂಡ ಶುಭ ಕೋರಿದರು. ಈ ನಡುವೆ ಶಾರುಖ್ ಮಾಡಿರುವ ಟ್ವೀಟ್ ನ ಅರ್ಥ ಏನಿರಬಹುದು ಎಂದು ಕೆಲವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
''16ನೇ ವಯಸ್ಸಿನಿಂದ ನೀನು ಏನೇನೆಲ್ಲ ಮಾಡ್ತಿದ್ಯೋ, ಅದನ್ನೆಲ್ಲ ನೀನೀಗ ಕಾನೂನಾತ್ಮಕವಾಗಿ ಮಾಡಬಹುದು'' ಎಂದು ಶಾರುಖ್ ಬರೆದಿರುವ ಸಾಲು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಈಗ ಕಾನೂನಿನ ಪ್ರಕಾರ ಮಾಡಬಹುದು ಅಂದ್ರೆ, ಇಷ್ಟು ದಿನ ಕಾನೂನು ಬಾಹಿರವಾಗಿ ಸುಹಾನಾ ಏನು ಮಾಡ್ತಿದ್ರು ಅನ್ನೋದು ನೆಟ್ಟಿಗರ ಪ್ರಶ್ನೆ.
ಅದೇನೇ ಇರಲಿ, ಶಾರುಖ್ ಮಗಳಿಗೀಗ 18 ವರ್ಷ ತುಂಬಿದೆ. ಮಗಳು ಮೇಜರ್ ಆಗಿದ್ದಾಳೆ. ಆದ್ರೆ, ಶಾರುಖ್ ಮಾತ್ರ ಇನ್ನೂ ಹೀರೋ. ಸದ್ಯ ಶಾರುಖ್ ಖಾನ್ 'ಝೀರೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











