ಗೌತಮ್ ಗಂಭೀರ್ ಹಣೆಗೆ ಮುತ್ತಿಟ್ಟ ಶಾರುಖ್ ಖಾನ್ ಬ್ಲಾಂಕ್ ಚೆಕ್ ಕೊಟ್ಟಿದ್ದು ನಿಜವೇ?

ಐಪಿಎಲ್ 2024 ಟೂರ್ನಿಗೆ ತೆರೆ ಬಿದ್ದಿದೆ. ಅಂತಿಮ ಹಣಾಹಣಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ಪಂದ್ಯದಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿದಿದೆ. ಶಾರುಖ್ ಖಾನ್ ಒಡೆತನದ ತಂಡ 3ನೇ ಬಾರಿ ಚಾಂಪಿಯನ್ ಆಗಿದೆ. ಪಂದ್ಯ ಗೆಲ್ಲುತ್ತಿದ್ದಂತೆ ಕಿಂಗ್ ಖಾನ್ ಸಂತಸಕ್ಕೆ ಪಾರವೇ ಇರಲಿಲ್ಲ.

ಮೈದಾನಕ್ಕಿಳಿದ ಶಾರುಖ್ ಖಾನ್ ಆಪ್ತರಿಗೆ ಮುತ್ತು ನೀಡಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂದೆ ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 113 ರನ್‌ಗಳಿಗೆ ಆಲೌಟಾಯಿತು. ಕೆಕೆಆರ್ ಕೇವಲ 2 ವಿಕೆಟ್ ಕಳೆದುಕೊಂಡು 10.3 ಓವರ್‌ಗಳಲ್ಲಿ ಗುರಿ ತಲುಪಿ ಟ್ರೋಫಿ ತನ್ನದಾಗಿಸಿಕೊಂಡಿತು.

ShahRukh Khan kissed Gautam Gambhir s forehead after KKR crowned 3rd time champs

ಬರೋಬ್ಬರಿ 10 ವರ್ಷಗಳ ಬಳಿಕ ಕೆಕೆಆರ್ ಮತ್ತೊಮ್ಮೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಶ್ರೇಯಸ್ ಅಯ್ಯರ್ ತಂಡ ಸಂಭ್ರಮಿಸಿತು. ಇದಕ್ಕೂ ಮೊದಲು 2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಮತ್ತೊಮ್ಮೆ ಗಂಭೀರ್ ಮೂರನೇ ಬಾರಿ ತಂಡಕ್ಕೆ ಟ್ರೋಫಿ ಗೆದ್ದು ಕೊಡಲು ಕೆಕೆಆರ್‌ನ ಮೆಂಟರ್ ಆಗಿ ಬಂದಂತಾಗಿದೆ.

ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಮುಂದೆ ಆ ಸ್ಥಾನವನ್ನು ಯಾರು ತುಂಬುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹೆಸರು ಕೇಳಿಬರ್ತಿದೆ. ಕೆಕೆಆರ್‌ ತಂಡದ ಕೋಚ್ ಆಗಿ ಗೌತಮ್ ಸಾಧನೆ ಕಂಡು ಶಾರುಖ್ ಖಾನ್ ಫಿದಾ ಆಗಿದ್ದಾರೆ. ಬ್ಲಾಂಕ್ ಚೆಕ್ ಕೊಟ್ಟು ಮುಂದಿನ 10 ವರ್ಷ ತಮ್ಮ ತಂಡದ ಕೋಚ್ ಆಗಿರುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗ್ತಿದೆ.

ಗಂಭೀರ್ ಕೆಕೆಆರ್‌ ತಂಡಕ್ಕೆ ಮರಳುತ್ತಿದ್ದಂತೆ ಈ ಬಾರಿಯ ಟೂರ್ನಿಯಲ್ಲಿ ತಂಡ ಅದ್ಭುತ ಸಾಧನೆ ಮಾಡಿದೆ. 9 ಪಂದ್ಯ ಗೆದ್ದು ಟೂರ್ನಿಯಲ್ಲಿ ಅಗ್ರಸ್ಥಾನಕ್ಕೆ ಏರಿತ್ತು. ಕ್ವಾಲಿಫೈಯರ್ 1 ಹಾಗೂ ಫೈನಲ್ ಪಂದ್ಯಗಳಲ್ಲಿ ಕೂಡ ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿದೆ. ಪಂದ್ಯದ ಬಳಿಕ ಶಾರುಖ್ ಖಾನ್ ತಮ್ಮ ಆಟಗಾರರ ಅದ್ಭುತ ಗೆಲುವನ್ನು ಅಭಿನಂದಿಸಲು ಮೈದಾನಕ್ಕೆ ಬಂದರು. ಈ ಕ್ರಮದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸದಸ್ಯರನ್ನು ಅಪ್ಪಿಕೊಳ್ಳುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಪ್ರೀತಿ ತೋರಿದರು.

ತಂಡದ ಕೋಚ್ ಗೌತಮ್ ಗಂಭೀರ್ ಅವರನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗೌತಮ್ ಗಂಭರ್ ಮುಂದೆ ಭಾರತ ಕ್ರಿಕೆಟ್ ತಂಡದ ಸ್ಥಾನ ಅಲಂಕರಿಸುತ್ತಾರಾ? ಅಥವಾ ಕೆಕೆಆರ್ ಮೆಂಟರ್ ಆಗಿ ಮುಂದುವರೆಯುತ್ತಾರಾ? ಕಾದು ನೋಡಬೇಕಿದೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯಕ್ಕೆ ಶಾರುಖ್ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳಲ್ಲಿ ಕಿಂಗ್ ಖಾನ್ ನಟಿಸಿದ್ದರು. ಈ ವರ್ಷ ಶಾರುಖ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ವರ್ಷವೇ ತೆರೆಮೇಲೆ ಶಾರುಖ್ ದರ್ಬಾರ್ ನಡೆಯಲಿದೆ.

More from Filmibeat

English summary
Did ShahRukh Khan Offer Blank Cheque to Gautam Gambhir for Staying As KKR Mentor?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X