ರಾಕಿಂಗ್ ಸ್ಟಾರ್ ಯಶ್ ಬಳಿ ಶಾರುಖ್ ಖಾನ್ ಮನವಿ ಮಾಡಿದ್ದೇನು?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪದೇ ಪದೆ ಸಿನಿಮಾ ತಡವಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತದೆ ಎನ್ನುವ ನಿರೀಕ್ಷೆಯಿದೆ. ಇತ್ತೀಚೆಗೆ ಸ್ವತಃ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಅಪ್‌ಡೇಟ್ ಕೊಟ್ಟಿದ್ದರು.

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಫಸ್ಟ್ ಶೆಡ್ಯೂಲ್ ಮುಕ್ತಾಯವಾಗಿದೆ. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಭಾರೀ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. 25 ದಿನಗಳ ಕಾಲ ಒಂದಷ್ಟು ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿದಿದ್ದರು. ಇದೀಗ ಮುಂಬೈನಲ್ಲಿ ಸೆಕೆಂಡ್ ಶೆಡ್ಯೂಲ್ ಎನ್ನಲಾಗುತ್ತಿದೆ.

shahrukh khan is awaiting for TOXIC by saying yash Make movies quickly

ಇನ್ನೆರಡು ದಿನಗಳಲ್ಲಿ ವಾಣಿಜ್ಯ ನಗರಿಯಲ್ಲಿ 'ಟಾಕ್ಸಿಕ್' ಚಿತ್ರೀಕರಣ ಆರಂಭವಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಯಶ್ ಮುಂಬೈ ತಲುಪಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಮುಂಬೈನಲ್ಲಿ ಭಾರೀ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸುತ್ತಾರಂತೆ. ನಾಯಕಿಯಾಗು ಕೈರಾ ಅದ್ವಾನಿ ಕೂಡ ತಂಡವನ್ನು ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹಿಂದೆ ಹೇಳಲಾಗಿತ್ತು. ಆದರೆ ಶೂಟಿಂಗ್ ತಡವಾಗುತ್ತಿರುವುದರಿಂದ ರಿಲೀಸ್ ಡೇಟ್ ಮುಂದೂಡಲಾಗುತ್ತಿದೆ.

'ಟಾಕ್ಸಿಕ್' ಸಿನಿಮಾ ರಿಲೀಸ್ ತಡವಾಗುವ ಸುದ್ದಿ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. 'KGF-2' ಸಿನಿಮಾ ಬಂದೋಗಿ ಎರಡೂವರೆ ವರ್ಷ ಕಳೆದಿದೆ. ಆದರೆ ಈವರೆಗೆ ಯಶ್ ನಟಿಸಿದ ಯಾವುದೇ ಸಿನಿಮಾ ಬಂದಿಲ್ಲ. 'ಟಾಕ್ಸಿಕ್' ಬಗ್ಗೆಯೂ ಹೆಚ್ಚಿನ ಅಪ್‌ಡೇಟ್ ಸಿಕ್ಕಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಟೈಟಲ್ ಅನೌನ್ಸ್ ಮಾಡಿದ್ದರು. ಬಳಿಕ ಆಗಸ್ಟ್‌ನಲ್ಲಿ ಮುಹೂರ್ತ ನೆರವೇರಿಸಿದ್ದ ಮಾಹಿತಿ ಸಿಕ್ಕಿತ್ತು. ಇನ್ನುಳಿದಂತೆ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ನಯನತಾರ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಯನ್ ಬೆಂಗಳೂರು ಶೆಡ್ಯೂಲ್‌ನಲ್ಲಿ ಭಾಗಿ ಆಗಿದ್ದರು. ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ಆಕೆ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು 'ಟಾಕ್ಸಿಕ್' ಸಿನಿಮಾ ಬೇಗ ಮಾಡುವಂತೆ ಅಭಿಮಾನಿಗಳು ಮಾತ್ರವಲ್ಲ, ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಕೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಿಂಗ್ ಖಾನ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ 'ಟಾಕ್ಸಿಕ್' ಸಿನಿಮಾ ಟಾಪಿಕ್ ತೆಗೆದಿದ್ದರು. ಆ ವೀಡಿಯೋ ವೈರಲ್ ಆಗುತ್ತಿದೆ.

ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಬೆಂಗಳೂರಿಗೆ ಯಾವಾಗ ಬರ್ತೀರಾ ಸರ್? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಕಿಂಗ್ ಖಾನ್ "ಬೇಗ ಬರ್ತೀನಿ, ಯಶ್ ಬೆಂಗಳೂರಿನಲ್ಲಿ ಬೇಗ ಬೇಗ ಸಿನಿಮಾ ಮಾಡಿ" ಎಂದು ಹೇಳಿದ್ದಾರೆ. ನಮ್ಮ ಬಾಸ್ ಸಿನಿಮಾಗಾಗಿ ಶಾರುಖ್ ಖಾನ್ ಕೂಡ ಕಾಯುತ್ತಿದ್ದಾರೆ ಎಂದು ಯಶ್ ಫ್ಯಾನ್ಸ್ ಕಾಲರ್ ಎಗರಿಸಿದ್ದಾರೆ.

ಅಂದಹಾಗೆ ಸ್ವತಃ ಯಶ್ ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಭಿಮಾನಿ. ಈ ಬಗ್ಗೆ ಹಿಂದೆ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ನನಗೆ ಕಿಂಗ್ ಖಾನ್ ದೊಡ್ಡ ಇನ್ಪಿರೇಷನ್ ಎಂದು ರಾಕಿಂಗ್ ಸ್ಟಾರ್ ಹೇಳಿಕೊಂಡಿದ್ದರು. ಇನ್ನು ನಟ ಯಶ್ ಈಗ ನಟನೆ ಜೊತೆಗೆ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಮಾನ್ಟರ್ ಮೈಂಡ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ಕೆವಿನ್ ಪ್ರೊಡಕ್ಷನ್ ಜೊತೆ ಸೇರಿ 'ಟಾಕ್ಸಿಕ್' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಇನ್ನು ನಿಮಿತ್ ಮಲ್ಹೋತ್ರಾ ಜೊತೆ ರಾಮಾಯಣ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಅಷ್ಟೇಅಲ್ಲ ಚಿತ್ರದಲ್ಲಿ ರಾವಣ ಪಾತ್ರವನ್ನು ಮಾಡುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Shahrukh Khan reacts on Rocking star Yash movies;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X