Jawan: ಅಯ್ಯೋ.. ಸೋಮಾರಿ ಶಾರುಖ್ ಬೋಳು ತಲೆಯಲ್ಲಿ ದರ್ಶನ: ಅದೇ 'ಜವಾನ್' ಲುಕ್ ಫೇಮಸ್ ಆಗ್ಬಿಡ್ತಾ?
ಕೆಲವೊಮ್ಮೆ ಏನೋ ಮಾಡೋಕೆ ಹೋಗಿ ಮತ್ತೇನೋ ಆಗಿಬಿಡುತ್ತೆ. ಯಾವಾಗ ಯಾವುದು ಹಿಟ್ ಆಗುತ್ತೆ? ಸಕ್ಸಸ್ ಆಗುತ್ತೋ ಹೇಳೋಕ್ಕಾಗಲ್ಲ. ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಸಿನಿಮಾ 650 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಭಿಮಾನಿಗಳಂತೂ ಸಿನಿಮಾ ನೋಡಿ ಖುಷಿಯಾಗಿದ್ದಾರೆ.
ಅಟ್ಲಿ ನಿರ್ದೇಶನ, ಕಿಂಗ್ ಖಾನ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡುಗರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ರಾಬಿನ್ ಹುಡ್ ಶೈಲಿಯ ಹೀರೊ ಆಗಿ ಶಾರುಖ್ ದರ್ಬಾರ್ ನಡೆಸಿದ್ದಾರೆ. ಡಬಲ್ ರೋಲ್‌ನಲ್ಲಿ ಡಬಲ್ ಕಿಕ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಲುಕ್‌ಗಳಲ್ಲಿ ಬಾಲಿವುಡ್ ಬಾದ್‌ಶಾ ಮಿಂಚಿದ್ದಾರೆ. ಅದರಲ್ಲೂ ಬೋಳು ತಲೆಯ ಲುಕ್ ಸಖತ್ ಮಜವಾಗಿದೆ. ಅಭಿಮಾನಿಗಳಿಗೆ ಆ ಲುಕ್ ಇಷ್ಟವಾಗಿದೆ.

'ಜವಾನ್' ಚಿತ್ರದ ತಮ್ಮ ಬೋಳು ತಲೆಯ ಲುಕ್ ಬಗ್ಗೆ ಸ್ವತಃ ಶಾರುಖ್ ಖಾನ್ ಮಾತನಾಡಿದ್ದಾರೆ. ಸ್ಕ್ರಿಪ್ಟ್‌ನಲ್ಲಿ ಅದು ಇರಲಿಲ್ಲ. ಆದರೂ ಟ್ರೈ ಮಾಡಿದ್ವಿ. ಅದಕ್ಕೆ ನನ್ನ ಸೋಮಾರಿತನ ಕಾರಣ ಎಂದು ಕಿಂಗ್‌ಖಾನ್ ವಿವರಿಸಿದ್ದಾರೆ. ಒಂದ್ಕಾಲದಲ್ಲಿ ಬಾಲಿವುಡ್ ರೊಮ್ಯಾಂಟಿಕ್ ಹೀರೊ ಆಗಿದ್ದ ಶಾರುಖ್ ಬಳಿಕ ಆಕ್ಷನ್ ಸಿನಿಮಾಗಳಲ್ಲೂ ನಟಿಸಿ ಗೆದ್ದರು. ಉದ್ದ ಕೂದಲು ಬಿಟ್ಟು ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಹಿಂದೆದೂ ಕಾಣಿಸಿಕೊಳ್ಳದ ರೀತಿಯಲ್ಲಿ ಬೋಳು ತಲೆಯಲ್ಲಿ ದರ್ಶನ ಕೊಟ್ಟು ಈ ಬಾರಿ ಶಾಕ್ ಕೊಟ್ಟಿದ್ದಾರೆ.
ಚಿತ್ರದಲ್ಲಿನ ಈ ಬೋಳು ತಲೆ ಲುಕ್, ಕೆಲವು ದೃಶ್ಯಗಳಲ್ಲಿ ಆ್ಯಂಟಿ ಹೀರೋ ಆಗಿ ನಟಿಸುವುದು, ಗರ್ಲ್ ಸ್ಕ್ವಾಡ್ ಇರುವುದು ಹೀಗೆ ಕುತೂಹಲಕಾರಿ ವಿಷಯಗಳ ಕಿಂಗ್ ಖಾನ್ ಮಾತನಾಡಿದ್ದಾರೆ. 'ಜವಾನ್' ಚಿತ್ರದಲ್ಲಿ ಬೋಳು ತೆಲಯಲ್ಲಿ ನಟಿಸಬೇಕು ಎಂದಾ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? ಎನ್ನುವ ಪ್ರಶ್ನೆಗೆ ಕೇವಲ ಸೋಮಾರಿತನದಿಂದ ಈ ಚಿತ್ರದಲ್ಲಿ ಆ ಲುಕ್ ಆಯ್ಕೆ ಮಾಡಿಕೊಂಡೆ ಎಂದುಬಿಟ್ಟಿದ್ದಾರೆ. "ಈ ಲುಕ್ ಸ್ಕ್ರಿಪ್ಟ್‌ನ ಭಾಗವಲ್ಲ. ಇದು ಸ್ಕ್ರಿಪ್ಟ್‌ನಲ್ಲಿದ್ದ ಗೆಟಪ್‌ಗಳ ಒಂದು ಭಾಗ ಅಷ್ಟೆ. ನಾನು ಸೋಮಾರಿತನದಿಂದ ಈ ಶೇವ್ ಲುಕ್ ಅನ್ನು ಆಯ್ಕೆ ಮಾಡಿಕೊಂಡೆ. ಏಕೆಂದರೆ ನಾನು ಈ ಲುಕ್ ಅನ್ನು ಆರಿಸಿದರೆ ಎರಡು ಗಂಟೆಗಳ ಕಾಲ ಮೇಕಪ್ ಮಾಡುವ ಅಗತ್ಯವಿರಲಿಲ್ಲ. ಅದಕ್ಕಾಗಿಯೇ ನಾನು ಆ ಲುಕ್‌ನಲ್ಲಿ ಕೆಲವು ದೃಶ್ಯಗಳನ್ನು ಮಾಡಿದ್ದೇನೆ" ಎಂದಿದ್ದಾರೆ.

ಈ ಲುಕ್‌ಗೆ ಸಂಬಂಧಿಸಿದ ಕೆಲ ಪ್ರೋಮೊಗಳನ್ನು ನನ್ನ ಸ್ನೇಹಿತರಿಗೆ ತೋರಿಸಿದೆ. ಅದನ್ನು ನೋಡಿ ಲುಕ್ ತುಂಬಾ ಭಯಾನಕವಾಗಿದೆ. ಇದನ್ನು ಹುಡುಗಿಯರು ಇಷ್ಟಪಡುವುದಿಲ್ಲ ಎಂದರು. ಹುಡುಗಿಯರು ಖಂಡಿತ ಈ ಲುಕ್‌ನಲ್ಲಿ ನನ್ನನ್ನು ಖಂಡಿತ ಇಷ್ಟಪಡುತ್ತಾರೆ ಎಂದುಕೊಂಡಿದ್ದೇನೆ. ನನ್ನನ್ನು ಮಾತ್ರವಲ್ಲ ತಲೆ ಬೋಳಿಸಿದ ಹುಡುಗರನ್ನು ಹುಡುಗಿಯರಿಗೆ ಇಷ್ಟ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನನಗೂ ತಲೆ ಬೋಳಿಸಿದ ಹುಡುಗಿಯರು ಅಂದ್ರೆ ಇಷ್ಟ" ಎಂದು ತಮಾಷೆ ಮಾಡಿದ್ದಾರೆ.
ಅಂದಹಾಗೆ ಚಿತ್ರದಲ್ಲಿ ಶಾರುಖ್, ಮೆಟ್ರೋ ರೈಲು ಹೈಜಾಕ್ ಸನ್ನಿವೇಶದಲ್ಲಿ ಬೋಳು ತಲೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಕ್ಲೈಮ್ಯಾಕ್ಸ್‌ನಲ್ಲಿ ಮತಯಂತ್ರ ಕದ್ದ ಸಂಜಯ್ ದತ್ ಭೇಟಿ ವೇಳೆ ಅದೇ ಲುಕ್ ರಿಪೀಟ್ ಆಗುತ್ತದೆ. ಇನ್ನು ಆ್ಯಂಟಿ ಹೀರೋ ಪಾತ್ರದ ಬಗ್ಗೆ ಮಾತನಾಡಿರುವ ಶಾರುಖ್, "ವಾಸ್ತವವಾಗಿ, ನಾನು ಹೀರೋ ಆಗಿ ನಟಿಸುವ ಬಗ್ಗೆ ಯೋಚಿಸಿರಲಿಲ್ಲ. ಹೀರೋಗಳು ಬರೀ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ನನಗೆ ತುಂಬಾ ಬೋರಿಂಗ್ ಎನಿಸುತ್ತದೆ. ಒಳ್ಳೆಯದನ್ನು ಮಾಡಲು, ಅದನ್ನು ಅರ್ಥಮಾಡಿಕೊಳ್ಳಲು ನಾನು ತಕ್ಷಣ ಕೆಟ್ಟವನಾಗಬೇಕು. ಅದರಿಂದ ನಾನು ಮತ್ತೆ ಒಳ್ಳೆಯವನಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ, ನಾನು ಮಾಡುತ್ತೇನೆ, ಕೆಲವೊಮ್ಮೆ ಒಳ್ಳೆಯವನಾಗಿರುವುದು ಬೋರ್ ಎನಿಸುತ್ತದೆ. ವೈಯಕ್ತಿಕವಾಗಿ, ನಾನು ಆಂಟಿ-ಹೀರೋ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ. ಏಕೆಂದರೆ 'ಐ ಲವ್ ಬ್ಯಾಡ್ ಗಾಯ್ಸ್' ಎಂದಿದ್ದಾರೆ.


Click it and Unblock the Notifications











