ಶಾರುಖ್ 'ಜಬ್ ತಕ್ ಹೇ ಜಾನ್' ಓಪನಿಂಗ್ ಡೇ ಗಳಿಕೆ

Shahrukh Khan
ದಿವಂಗತ ನಿರ್ದೇಶಕ ಯಶ್ ಚೋಪ್ರಾ ಕೊನೆಯ ನಿರ್ದೇಶನದ 'ಜಬ್ ತಕ್ ಹೇ ಜಾನ್' ಚಿತ್ರವು ಸಾಕಷ್ಟು ನಿರೀಕ್ಷೆ ಹಾಗೂ ಉತ್ತಮ ಪ್ರತಿಕ್ರಿಯೆಗಳ ಮಧ್ಯೆ ಉತ್ತಮ' ಎನ್ನಬಹುದಾದ ಕಲೆಕ್ಷನ್ ದಾಖಲಿಸಿದೆ. ಶಾರುಖ್ ಖಾನ್ ನಾಯಕತ್ವದ ಈ ಚಿತ್ರದಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದು ಅನುಷ್ಕಾ ಶರ್ಮ ಕೂಡ ಇದ್ದಾರೆ. ಈ ಚಿತ್ರವು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ರೆಸ್ಪಾನ್ಸ್ ಗಳಿಸದೆ.

ಈ ಚಿತ್ರವು ಬಿಡುಗಡೆಯಾದ ಮೊದಲ ದಿನ (13 ನವೆಂಬರ್ 2012) ರಂದು ರು. 15.23 ಕೋಟಿ ಗಳಿಸಿದೆ. ಇದೇ ದಿನ ಬಿಡುಗಡೆಯಾದ ಅಜಯ್ ದೇವಗನ್ ನಾಯಕತ್ವದ 'ಸನ್ ಆಫ್ ಸರ್ದಾರ್' ಚಿತ್ರದ ಗಳಿಕೆ ಶಾರೂಕ್ ಖಾನ್ ರ 'ಜಬ್ ತಕ್ ಹೇ ಜಾನ್' ಚಿತ್ರದಷ್ಟು ಆಗಿಲ್ಲ. ಪಕ್ಕಾ ಮಾಹಿತಿಯಲ್ಲವಾದರೂ ಜಬ್ ತಕ್ ಹೇ ಜಾನ್ ಗಳಿಕೆಯಲ್ಲಿ ಮುಂದಿದೆ ಎಂಬ ಪಕ್ಕಾ ಮಾಹಿತಿಯಿದೆ. ಅಷ್ಟೇ ಅಲ್ಲ, 'ಜಬ್ ತಕ್...'ಚಿತ್ರವು 2500 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.

ಆದರೆ ಈ ಚಿತ್ರವು ಇದೇ ಯಶ್ ಚೋಪ್ರಾ ಬ್ಯಾನರಿನಲ್ಲಿ ಈ ಮೊದಲು ಬಂದಿದ್ದ ಸಲ್ಮಾನ್ ಖಾನ್ 'ಏಕ್ ಥಾ ಟೈಗರ್' ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಹಿಂದಿಕ್ಕಲು ವಿಫಲವಾಗಿದೆ. ಈ ಚಿತ್ರವು ರು. 15.23 ಕೋಟಿ ಗಳಿಸಿದ್ದರೆ ಸಲ್ಲೂರ 'ಏಕ್ ಥಾ ಟೈಗರ್' ಚಿತ್ರವು ರು. 32.92 ಕೋಟಿ ಗಳಿಸಿತ್ತು. 'ಜಬ್ ತಕ್ ಹೇ ಜಾನ್' ಚಿತ್ರವು ಅದರ ಅರ್ಧದಷ್ಟು ಗಳಿಸಿದಂತಾಗಿದೆ. ಎರಡೂ ಚಿತ್ರಗಳೂ ಯಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವುದರಿಂದ ಹೋಲಿಕೆ ಸಹಜ.

'ಜಬ್ ತಕ್ ಹೇ ಜಾನ್' ಚಿತ್ರವು ಮೈಸೂರು, ಪಶ್ಚಿಮ ಬಂಗಾಳ ಹಾಗೂ ನೋಯ್ಡಾಗಳಲ್ಲಿ ಬಹಳಷ್ಟು ಸದ್ದು ಮಾಡಿದ್ದರೂ ಆ ಮಟ್ಟಿಗೆ ಬಾಕ್ಸ್ ಆಫೀಸ್ ನಲ್ಲಿ ಮಿಂಚಿಲ್ಲ ಎನ್ನಬಹುದು. ಮೊದಲ ದಿನದ ಗಳಿಕೆಯೊಂದೇ ಮಾನದಂಡವಲ್ಲದಿದ್ದರೂ ರು. 15.23 ಕೋಟಿ ಮೊತ್ತವು ಅತ್ಯದ್ಭುತ ಎನ್ನುವಂತೇನೂ ಇಲ್ಲ. ಸಲ್ಮಾನ್ ಖಾನ್ ಅವರ 'ಏಕ್ ಥಾ ಟೈಗರ್' ಚಿತ್ರವು ಒಂದು ವಾರದಲ್ಲಿ ರು. 100 ಕೋಟಿ ದಾಟಿತ್ತು. 'ಜಬ್ ತಕ್ ಹೇ ಜಾನ್' ಕಥೆ ಏನು ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)

More from Filmibeat

English summary
Shahrukh Khan movie Jab Tak Hai Jaan (JTHJ) failed to beat first day business collection record of Salman Khan film Ek Tha Tiger (ETT) at Indian Box Office.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X