ಮಕ್ಕಳ ಮನಸ್ಸು ಕೆಡಿಸುವ ಖಾನ್ ಮೇಲೆ ಕೇಸ್?
ಶಾರುಖ್ ಖಾನ್ ಎಂದರೆ ಜನರಲ್ಲಿ ಯಾವ ಪರಿ ಹುಚ್ಚಿದೆ ಎಂಬುದು ಎಲ್ಲರಿಗೂ ತಿಳಿದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಘಟನೆ ನಂತರ ಶಾರುಖ್ ಅವರು ಹುಚ್ಚಾಚ್ಚಾಗಿ ಮನಬಂದಂತೆ ಅವಾಚ್ಯ ಶಬ್ದ ಬಳಸಿ ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿದ್ದಾರೆ.
ಶಾರುಖ್ ಖಾನ್ ಅಭಿಮಾನಿಗಳಲ್ಲಿ ಚಿಕ್ಕ ಮಕ್ಕಳು ಹೆಚ್ಚಾಗಿದ್ದು, ಶಾರುಖ್ ಅವರನ್ನು ಅನುಕರಿಸುವುದು ಸಾಮಾನ್ಯವಾಗಿ. ಪರಿಸ್ಥಿತಿ ಹೀಗಿರುವಾಗ ನಾಗರೀಕ ಜವಾಬ್ದಾರಿ ಮರೆತಿರುವ ಶಾರುಖ್ ಅವರ ನಡವಳಿಕೆಯಿಂದ ದೇಶದ ಯುವ ಪೀಳಿಗೆ ಅವರಂತೆ ಆಗುವ ಎಲ್ಲಾ ಲಕ್ಷಣಗಳಿದೆ.
ಯುವ ಮನಸ್ಸುಗಳನ್ನು ಕೆಡಿಸುವ, ಮಕ್ಕಳ ಮನಸ್ಸನ್ನು ಭ್ರಷ್ಟ ಗೊಳಿಸುವ ಶಾರುಖ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮುಂಬೈ ನಿವಾಸಿ ಅಮಿತ್ ಮೇರು ಅವರ ಅವರ ವಕೀಲ ವೈ ಪಿ ಸಿಂಗ್ ಅವರು ಮಹಾರಾಷ್ಟ್ರ ರಾಜ್ಯ ಮಕ್ಕಳ ಸಂರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಶಾರುಖ್ ರಿಂದ ಕೊಳಕು ಭಾಷೆಯನ್ನು ಮಕ್ಕಳು ಕೂಡಾ ಕಲಿಯುತ್ತಿದ್ದಾರೆ. ಮರಾಠಿ ಸಂಸ್ಕೃತಿಗೆ ಇದು ಮಾರಕ ಹೀಗಾಗಿ ಶಾರುಖ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಅಮಿತ್ ಮೇರು ಹೇಳಿದ್ದಾರೆ.
ಶಾರುಖ್ ಮಾಡಿರುವ ತಪ್ಪುಗಳನ್ನು ಚಿತ್ರಗುಪ್ತನಂತೆ ಲೆಕ್ಕ ಇಟ್ಟಿರುವ ಅಮಿತ್ ಎಲ್ಲವನ್ನೂ ಆಯೋಗದ ಮುಂದಿಟ್ಟಿದ್ದಾರೆ. ಸಾರ್ವಜನಿಕವಾಗಿ ಕುಡಿದು ಗಲಾಟೆ ಮಾಡುವುದು, ಮಕ್ಕಳ ಮುಂದೆ ಕೆಟ್ಟ ಭಾಷೆ ಬಳಸುವುದು, ಅತಿಯಾದ ಸಿಗರೇಟ್ ಸೇವನೆ ಇವೇ ಮುಂತಾದ ಕೆಟ್ಟಗುಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಶಾರುಖ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಆಯೋಗ ಇನ್ನೂ ಸಿದ್ಧತೆ ನಡೆಸಿಲ್ಲ. ಆದರೂ ಶಾರುಖ್ ಗೆ ಈ ನಡುವೆ ಕಾನೂನು ಹೋರಾಟ ಬೇಸರ ತರಿಸಿದೆ. ಬದಲಾಗಲೂ ಯತ್ನಿಸಲು ಮತ್ತೆ ಮತ್ತೆ ಸಾರ್ವಜನಿಕವಾಗಿ ನಿಂದನೆ ಒಳಗಾಗುತ್ತಿರುವುದು ಶಾರುಖ್ ಗೆ ಚುಚ್ಚುತ್ತಿದೆ. ಶಾರುಖ್ ಏನೇ ಮಾಡಿದರೂ ಅಭಿಮಾನಿಗಳ ಸಂಖ್ಯೆ ಮಾತ್ರ ತಗ್ಗಿಲ್ಲ.


Click it and Unblock the Notifications












