ಶಾರುಖ್ ನನ್ನ ಗೆಳೆಯನಲ್ಲ, ಗೌರಿ ಗೆಳತಿ; ಕರಣ್ ಜೋಹರ್

ಶಾರುಖ್ ಖಾನ್ ಹಾಗೂ ನಾನು ಆತ್ಮೀಯ ಸ್ನೇಹಿತರಲ್ಲ. ಬಹಳಷ್ಟು ಜನರು ಅಂದುಕೊಂಡಂತೆ ನನ್ನ ಗೆಳೆತನ ಇರುವುದು ಶಾರುಖ್ ಜೊತೆಯಲ್ಲಲ್ಲ, ಬದಲಿಗೆ ಗೌರಿ ಖಾನ್ ನನ್ನ ಸ್ನೇಹಿತೆ" ಹೀಗೆಂದು ಹೇಳಿಕೆ ನೀಡಿರುವುದು ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್. ಅವರ ಹೇಳಿಕೆಯಿಂದ ಬಾಲಿವುಡ್ ನಲ್ಲೀಗ ಅಚ್ಚರಿಯೆಂಬ ಮಿಂಚಿನ ಸಂಚಾರವಾಗಿದೆ. ಕಾರಣ ಇಡೀ ಬಾಲಿವುಡ್, ಶಾರುಖ್ ಹಾಗೂ ಕರಣ್ ಸ್ನೇಹಿತರು ಅಂದುಕೊಂಡಿತ್ತು.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಈ ಗುಟ್ಟು ಬಿಚ್ಚಿಟ್ಟಿದ್ದಾರೆ. "ನಾನು ಮೊದಲು ಭೇಟಿಯಾಗಿದ್ದು ಶಾರುಖ್ ಅವರನ್ನೇ ಆದರೂ ನಾನು ಗೌರಿ ಖಾನ್ ಸ್ನೇಹಿತ. ಶಾರುಖ್ ಖಾನ್ ಬಗ್ಗೆ ನನಗೆ ಗೌರವವಿದೆ. ಆದರೆ ಗೌರಿ ನನಗೆ ಆದರ್ಶ, ನನ್ನ ಗೆಳತಿ ಹಾಗೂ ನನ್ನ ಜೀವನದಲ್ಲಿನ ಒಬ್ಬ ಪ್ರಮುಖ ವ್ಯಕ್ತಿ. ಇದನ್ನು ಯಾರೂ ಬದಲಾಯಿಸಲಾರರು. ನನ್ನ ತಾಯಿಗಿರುವ ಮೂವರು ಹೆಣ್ಣುಮಕ್ಕಳ ಹೆಸರುಗಳನ್ನು ಹೇಳಿದರೆ ಈ ವಿಷಯ ಸ್ಪಷ್ಟವಾಗುತ್ತದೆ.

ಕಾಜಲ್ ಆನಂದ್, ಗೌರಿ ಖಾನ್ ಹಾಗೂ ಶ್ವೇತಾ ಬಚ್ಚನ್ ನಂದಾ ಇವರೇ ನಮ್ಮಮ್ಮನ ಆ ಮೂರು ಹೆಣ್ಣುಮಕ್ಕಳು. ನಮ್ಮಮ್ಮನಿಗೆ ಅವರ ನಿಜವಾದ ಹೆಣ್ಣುಮಕ್ಕಳಿಗಿಂತ ಅವರುಗಳೇ ಹೆಚ್ಚು. ಹೀಗಾಗಿ ನನಗೆ ಸಹಜವಾಗಿಯೇ ಗೌರಿ ಖಾನ್ ಜೊತೆ ಸ್ನೇಹ ಹೆಚ್ಚು. ಆದರೆ ಶಾರುಖ್ ಜೊತೆ ನನಗೆ ಒಡನಾಟವಿದೆ ಅಷ್ಟೇ. ಅದು ನನಗಿಂತ ಹಿರಿಯ ಅಣ್ಣನ ಜೊತೆ ಇರುವಷ್ಟು ಮಾತ್ರ. ನಾನು ಶಾರುಖ್ ರೂಮ್ ಗೆ ಹೋದರೆ ಅವರು ಕುಳಿತುಕೋ ಅಂದರೆ ಮಾತ್ರ ನಾನು ಕುಳಿತುಕೊಳ್ಳುತ್ತೇನೆ, ಇಲ್ಲದಿದ್ದರೆ ನಿಂತೇ ಇರುತ್ತೇನೆ. ಇಷ್ಟು ಹೇಳಿದರೆ ನಮ್ಮಿಬ್ಬರ ಸಂಬಂಧ ನಿಮಗೆಲ್ಲಾ ಅರ್ಥವಾಗಬಹುದು" ಎಂದಿದ್ದಾರೆ.

ಮುಂದುವರಿದ ಕರಣ್, "ನಾನು ಶಾರುಖ್ ಅವರಿಗೆ ಎಂದೂ ಅಡ್ವೈಸ್ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಅವರು ಹೇಳಿದ್ದನ್ನಷ್ಟೇ ಕೇಳಿ ಸುಮ್ಮನಾಗುತ್ತೇನೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ನನ್ನ ಹಾಗೂ ಶಾರುಖ್ ಗೆಳೆತನ 'ಒನ್ ವೇ' ಇದ್ದ ಹಾಗೆ. ನನಗೆ ಅವರ ಬಗ್ಗೆ ಬಹಳಷ್ಟು ಗೌರವವಿದೆ. ಆದರೆ ನಮ್ಮಪ್ಪ ಹಾಗೂ ಶಾರುಖ್ ಮಧ್ಯೆ ಸ್ನೇಹ ಹಾಗೂ ಸಂಬಂಧ ಗಟ್ಟಿಯಾಗಿದೆ. ನನಗೇನಿದ್ದರೂ ಗೌರಿ ಸ್ನೇಹಿತೆ ಅಷ್ಟೇ" ಅಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Many people think that Shahrukh Khan and Karan Johar are best friends but Karan Johar says that Shahrukh Khan is not his friend his wife Gauri is.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X